ಬೀದರ್: ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಮಾಲತಿ ಖೇಣಿ ಅವರ ಸ್ಮರಣಾರ್ಥವಾಗಿ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಂಡಗಳಿಗೆ ಆಯೋಜಿಸಿರುವ ನೈಸ್ ಕ್ರಿಕೆಟ್ ಟೂರ್ನಮೆಂಟ್ಗೆ ಖ್ಯಾತ ಚಿತ್ರನಟ ಶಿವರಾಜ್ಕುಮಾರ ಚಾಲನೆ ನೀಡಿದರು.
ಅಶೋಕ ಖೇಣಿ ಅವರು ತಮ್ಮ ತಾಯಿ ಅವರ ಸ್ಮರಣಾರ್ಥವಾಗಿ ಕ್ರಿಕೆಟ್ ಟೂರ್ನಮೆಂಟ್ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಖೇಣಿ ಅವರು ಶಾಸಕರಾಗಿದ್ದ ಅವಧಿಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದರು. ಕ್ಷೇತ್ರದ ಅಭಿವೃದ್ಧಿಗಾಗಿ ಜನ ಅವರನ್ನು ಬೆಂಬಲಿಸಬೇಕು ಎಂದರು.
ಕ್ರಿಡೆಯಲ್ಲಿ ಭಾಗವಹಿಸುವ ಸ್ಪರ್ಧಾರ್ಥಿಗಳಲ್ಲಿ ಕ್ರಿಡಾ ಮನೋಬಾವ ಹುಟ್ಟುತದೆ ಎಂದರು.
ಈ ಕಾರ್ಯಕ್ರಮಕ್ಕೆ ಕರುನಾಡ ಚಕ್ರವರ್ತಿ ಡಾ ರಾಜಕುಮಾರ ಅವರ ಕುಡಿ ನಮ್ಮೆಲ್ಲರ ಮುಂದೆ ಬಂದಿದ್ದಾರೆ. ಅವರ ತಮ್ಮ ಅಪ್ಪು ಅವರು ಹತ್ತಾರು ಸಮಾಜಮುಖಿ ಕೆಲಸಗಳನ್ನು ಮಾಡಿದ್ದರು.ರಾಜಕುಮಾರ ಮನೆತನ ನಮ್ಮ ಕರ್ನಾಟಕಕ್ಕೆ ಮಾದರಿ ಕುಟುಂಬವಾಗಿದೆ. ಶಿವರಾಜಕುಮಾರ ಅವರು ಯಾವತ್ತು ನಾನು ದೊಡ್ಮನೆಯವರು ಎಂದು ನಡೆದುಕೊಂಡಿಲ್ಲ.ನಮ್ಮೆಲ್ಲರಲ್ಲಿ ಅವರೊಬ್ಬರಾಗಿ ನಮ್ಮ ಜೊತೆಗಿದ್ದಾರೆ ಎಂದರು.
ನಮ್ಮ ಬೀದರ ಜಿಲ್ಲೆಯಿಂದ ಕ್ರಿಡೆಯಲ್ಲಿ ದೊಡ್ಡ ಸಾಧನೆ ಮಾಡಿ ನಮ್ಮ ಜಿಲ್ಲೆಗೆ ಹೆಸರು ತರಲಿ ಎಂದು ಆಶೀಸಿದರು.
ಮಾಜಿ ಶಾಸಕ ಅಶೋಕ ಖೇಣಿ ಮಾತನಾಡಿ, ಬೀದರ್ ದಕ್ಷಿಣ ಕ್ಷೇತ್ರದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ. ವಿಜೇತ ತಂಡಕ್ಕೆ ₹ 2 ಲಕ್ಷ, ರನ್ನರ್ ಅಪ್ ತಂಡಕ್ಕೆ ₹ 1 ಲಕ್ಷ ಹಾಗೂ ಮೂರನೇ ಸ್ಥಾನ ಪಡೆಯುವ ತಂಡಕ್ಕೆ ₹ 50 ಸಾವಿರ ಹಾಗೂ ಟ್ರೋಫಿ ನೀಡಲಾಗುವುದು ಎಂದು ತಿಳಿಸಿದರು.
ಮುಂದಿನ ವರ್ಷ ನಗದು ಬಹುಮಾನ ಮೊತ್ತ ಹೆಚ್ಚಿಸಲಾಗುವುದು ಎಂದು ಹೇಳಿದರು. ಮಾಜಿ ಸಚಿವರು ಹಾಲಿ ಶಾಸಕರಾದ ರಹೀಮಖಾನ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ನಿವೆಲ್ಲರೂ ಅಶೋಕ ಖೇಣಿ ಅವರ ಕೈ ಬಲಪಡಿಸಬೇಕು. ಅವರ ಜೊತೆಗೆ ತಾವೆಲ್ಲರೂ ಇರಬೇಕು ಎಂದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ, ಅಶೋಕ ಖೇಣಿ ಅವರಂತ ಮಗನ ಪಡೆದ ಮಾಲತಿ ತಾಯಿ ಪುಣ್ಯವಂತರು ಯಾಕೆಂದರೆ ತಾಯಿ ಮರೆಯಾದ ಮೇಲೆ ಅವರ ಸ್ಮರಣಿಕೆಗಾಗಿ ಈ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಸಂತಸ ತಂದಿದೆ ಎಂದರು. ನಂತರ ಸಿನಿಮಾ ಹಾಡುಗಳಿಂದ ನೇರದಿದ್ದ ಅಭಿಮಾನಿಗಳಿಗೆ ರಂಜಿಸಿದರು.
ಗೀತಾ ಶಿವರಾಜ್ಕುಮಾರ, ಕೆಪಿಸಿಸಿ ಪ್ರಧಾನ ಮೀನಾಕ್ಷಿ ಸಂಗ್ರಾಮ, ಕಾಂಗ್ರೆಸ್ ಬೀದರ್ ದಕ್ಷಿಣ ಘಟಕದ ಅಧ್ಯಕ್ಷರಾದ ಚಂದ್ರಶೇಖರ ಚನಶೆಟ್ಟಿ, ಕರೀಂಸಾಬ್ ಕಮಠಾಣ, ಇದ್ದರು.