ಬೀದರ : ಖಾಸಗಿ ಸಂದರ್ಶನದಲ್ಲಿ ಮಾಜಿ ಶಾಸಕ ಅಶೋಕ್ ಖೇಣಿ ಮಂದಿರ ಹಾಗೂ ಮಸೀದಿಗಳಲ್ಲಿ ಸಾರಾಯಿ ಮಾರಾಟವಾಗುತ್ತಿದೆ ಎಂಬ ಹೇಳಿಕೆಯನ್ನು ಖಂಡಿಸಿ ಬಗದಲ್ ಗ್ರಾಮದ ಹಿಂದು, ಮುಸ್ಲಿಂ ಸಮುದಾಯದವರು ಬೃಹತ್ ಪ್ರತಿಭಟನೆ ನಡೆಸಿದರು.
ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಪವಿತ್ರ ಧಾರ್ಮಿಕ ಸ್ಥಳಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಖೇಣಿ ವಿರುದ್ಧ ಘೋಷಣೆ ಕೂಗಿದರು . ಖೇಣಿಯನ್ನು ಸಾಮಾಜಿಕ ಬಹಿಷ್ಕಾರ ಹಾಕಿ ಗಡಿಪಾರ್ ಮಾಡುವಂತೆ ಆಗ್ರಹಿಸಿದರು.
ಖೇಣಿಯ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಭಾವಚಿತ್ರವನ್ನು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು
ತಾಜೋದ್ದೀನ್ ,ಸದಸ್ಯ ಮುಕೀಮ್ , ಗ್ರಾಪಂ ಸೈಯದ್ ಮ ರಿಯಾಜ್ , ಶಿವರಾಜ ಕೊಡಗಿ , ಮಾಜಿ ತಾಪಂ ಸದಸ್ಯ ರಾಜಪ್ಪ , ಐಜಾಜ್ , ಜಮೀಲ್ ಪಟೇಲ್ , ಗೌತಮ್ ಬಗದಲ್ , ಗ್ರಾಪಂ ಸದಸ್ಯ ಪ್ರಭು , ಸಲಾಮ್ ಭಾಯಿ , ನೂರ್ ಷಾ , ಗ್ರಾಪಂ ಮಾಜಿ ಉಪಾಧ್ಯಕ್ಷ ಪಂಡಿತ್ , ಐಸಾ ಮಿಯಾ , ವಝೀರ್ ಖಾನ , ಸಂತೋಷ್ ಮೇತ್ರೆ , ಹಮೀದ್ ಬಗದಲ್ , ಸಂತೋಷ್ ವಗ್ಗೆ ಸೇರಿದಂತೆ ಇತರರಿದ್ದರು .