News Kannada
Sunday, February 05 2023

ಬೀದರ್

ಬೀದರ್: ಇಬ್ಬರು ಮಕ್ಕಳಿಗೆ ವಿಷ ಉಣಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ತಾಯಿ

Bidar: A mother committed suicide by hanging herself after poisoning her two children.
Photo Credit : Pixabay

ಬೀದರ್: ಮಾನಸಿಕ ಕ್ಷೋಭೆಯೋ, ಕೌಟುಂಬಿಕ ಹಿಂಸೆಯೋ, ಬದುಕೇ ಭಾರವಾದ ಹತಾಶೆಯೋ ಗೊತ್ತಿಲ್ಲ.. ತಾಯಿಯೊಬ್ಬಳು ತನ್ನ ಇಬ್ಬರು ಕರುಳ ಕುಡಿಗಳಿಗೆ ವಿಷ ಉಣಿಸಿ ತಾನು ನೇಣಿಗೆ ಶರಣಾಗಿದ್ದಾಳೆ.

ಬೀದರ್‌ ಜಿಲ್ಲೆಯ ಭಾಲ್ಕಿ ತಾಲೂಕಿ ನಿಲಮನಳ್ಳಿ ತಾಂಡದಲ್ಲಿ ಈ ಘಟನೆ ನಡೆದಿದೆ.

25 ವರ್ಷದ ಮೀರಾಬಾಯಿ ತನ್ನ ಮೂರು ಮತ್ತು ಎರಡು ವರ್ಷದ ಮಕ್ಕಳಾದ ನಚ್ಚುಬಾಯಿ ಮತ್ತು ಗೋಲುಬಾಯಿಗೆ ವಿಷ ಉಣಿಸಿದ್ದಾರೆ. ಅವೆರಡೂ ನಿದ್ದೆಯಲ್ಲೇ ಉಸಿರು ನಿಲ್ಲಿಸುತ್ತಿದ್ದಂತೆಯೇ ಮೀರಾಬಾಯಿ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತಾಯಿಯ ಈ ಅತಿರೇಕದ ಕ್ರಮಕ್ಕೆ ಕೌಟುಂಬಿಕ ಕಲಹ ಕಾರಣ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಧನ್ನೂರು ಪೊಲೀಸರು ದೌಡಾಯಿಸಿದ್ದಾರೆ. ಗಂಡನ ಮನೆಯವರ ಹಿಂಸೆ, ಮಾನಸಿಕ ಒತ್ತಡ ತಡೆಯಲಾಗದೆ ಮೀರಾಬಾಯಿ ಈ ಕೃತ್ಯ ನಡೆಸಿದ್ದಾರೆ ಎಂಬ ಮಾತು ಪರಿಸರದಲ್ಲಿ ಕೇಳಿಬರುತ್ತಿದೆ. ಪೊಲೀಸರು ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಹಾಯವಾಣಿಗೆ ಕರೆ ಮಾಡಿ:

ನೀವು ಆತ್ಮಹತ್ಯೆಯ ಯೋಚನೆ ಮಾಡುತ್ತಿದ್ದರೆ ಅಥವಾ ಅಂತವರ ಕುರಿತು ನಿಮಗೆ ತಿಳಿದಿದ್ದರೆ, ಸಹಾಯ ಅಗತ್ಯವಿರುವ ಯಾರಾದರೂ, ಕರೆ ಮಾಡಿ ಸುಶೇಗ್ ಚಾರಿಟೇಬಲ್ ಟ್ರಸ್ಟ್ 0824-2983444 ಗೆ ಏಕೆಂದರೆ ಪ್ರತಿಯೊಬ್ಬರ ಜೀವವು ಅಮೂಲ್ಯವಾದ್ದದ್ದು

See also  ಬೀದರ್: ಗಮನ ಸೆಳೆದ ಫಲಪುಷ್ಪ ಪ್ರದರ್ಶನ , ಮಣ್ಣು - ನೀರು ಸಂರಕ್ಷಣೆ ಮಾದರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು