ಬೀದರ್: ಅರ್ಹ ಫಲಾನುಭವಿಗಳು ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯ ಲಾಭ ಪಡೆಯಬೇಕು ಎಂದು ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ಅಧ್ಯಕ್ಷರೂ ಆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.
ಬೀದರ್ ತಾಲ್ಲೂಕಿನ ಬೆನಕನಳ್ಳಿ, ಅಲಿಯಂಬರ್, ಹಿಪ್ಪಳಗಾಂವ್ ಗ್ರಾಮಗಳಲ್ಲಿ ಅರ್ಹ ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯ ಸ್ಮಾರ್ಟ್ ಕಾರ್ಡ್ ವಿತರಿಸಿ ಅವರು ಮಾತನಾಡಿದರು.
ಯೋಜನೆಯ ಕಾರ್ಡ್ ಹೊಂದಿದವರಿಗೆ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಸೇವೆ ದೊರೆಯಲಿದೆ. ಯೋಜನೆ ಬಡವರಿಗೆ ವರದಾನವಾಗಿದೆ ಎಂದು ತಿಳಿಸಿದರು.
ಫೌಂಡೇಷನ್ನಿಂದ ಯೋಜನೆಯಡಿ ಬೀದರ್ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಲಕ್ಷ ಅರ್ಹರ ಹೆಸರು ನೋಂದಣಿ ಹಾಗೂ ಸ್ಮಾರ್ಟ್ ಕಾರ್ಡ್ ವಿತರಣೆ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಬೀದರ್ನ ಮಂಗಲಪೇಟೆ, ಹಳ್ಳದೇಕೇರಿ, ನೌಬಾದ್, ನಾವದಗೇರಿ, ಶಹಾಪುರ ಗೇಟ್, ಲಾಡಗೇರಿ, ಮೈಲೂರು, ಅಬುಲ್ ಫೈಜ್ ದರ್ಗಾ, ಬಂಪಳ್ಳಿ, ಯರನಳ್ಳಿ, ರಾಜನಾಳ, ವಿಳಾಸಪುರ, ಜನವಾಡ, ಚಾಂಬೋಳ್, ದದ್ದಾಪುರ, ಇಸ್ಮಾಂಪುರ, ಮಾಳೆಗಾಂವ್, ಶ್ರೀಮಂಡಲ್ ಮೊದಲಾದ ಕಡೆಗಳಲ್ಲಿ ಈಗಾಗಲೇ ಅರ್ಹ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ತಲುಪಿಸಲಾಗಿದೆ ಎಂದು ಹೇಳಿದರು.
ಎನ್.ಎಸ್.ಎಸ್.ಕೆ ಉಪಾಧ್ಯಕ್ಷ ಬಾಲಾಜಿ ಚೌಹಾಣ್, ಮುಖಂಡರಾದ ರಾಜೇಂದ್ರ ಪೂಜಾರಿ, ಫರ್ನಾಂಡೀಸ್ ಹಿಪ್ಪಳಗಾಂವ್, ಅಶೋಕ ಚೌಹಾಣ್, ವೆಂಕಟರಾವ್ ಮಾಸ್ಟರ್, ರಾಮಶೆಟ್ಟಿ ಬಿರಾದಾರ, ಸಂತೋಷ ಕಾಳೆ, ಪಲರಾಜ ಹಿಪ್ಪಳಗಾಂವ್, ವಿಜಯಕುಮಾರ ಹಿಪ್ಪಳಗಾಂವ್, ಸಾಮ್ಸನ್ ಹಿಪ್ಪಳಗಾಂವ್, ಸಂಗಮೇಶ ಪಾಟೀಲ, ಸಿದ್ದು ಅಲಿಯಂಬರ್, ಮಹಾದೇವ ಬಿರಾದಾರ ಇದ್ದರು.