News Kannada
Sunday, February 05 2023

ಬೀದರ್

ಬೀದರ್: ಚಾಂಗಲೇರಾ ಗ್ರಾಮದಲ್ಲಿ ಬೃಹತ್ ಮಟ್ಟದಲ್ಲಿ ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆ

In Changalera village of Bidar South constituency, a large number of Congress members quit JD(S) to join BJP
Photo Credit : News Kannada

ಹುಮನಾಬಾದ /ಬೀದರ್: ದಕ್ಷಿಣ ಕ್ಷೇತ್ರದ ಚಾಂಗಲೇರಾ ಗ್ರಾಮದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಜೇಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು ಸೇರ್ಪಡೆಗೊಂಡ ಎಲ್ಲರನ್ನೂ ಪಕ್ಷದ ಧ್ವಜ ನೀಡಿ ಮಂಡಲದ ಅಧ್ಯಕ್ಷರಾದ ರಾಜರೆಡ್ಡಿ ಕೆ ಎಸ್ ಐ ಐ ಡಿ ಸಿ ಅಧ್ಯಕ್ಷರಾದ ಡಾ ಶೈಲೇಂದ್ರ ಬೆಲ್ದಾಳೆ ಪಕ್ಷಿಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಶೈಲೇಂದ್ರ ಬೆಲ್ದಾಳೆ ರವರು ಮಾತನಾಡಿ. ಬೀದರ್ ದಕ್ಷಿಣದಲ್ಲಿ ಈ ಬಾರಿ ಅಭಿವೃದ್ಧಿ ಪರ ಜನ ನಿಂತಿದ್ದರೆ ಜಾತಿ ರಾಜಕಾರಣ ಸುಳ್ಳು ರಾಜಕಾರಣಕ್ಕೆ ಸದೆಬಡೆದು ಅಭಿವೃದ್ಧಿ ಪರದ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ ವಿಜಯದ ಪತಾಕೆ ಹಾರಿಸಲಿದ್ದಾರೆ. ಸತತವಾಗಿ 2 ಬಾರಿ ಸೋತರು ಕೂಡ ಕ್ಷೇತ್ರದ ಜನರ ಪರವಾಗಿ ಜನರೊಂದಿಗೆ ಬೆರೆತು ರಾತ್ರಿ ಹಗಲು ಎನ್ನದೆ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯುತಿದ್ದೇನೆ. ನಾನು ಯಾರ ಬಗ್ಗೆ ಟೀಕೆ ಟಿಪ್ಪಣಿ ಮಾಡಲು ಬಂದಿಲ್ಲ ದೊಡ್ಡ ದೊಡ್ಡ ಉದ್ಯಮಿಗಳು, ಅನೇಕ ಬಾರಿ ಈ ಕ್ಷೇತ್ರದಿಂದ ಸಚಿವರಾದವರೂ ಈ ಕ್ಷೇತ್ರಕ್ಕೆ ಯಾವ ಕೊಡುಗೆ ನೀಡಿಲ್ಲ ಸ್ವತಂತ್ರ ತಾಲ್ಲೂಕು ಕೇಂದ್ರ, ಅಗ್ನಿ ಶಾಮಕ ಠಾಣೆ, ದೊಡ್ಡ ಕಂಪನಿಗಳನ್ನು ಕೂಡ ಈ ಕ್ಷೇತ್ರದಲ್ಲಿ ಯಾರಿಂದಲೂ ತರಲಿಕ್ಕಾಗಲಿಲ್ಲ. ಈ ಒಂದು ಬಾರಿ ಬೀದರ್ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗಾಗಿ ನನಗೆ ಅವಕಾಶ ನೀಡಿ ನನ್ನ ಜೀವ ಇರುವವರೆಗೂ ಈ ಕ್ಷೇತ್ರದ ಜನರ ಋಣಕ್ಕೆ ಬದ್ಧನಾಗಿರುತ್ತೆನೆಂದು ಭಾವುಕರಾಗಿ ನುಡಿದರು.

ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ರಾಜರೆಡ್ಡಿ ಶಹಾಬಾದ್, ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಯ್ಯ ಸ್ವಾಮಿ, ಚೆನ್ನಪ್ಪ ಗೌರಶೆಟ್ಟಿ , ಜಗನ್ನಾಥ ಪಾಟೀಲ್ ಸಿರಕಟನಳ್ಳಿ,ಘಾಳೆಪ್ಪ ಚಟ್ನಳ್ಳಿ,ಗ್ರಾಮ ಪಂಚಾಯತ್ ಅಧ್ಯಕ್ಷರು ಇರ್ಫಾನ್ ಬೇಗಂ,ರಾಜಕುಮಾರ್ ಪಾಟೀಲ್,ಸಿದ್ದು ಮುದ್ದಾ, ಬಾಬುರಾವ್ ಪಟೇಲ್, ಸಂಗಯ್ಯ ಸ್ವಾಮಿ, ರಾಮುಲು ಮಂತ್ರಿ, ದೇವಿಂದ್ರಪ್ಪ,ಪಪ್ಪು ಸ್ವಾಮಿ, ವಿಜಯಕುಮಾರ್ ವಾಲಿ,ರವಿ ಘಾರನ್, ಜಗನ್ನಾಥ ರೆಡ್ಡಿ, ಬಸವರಾಜ ಚಟ್ನಳ್ಳಿ, ಪ್ರಭು ಮೆಂಗಾ, ಪ್ರಶಾಂತ್, ವಿಜಯಕುಮಾರ್ ರಾಜಗೀರಾ ಸನ್ಮುಖಪ್ಪ, ಸುರೇಶ್ ಬೇಮಳಖೇಡಾ,ಸಂಜು ರೆಡ್ಡಿ,ನರೇಶ್ ತೊಂಟಿ,ರಾಜರೆಡ್ಡಿ ವಿಠಲ್ ಪೂರ, ರಾಜಶೇಖರ,ಸನ್ಮುಖಪ್ಪ ಕಾರಕಪಳ್ಳಿ, ಸೇರ್ಪಡೆಗೊಂಡವರು ಮೋಹನ್ ಮೇತ್ರೆ, ತುಕಾರಾಮ ಮೇತ್ರೆ, ಅರ್ಜುನ್ ಮೇಲಕೇರಿ, ಶಿವಪ್ಪಾ ಮೇಲಕೇರಿ,ಬನ್ನಪ್ಪ ಮೇತ್ರೆ,ದೌಲಪ್ಪ ಗುತ್ತೇದಾರ್, ತುಕಾರಾಮ ಲೊಡ್ಡೇನೋರ್,ದಯಾನಂದ ಮೇತ್ರೆ,ಯೋಹನ್ ಮೇತ್ರೆ, ಜೀವನ್ ಭೈರನಳ್ಳಿ, ವಿನೋದ್ ನಾಗನಕೇರಾ, ಚಂದ್ರಕಾಂತ ಮೇತ್ರೆ,ಸಚಿನ್ ಮೇಲಕೇರೆ,ಅಂಬ್ರೀಷ್ ನಾಯಕ್ , ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

See also  ಬೀದರ್: ಕಾರಂಜಾ ಜಲಾಶಯದಲ್ಲಿ ಮುಳುಗಿ ಇಬ್ಬರು ಮೃತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು