News Kannada
Sunday, January 29 2023

ಬೀದರ್

ಬೀದರ್: ಸಂವಿಧಾನದ ರಕ್ಷಣೆಗಾಗಿ ಎಲ್ಲರೂ ಒಗ್ಗಟ್ಟಾಗಿ- ಸಾವಿತ್ರಿಬಾಯಿ ಫುಲೆ

all-should-unite-to-protect-the-constitution-savitribai-phule
Photo Credit : News Kannada

ಬೀದರ್, ಜ. ೨೦ಃ ಬಾಬಾ ಸಾಹೇಬ್ ಡಾ. ಭೀಮರಾವ ರಾಮಜಿ ಅಂಬೇಡ್ಕರ್ ಅವರು ರಚನೆ ಮಾಡಿರುವ ಸಂವಿಧಾನದ ರಕ್ಷಣೆಗಾಗಿ ದೇಶದ ಎಲ್ಲಾ ಸಮುದಾಯದ ಜನರು ಒಗ್ಗಟ್ಟಾಗಬೇಕು ಎಂದು ಸಂವಿಧಾನ, ಮೀಸಲಾತಿ ಸಂರಕ್ಷಣೆ ಬಹುಜನ ಸಮಾಜ ಮಹಾ ಸಂಘದ ಸಂಯೋಜಕರು ಹಾಗೂ ಲೋಕಸಭಾ ಮಾಜಿ ಸದಸ್ಯರಾದ ಸಾದ್ವಿ ಸಾವಿತ್ರಿಬಾಯಿ ಫುಲೆ ಅವರು ಸಂವಿಧಾನದ ಲಾಭ ಪಡೆಯುತ್ತಿರುವ ದೇಶದ ಸರ್ವ ಜನರಿಗೆ ಕರೆ ನೀಡಿದರು.

ಅವರು ಶುಕ್ರವಾರ ಸಂಜೆ ನಗರದ ಖಾಸಗಿ ಹೋಟಲ್ ಸಭಾಂಗಣದಲ್ಲಿ ಭಾರತೀಯ ಭೀಮ ಸೇನಾ ವತಿಯಿಂದ ಆಯೋಜಿಸಿದ್ದ ೨೦೨೩ ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಹಾಗೂ ಸಾವಿತ್ರಿಬಾಯಿ ಫುಲೆ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನ ತೆಗೆದು ದೇಶದ ಸರ್ವ ಜನಾಂಗವನ್ನು ಮೀಸಲಾತಿಯಿಂದ ವಂಚಿತರನ್ನಾಗಿ ಮಾಡಲು ಹೊರಟಿದೆ. ಕೋಮುವಾದಿ ಸರ್ಕಾರದಿಂದ ಸಂವಿಧಾನ ಸಂಕಷ್ಟದಲ್ಲಿದೆ. ಆದ್ದರಿಂದ ೨೦೨೪ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪರ್ಯಾಯ ಪಕ್ಷ ಆಯ್ಕೆ ಮಾಡಿಕೊಳ್ಳುವುದು ಇಂದಿನ ಬಹಳ ಅಗತ್ಯವಾಗಿದೆ ಎಂದು ಹೇಳಿದರು.

೨೦೨೪ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಉಳಿಯುವುದಿಲ್ಲ. ಸಂವಿಧಾನ ಉಳಿಸಲು ಎಲ್ಲರು ಒಂದಾಗಬೇಕು ಎಂದು ದೇಶದ ಸರ್ವ ಸಮಾಜದ ಜನರನ್ನು ಕರೆ ನೀಡಿದರು.

ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಬಿ. ಶ್ಯಾಮಸುಂದರರವರ ಭಾವಚಿತ್ರಗಳಿಗೆ ಮಾಲಾರ್ಪಣೆಗೈದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಕ್ಷವರನಾಥ ಕನೌಜಿಯಾ ಅವರು ಜಯ ಭೀಮ ಇಲ್ಲದಿದ್ದರೆ, ಸಂವಿಧಾನ ಇರುತ್ತಿರಲಿಲ್ಲ. ಸಂವಿಧಾನ ಇರದಿದ್ದರೆ, ದೇಶವೇ ಇರುತ್ತಿರಲಿಲ್ಲ. ದೇಶದ ಸಂವಿಧಾನ ಉಳಿಸಲು ಎಲ್ಲರು ಒಗ್ಗಟ್ಟಾಬೇಕು ಎಂದು ಹೇಳಿದರು.

ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ ಅವರು ಮಾತನಾಡುತ್ತ, ಭಾರತೀಯ ಭೀಮ ಸೇನಾ ವತಿಯಿಂದ ಆಯೋಜಿಸಿದ್ದ ೨೦೨೩ ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಹಾಗೂ ಸಾವಿತ್ರಿಬಾಯಿ ಫುಲೆ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಿರುವುದು ಸಂತೋಷ ಹಾಗೂ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪೂಜ್ಯ ಭಂತೆ ಜ್ಞಾನಸಾಗರ,

ಕರ್ನಾಟಕ ವಿಧಾನ ಪರಿಷತ್ ಮಾಜಿ ಸದಸ್ಯರಾದ ಕೆ. ಪುಂಡ್ಲೀಕರಾವ, ಸೈಯ್ಯದ್ ಮಕ್ಸೂದ್, ಅಬ್ದುಲ್ ಮನ್ನಾನ ಸೇಠ, ಪ್ರೇಮಸಾಗರ ದಾಂಡೇಕರ್, ಶಿವಶರಣಪ್ಪ ಹುಗ್ಗೆ ಪಾಟೀಲ, ಬಿ. ಕೃಷ್ಣಪ್ಪ ವಕೀಲರು, ಸೈಯ್ಯದ್ ತಲಾ ಹಾಷ್ಮಿ, ಸೈಯ್ಯದ್ ಸರಫರಾಜ್ ಹಾಷ್ಮಿ ಅವರು ಸೇರಿದಂತೆ ಭಾರತೀಯ ಭೀಮಾ ಸೇನಾ ಪದಾಧಿಕಾರಿಗಳು, ಬೀದರ ಜಿಲ್ಲೆಯ ಮಹಿಳೆಯರು, ನಾಗರಿಕರು ಇದ್ದರು.

ಮಹಾದೇವ ಪಿ. ಮೂಲಭಾರತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಕ್ಕಪ್ಪ ದಂಡಿನ ಸ್ವಾಗತಿಸಿದರು. ಸುರೇಶ ಟಾಳೆ ನಿರೂಪಿಸಿದರು. ಅಶೋಕುಮಾರ ಮಾಳಗೆ ವಂದಿಸಿದರು.

See also  ಬೀದರ್: ಸಿಡಿಲು ಬಡಿದು ಇಬ್ಬರು ರೈತರ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು