ಬೀದರ: ಅಂಬಿಗರ ಚೌಡಯ್ಯನವರು ತಮ್ಮ ನಿಷ್ಠುರ ಹಾಗೂ ಕೆಚ್ಚೆದೆಯ ವಚನಗಳಿಂದ ಎಲ್ಲಾ ವಚನಕಾರರಿಗಿಂತ ಭಿನ್ನ ಮತ್ತು ಶ್ರೇಷ್ಠ ವಚನಕಾರರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಬೀದರ ಉತ್ತರ ಶಾಸಕ ರಹೀಮ್ ಖಾನ್ ಹೇಳಿದರು.
ಶನಿವಾರ ನಗರ ಚನ್ನಬಸವ ಪಟ್ಟದೇವರು ರಂಗಮAದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಹಾಗೂ ಕನ್ನಡ ಮತ್ತು ಸಂಸ್ಕçತಿ ಇಲಾಖೆ ಬೀದರ ಇವರ ಸಂಯುಕ್ತಾಶ್ರದಲ್ಲಿ ಆಯೋಜಿಸಿದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಶರಣರು ನಮಗೆ ಸನ್ಮಾರ್ಗದಲ್ಲಿ ನಡೆಯಲು ದಾರಿ ತೋರಿದಂತೆ ಅಂಬಿಗರ ಚೌಡಯ್ಯನವರು ಸಹ ದಾರಿ ತೋರಿದ್ದಾರೆ ನಾವು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದ ಅವರು ನಾವು ಜೀವನದಲ್ಲಿ ಯಾರನ್ನು ಮೇಲು ಕೀಳು ಎನ್ನದೇ ಎಲ್ಲರನ್ನು ಸಮಾನವಾಗಿ ಕಾಣಬೇಕು ಅಂದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುವುದು ಎಂದರು.
ಬೀದರನ ಸೆಂಟ್ ಪೌಲ್ ಡಿಗ್ರಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಜಗನಾಥ ಮುತ್ತಂಗಿ ಅವರು ಮಾತನಾಡಿ ಅಂಬಿಗರ ಜೌಡಯ್ಯನವರ ಜೀವನ ಕುರಿತು ಉಪನ್ಯಾಸ ನೀಡಿ ಚೌಡಯ್ಯನವರು 12ನೇ ಶತಮಾನದಲ್ಲಿ ಜಾರಿಯಲ್ಲಿದ್ದ ಅನಿಷ್ಠ ಪದ್ದತಿ, ಕಂದಚಾರ, ಅಸಮಾನತೆಯನ್ನು ತಮ್ಮ ವರಟು ವಚನಗಳ ಮೂಲಕ ವಿರೋಧಿಸಿ ಬಂಡಾಯದ ವಚನಕಾರರು ಎನಿಸಿಕೊಂಡರು ಎಂದು ಹೇಳಿದರು.
ಬೇರೆ ವಚನಕಾರರು ವಚನಗಳಿಗೆ ತಮ್ಮ ಇಷ್ಟ ದೇವರ ಅಂಕಿತವನ್ನು ಬಳಸಿದರೆ ಇವರು ತಮ್ಮ ವಚನಗಳಿಗೆ ತಾವೆ ಸಾಟಿ ಎಂಬAತೆ ತಮ್ಮದೆ ಅಂಕಿತ ಬಳಸಿ ಶ್ರೇಷ್ಠ ವಚನಕಾರಾದರು.
ಸುಮಾರು 280ಕ್ಕೂ ಹೆಚ್ಚು ವಚನಗಳನ್ನು ಅಂಬಿಗರ ಚೌಡಯ್ಯನವರು ರಚಿಸಿದ್ದು ಅವರು ರಚಿಸಿದ ವಚನಗಳ ಭಾಷಾ ಶೈಲಿ ಗಮಿನಿಸಿದರೆ ಅವರ ವಚನಗಳಿಗೆ ಸಾಟಿ ಮತ್ತೊಬ್ಬರಿಲ್ಲ ಎಂಬುವುದರ ಅರಿವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕçತಿ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕರಾದ ಡಾ. ಗೌತಮ ಅರಳಿ, ನಿಂಬೋಳದ ಮಾತೆ ಮಾಣಿಕೇಶ್ವರಿ ಆಶ್ರಮದ ಶಾಂತಿ ಬಾಬಾ, ಜಿಲ್ಲಾ ಟೋಕರಿ ಕೋಳಿ ಸಮಾಜ ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ, ಜಿಲ್ಲಾ ಟೋಕರಿ ಕೋಳಿ ಸಮಾಜ ಸಂಘದ ಉಪಾಧ್ಯಕ್ಷ ಸುನೀಲ್ ಖಾಶಂಪೂರ, ಅಂಬಿಗರ ಚೌಡಯ್ಯ ಯುವ ಸೇನೆ ಅಧ್ಯಕ್ಷ ಸುನೀಲ ಭಾವಿಕಟ್ಟಿ, ಮಾರುತಿ ಮಾಸ್ಟರ್, ಪುಂಡಲಿಕಪ್ಪ ಹಾಗೂ ಸಮಾಜದ ಮುಖಂಡರು ಸೇರಿದಂತೆ ಇತರಿದ್ದರು.
ಕಾರ್ಯಕ್ರಮದ ಚಾಲನೆ ಮುನ್ನ ವಿವಿಧ ಕಲಾತಂಡಗಳೊAದಿಗೆ ಅಂಬಿಗರ ಚೌಡಯ್ಯನವರ ಭಾವಚಿತ್ರದ ಮೇರವಣಿಗೆಯು ಜಿಲ್ಲಾಧಿಕಾರಿಗಳ ಕಚೇರಿಯಿಂದ ರಂಗಮAದಿರದ ವರೆಗೆ ವಿಜೃಭಣೆಯಿಂದ ಜರುಗಿತು.
ಈ ಸಂದರ್ಭದಲ್ಲಿ ಸಮಾಜದ ಯುವಕರು ಕುಣಿದು ಕುಪ್ಪಳಿಸಿದರು.