ಬೀದರ್: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಅನೇಕ ಜನ ಮುಖಂಡರು, ಕಾರ್ಯಕರ್ತರು ಎರಡು ರಾಷ್ಟ್ರೀಯ ಪಕ್ಷಗಳನ್ನು ತೊರೆದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ಶುಕ್ರವಾರ ಜೆಡಿಎಸ್ ಶಾಲು ಹೊದಿಸಿ, ಪಕ್ಷದ ಧ್ವಜ ನೀಡುವ ಮೂಲಕ ನಿರ್ಣಾ, ಆಣದೂರು, ಬಕಚೌಡಿ, ವಕ್ರಾಣ ಸೇರಿದಂತೆ ವಿವಿಧ ಗ್ರಾಮಗಳ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನೂರಾರು ಜನ ಮುಖಂಡರು ಮತ್ತು ಕಾರ್ಯಕರ್ತರನ್ನು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಚುನಾವಣೆ ಸಮೀಪಿಸುತ್ತಿದ್ದು ನಾವೆಲ್ಲರೂ ಸೇರಿ ಪಕ್ಷವನ್ನು ಇನ್ನಷ್ಟು ಬಲಿಷ್ಟಗೊಳಿಸಬೇಕಾಗಿದೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರಲು ಪಕ್ಷದ ಹಿರಿಯ ನಾಯಕರು ಶ್ರಮಿಸುತ್ತಿದ್ದಾರೆ. ನಾವೆಲ್ಲರೂ ಅವರೊಟ್ಟಿಗೆ ಕೈಜೋಡಿಸೋಣ ಎಂದು ನೂತನ ಮುಖಂಡರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ನಿರ್ಣಾದ ಪ್ರಮುಖರಾದ ಸಂಗಪ್ಪ ಹಾಲಹಳ್ಳಿ, ರಾಜಕುಮಾರ ಮೆತ್ರಸ್ಕರ್, ವಿಜಯರೆಡ್ಡಿ ಲಚ್ಚಂಗರ್, ಜಾಂಗೀರ್ ಬನ್ನಳ್ಳಿ, ಅಜರ್, ಪಿರೋಷಾ, ಶಾಬಾದೀನ್ ಷಾ, ಮೈಬೂಬ್ ಷಾ, ಸಲಿಂ, ಗೌಸ್, ಆಣದೂರಿನ ಪ್ರಮುಖರಾದ ರಜನೀಕಾಂತ್ ಕಾಂಬ್ಳೆ, ಅಷ್ಟ ಗೌತಮ್ ಸಿಂಗ್, ಪ್ರಭು ಸಾಗರ್, ಬಾಬು ಗುಪ್ತಾ, ಮಾರುತಿ ಕಾಂಬ್ಳೆ, ಉಪೇಂದ್ರ, ಭಾರತ್ ಪಾತರಪಳ್ಳಿ, ಮಾಣಿಕ್ ಆಣದೂರೆ, ಗೋಪಾಲ್, ಬಾಬು ಬಲ್ಲೂರೆ, ಸಂಜು ಕೋಟೆ, ಸ್ವಾಮಿ, ಲಕ್ಷ್ಮಣ್ ರೇಖೆ, ಸುರೇಶ್ ಪಾತರಪಳ್ಳಿ, ರಾಜಕುಮಾರ ಪಾತರಪಳ್ಳಿ, ಸಂದೀಪ್ ಗಾದ್ಗಿಕರ್, ಸಂಜುಕುಮಾರ್ ಯಾದವ್, ತುಕ್ಕರಾಮ್ ಆಣದೂರೆ, ರಾಜು ರಾಜೋಳ್ಳಿಕರ್, ಬಾಬು ಉಡ್ಬಾಳ್, ನಾಗೇಶ್ ಉಂಚೆಗಿಡ್ಕರ್, ಜಾವೀದ್ ಆಣದೂರು, ಶಿವರಾಜ ಕೋಟೆ, ಬಕಚೌಡಿಯ ಪ್ರಮುಖರಾದ ಸುಂದರ್, ರಾಜು, ವಕ್ರಾಣದ ಪ್ರಮುಖರಾದ ಬಸವರಾಜ, ಮಲ್ಲಪ್ಪ, ನರಸಿಂಹ, ಕಂಟೆಪ್ಪ ಸೇರಿದಂತೆ ಅನೇಕರಿದ್ದರು.