ಬೀದರ್: ಬೀದರ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬರುವ ಚಟನಳ್ಳಿ ಗ್ರಾಮದ ಯುವಕರು ಬೀದರ ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಅಶೋಕ ಖೇಣಿ ರವರ ಅಭಿವೃದ್ಧಿ ಕಾರ್ಯಮೆಚ್ಚಿ ಅನ್ಯ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಅವರಿಗೆ ಮಾನ್ಯ ಅಶೋಕ ಖೇಣಿ ರವರು ಹಾಗೂ ಬ್ಲಾಕ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾದ ಚಂದ್ರಶೇಖರ ಚನಶಟ್ಟಿ ರವರು ಪಕ್ಷದ ಬಾವುಟ ಕೊಟ್ಟು, ಶಾಲು ಹೊದಿಸಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಕಿಸಾನ್ ಸೇಲ್ ರಾಜ್ಯ ಕಾರ್ಯದರ್ಶಿಯಾದ ಉದಯಕುಮಾರ್ ಚಟನಳ್ಳಿ, ಗ್ರಾಮ ಪಂಚಾಯತ ಸದಸ್ಯರಾದ ಮೋಹಿನ್ ಫಠಾಣ, ಕಿಸಾನ್ ಸೇಲ್ ಅಧ್ಯಕ್ಷರಾದ ಸಂತೋಷ ಪಾಟೀಲ, ಮೈನಾರಿಟಿ ಘಟಕದ ಅಧ್ಯಕ್ಷರಾದ ಸಾಜಿದ್ ಪಾಷಾ, ಜಿಲ್ಲಾ ಎಸ್ ಸಿ ಘಟಕದ ಕಾರ್ಯದರ್ಶಿ ಲೋಕೇಶ್ ಮಂಗಲಗಿ,ಬ್ಲಾಕ್ ಕಾಂಗ್ರೆಸ್ ಖಂಜಾಚಿ ರಾಜಕುಮಾರ್ ಮಡಿಕಿ, ಮುಖಂಡರಾದ ಅರುಣ್ ಸಾಮ್ರಾಟ್ ಸೇರಿ ಅನೇಕರು ಉಪಸ್ಥಿತರಿದ್ದರು.