ಬೀದರ್: ಬಸವಕಲ್ಯಾಣ ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಲಿಂಗಾಯತರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕು’ ಎಂದು ಆಗ್ರಹಿಸಿ ಬೆಂಗಳೂರಿನಲ್ಲಿ ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಐವತ್ತು ವರ್ಷಗಳಿಂದ ಲಿಂಗಾಯತರಿಗೆ ಟಿಕೆಟ್ ನೀಡಿಲ್ಲ. ಆದ್ದರಿಂದ ಈ ಕ್ಷೇತ್ರದಲ್ಲಿ 70 ಸಾವಿರ ಲಿಂಗಾಯತ ಮತಗಳಿದ್ದರೂ ಅಭ್ಯರ್ಥಿ ಗೆಲ್ಲುತ್ತಿಲ್ಲ. ಈ ಸಲವಾದರೂ ಟಿಕೆಟ್ ನೀಡಬೇಕು. ಈ ಸಮುದಾಯದ ಮೂವರು ಈಗಾಗಲೇ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ ಯಾರಿಗಾದರೂ ಅವಕಾಶ ನೀಡಬೇಕು ಎಂದು ಕೇಳಿಕೊಳ್ಳಲಾಯಿತು. ಪಕ್ಷದ ನಾಯಕರುಗಳಾದ ಸಿದ್ದರಾಮಯ್ಯ, ಎಂ.ಬಿ.ಪಾಟೀಲ, ಶಾಮನೂರು ಶಿವಶಂಕರಪ್ಪ ಅವರನ್ನೂ ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ.
ಮುಖಂಡರಾದ ಕೇಶಪ್ಪ ಬಿರಾ ದಾರ, ಜಿ.ಆರ್.ಪಾಟೀಲ, ಅರ್ಜುನ ಕನಕ, ಮನೋಹರ ಮೈಸೆ, ವಿಶ್ವನಾಥ ಖಳಾಳೆ, ಶರಣಯ್ಯ ಸ್ವಾಮಿ, ಶಶಿಕಾಂತ ಹಾಗೂ ರಾಜಕುಮಾರ ಇದ್ದರು.