News Kannada
Wednesday, May 31 2023
ಬೀದರ್

12ನೇ ಶತಮಾನದಲ್ಲಿ ಬಸವಣ್ಣನವರು ಜಾತಿ ರಹಿತ ಸಮಾಜವನ್ನು ನಿರ್ಮಿಸಿದ್ದರು- ಭಗವಂತ ಖೂಬಾ

Basavanna created a casteless society in the 12th century: Union Minister Bhagwant Khuba
Photo Credit : News Kannada

ಬೀದರ್,ಮಾ.12: 12ನೇ ಶತಮಾನದಲ್ಲಿ ಜಾತಿಯ ತಾಂಡವಾಡುತ್ತಿದ್ದ ಆ ಸಂದರ್ಭದಲ್ಲಿ ಜಾತಿ ರಹಿತ ಸಮಾಜವನ್ನು ಬಸವಣ್ಣನವರು ನಿರ್ಮಾಣ ಮಾಡಿದ್ದರೆಂದು ಕೇಂದ್ರ ನೂತನ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಹ ಸಚಿವರಾದ ಭಗವಂತ ಖೂಬಾ ಹೇಳಿದರು.

ಅವರು ಶನಿವಾರ ಬಸವ ಉತ್ಸವ-2023ರ ಕಾರ್ಯಕ್ರಮವನ್ನು ಬಸವಕಲ್ಯಾಣದ ಥೇರ ಮೈದಾನದಲ್ಲಿ ಉದ್ಘಾಟಿಸಿ ಮಾತನಾಡಿದರು.

ಕಾಯಕದಲ್ಲಿ ಮೇಲು ಕೀಳು ಎಂಬ ಸಮಾಜದಲ್ಲಿ ಕಾಯಕ ಯೋಗಿಗಳಿಗೆ ಸಮಾನವಾಗಿ ನ್ಯಾಯ ಸಿಗಬೇಕು. ಗಂಡು ಹೆಣ್ಣು ಎಂಬ ತಾರತಮ್ಯ ಇರುವ ಸಮಯದಲ್ಲಿ ಅವರ ಸಮಾನತೆಗಾಗಿ ಬಸವಣ್ಣನವರು ಶ್ರಮಿಸಿದರು. ಸಮಾಜದಲ್ಲಿರುವ ಪ್ರತಿಯೊಬ್ಬ ನಾಗರಿಕನು ಕೂಡ ಕಾಯಕ ನಿಷ್ಠೆಯಿಂದ ಕೆಲಸ ಮಾಡಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಟ್ಟ ಬಸವಾದಿ ಶರಣರು “ಕಳಬೇಡ ಕೊಲಬೇಡ, ಹುಸಿಯನು ನುಡಿಯಲು ಬೇಡ” ಎಂದು ಹೇಳಿದರು.

ಮನುಷ್ಯನಲ್ಲಿರುವ ಅಹಂಕಾರ, ಮೇಲು ಕೀಳು ಎಲ್ಲವು ವಚನದಿಂದ ಸಂಪೂರ್ಣವಾಗಿ ಹೋಗಲಾಡಿಸಿ ನಾವು ಯಾವ ಸಮಾಜದಲ್ಲಿ ಬದುಕುತ್ತಿದ್ದೇವೆ ಆ ಸಮಾಜವನ್ನು ಒಗ್ಗುಡಿಸಿಕೊಂಡು ಹೋಗುವಂತೆ ಮಾಡಿದ್ದರು. ಅನೇಕ ಸಾರಿ ಮನುಷ್ಯನಿಗೆ ಅನ್ಯರ ಮೇಲೆ ಸಂಶಯಪಟ್ಟು ಸಂಬಂಧಗಳನ್ನು ಹಳಿಸಿಹೋಗುವುದು ನಮ್ಮ ಅನುಭವಕ್ಕೆ ಬಂದಿದೆ ಪ್ರತ್ಯಕ್ಷ ಕಂಡರು ಪ್ರಮಾಣಿಸಿ ನೋಡು ಎಂದು ಅವರು ಹೇಳಿದ್ದಾರೆ.

23 ಸಾವಿರಕ್ಕೂ ಹೆಚ್ಚು ವಚನಗಳು ಬದುಕಿನಲ್ಲಿ ಅಳವಡಿಸಿಕೊಳ್ಳುವ ಬದಲು ಜೀವನಕ್ಕೆ ಬೇಕಾಗುವ 4 ವಚನಗಳು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮತ್ತು ಸರ್ವರನ್ನು ಜೊತೆಗೂಡಿ ಹೋಗಲು ನಮ್ಮ ಬದುಕಿಗೆ 4 ವಚನಗಳು ಸಾಕು ಇಂತಹ ಅದ್ಭುತವಾದ ವಚನಗಳು ಬಸವಾದಿ ಶರಣರು ನಮಗೆ ಕೊಟ್ಟಿದ್ದಾರೆ.

ಅಂದಿನ ಪ್ರಜಾಪ್ರಭುತ್ವದ ವ್ಯವಸ್ಥೆ 12ನೇ ಶತಮಾನದ ಅನುಭವ ಮಂಟಪದಲ್ಲಿ ಶೇ.35 ಮಹಿಳೆಯರು ಭಾಗಿಯಾಗಿರುವುದನ್ನು ನಾವು ಕೇಳಿದ್ದೇವೆ ಅಂತಹ ಪ್ರಜಾಪ್ರಭುತ್ವ ಕೊಟ್ಟಿರುವುದು ಇದೇ ಬಸವಣ್ಣನವರ ಕರ್ಮಭೂಮಿ ಎಂಬುವುದು ನಾವು ಇಲ್ಲಿ ಸ್ಮರಿಸಬಹುದಾಗಿದೆ.

ಕಳೆದ ಬೀದರ ಉತ್ಸವದಲ್ಲಿ ಕಲ್ಪನೆಗೂ ಮೀರಿ 7 ಲಕ್ಷಕ್ಕಿಂತ ಹೆಚ್ಚಿನ ಜನರು ಭಾಗವಹಿಸಿರುವುದು ಆ ಉತ್ಸವನ್ನು ನೋಡಿದಾಗ ಬೀದರ ಉತ್ಸವದಲ್ಲಿ ಸಿಕ್ಕಿರುವ ಸ್ಪಂದನೆ ರಾಜ್ಯದ ಯಾವ ಉತ್ಸವಗಳಲ್ಲಿಯೂ ಇಷ್ಟು ಜನರು ಸೇರಿರಲಿಲ್ಲ, ಇದೊಂದು ರಾಜ್ಯಕ್ಕೆ ಮಾದರಿ ಉತ್ಸವವಾಗಿದೆ ಎಂದರು.

ಜನರ ಸಹಕಾರದಿಂದ ಕಳೆದ 4-5 ದಿನಗಳಿಂದ ಅನೇಕ ಚಟುವಟಿಕೆಗಳ ಮೂಲಕ ಬಸವ ಉತ್ಸವಕ್ಕೆ ಇಂದು ಚಾಲನೆ ಸಿಕ್ಕಿದೆ. ನಾಳೆ ಅನೇಕ ಕಲಾವಿದರ ತಂಡದಿಂದ ಉತ್ಸವದಕ್ಕೆ ಮೆರಗು ತರುವಂತ ಕೆಲಸ ಉತ್ಸವ ತಂಡದಿಂದ ನಡೆಯುತ್ತಿದೆ. ಈ ಕಲಾವಿದರ ತಂಡ ಮಾಡುವಂತಹ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಾವೆಲ್ಲರೂ ಆನಂದಿಸಿ ಸಂತೋಷ ಪಡೋಣ. ಭಾರತವು ಸಂಸ್ಕೃತಿಕ, ಆಧ್ಯಾತ್ಮಿಕ, ಶೈಕ್ಷಣಿಕ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ವಿಶ್ವಗುರು ಆಗುವ ದಿಕ್ಕಿನಲ್ಲಿ ಮುನ್ನುಗ್ಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಸವಕಲ್ಯಾಣ ಶಾಸಕ ಶರಣು ಸಲಗರ ಅವರು ಮಾತನಾಡಿ, ವಿಶ್ವದ ಶ್ರೇಷ್ಠ ನೆಲ ಪಾವನ ಭೂಮಿ ಜಗತ್ತಿಗೆ ಮೊದಲ ಪಾರ್ಲಿಮೆಂಟ ಕೊಟ್ಟ ಭೂಮಿ ಬಸವಕಲ್ಯಾಣ ಆಗಿದೆ. ಜಗತ್ತಿಗೆ ಸಮಾನತೆಯ ತತ್ವವನ್ನು ಸಾರಿದ ಈ ಬಸವಣ್ಣನ ನಾಡಿನಲ್ಲಿ ಬಸವ ಉತ್ಸವ ಯಶಸ್ವಿಯಾಗಿ ನಡೆಯುತ್ತಿದೆ, ಇದಕ್ಕೆ ಅನೇಕರು ಶ್ರಮಪಟ್ಟು ಕಳೆದ ಹಲವು ದಿನಗಳಿಂದ ಕೆಲಸ ಮಾಡುತ್ತಿದ್ದಾರೆ. ಬಸವಕಲ್ಯಾಣದಲ್ಲಿ 620 ಕೋಟಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ ಮತ್ತು 20 ಕೋಟಿ ರೂ.ವೆಚ್ಚದಲ್ಲಿ ಪರುಷ ಕಟ್ಟೆ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

See also  ನಾಗಮಾರಪಳ್ಳಿ ಆಸ್ಪತ್ರೆ , ಫೌಂಡೇಷನ್ ಕಾರ್ಯ ಮಾದರಿ : ನಟ ಶಿವರಾಜಕುಮಾರ ಮೆಚ್ಚುಗೆ

ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಬಸವ ಉತ್ಸವ ನೋಡಿ ಬಹಳ ಸಂತೋಷವಾಗುತ್ತಿದೆ, ಒಂದು ಕಾಲದಲ್ಲಿ ಎಲ್ಲಾ ರಾಷ್ಟ್ರದ ದಾರಿಯು ಇದಾಗಿತ್ತು ಬಸವಣ್ಣನವರು ಅಸ್ಪರ್ಶರನ್ನು ತಲೆಯ ಮೇಲೆ ಹೊತ್ತುಕೊಂಡು ವಿಶ್ವದಲ್ಲಿ ಯಾರು ಮಾಡದ ಕೆಲಸವನ್ನು ಮಾಡಿದ್ದರು. ಬಸವಣ್ಣನವರು ಹರಳಯ್ಯನವರಿಗೆ ಶರಣು ಎಂದರೆ ಶರಣು ಶರಣಾರ್ಥಿ ಎಂದು ಹೇಳಿದ್ದರು, ಬಸವನ ಬೆಳಕು ಭಾರತಕ್ಕೆ ಮಾತ್ರವಲ್ಲ ವಿಶ್ವಕ್ಕೆ ಹರಡುವಂತೆ ಅವರು ವಿಶ್ವ ಎಲ್ಲವು ನನ್ನದೇ ಎಂದಿದ್ದರು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಹಜ್ ಸಮಿತಿ ಅಧ್ಯಕ್ಷ ರವೂಫುದ್ಧಿನ್ ಕಛೇರಿವಾಲೆ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಎಲ್ಲ ಪರಮ ಪೂಜ್ಯರು ಮತ್ತು ಮಾತೆಯರು, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್., ಬಸವಕಲ್ಯಾಣ ಸಹಾಯಕ ಆಯುಕ್ತ ರಮೇಶ ಕೋಲಾರ, ಬಸವಕಲ್ಯಾಣ ನಗರಸಭೆ ಅಧ್ಯಕ್ಷ ಶಹನಾಜ ತನ್ವಿರ್ ಶೇಖ್, ಪಂಚ ಕಮಿಟಿ ಅಧ್ಯಕ್ಷರು ಸೇರಿದಂತೆ ಹಲವಾರು ಜನರು ಭಾಗವಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು