ಬೀದರ್: ಕಾರ್ಮಿಕರಿಗೆ ಗೌರವಪೂರ್ವಕವಾಗಿ ನೀಡಬೇಕಾಗಿದ್ದ ಕಾರ್ಮಿಕ ಕಿಟ್‌ಗಳನ್ನು ಇಲಾಖಾ ಸಿಬ್ಬಂದಿ ಕಚೇರಿಯ ಮಹಡಿಯಿಂದ ಮನಬಂದಂತೆ ಎಸೆದಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ನಡೆದಿದೆ.
ಕಾರ್ಮಿಕರ ದಾಖಲೆಗಳನ್ನು ಪರಿಶೀಲನೆ ಮಾಡಿ ನಿಜವಾದ ಫಲಾನುಭವಿಗಳಿಗೆ ನೀಡಬೇಕಿದ್ದ ಕಿಟ್‌ಗಳನ್ನು ಕಟ್ಟಡದ ಮೇಲಿಂದ ಸಿಬ್ಬಂದಿ ಎಸೆದಿದ್ದಾರೆ. ಆ ಕಿಟ್‌ಗಳನ್ನು ಕ್ಯಾಚ್ ಹಿಡಿಯಲು ಬಡಪಾಯಿ ಕಾರ್ಮಿಕರು ನಿಂತಿರುವ ವೀಡಿಯೋ ಸೆರೆಹಿಡಿಯಲಾಗಿದೆ. ಆದರೆ ಕಾರ್ಮಿರನ್ನು ಬೇಕಾಬಿಟ್ಟಿ ಕಾಯಿಸಿ, ಸತಾಯಿಸಿ ಮನಬಂದಂತೆ ಕಿಟ್‌ಗಳನ್ನು ಎಸೆದಿರುವ ಸಿಬ್ಬಂದಿಯ ಮಹಾ ನಿರ್ಲಕ್ಷ್ಯ ಆಕ್ರೋಶಕ್ಕೆ ಕಾರಣವಾಗಿದೆ.
ಸೋಮವಾರ ಅಧಿಕಾರಿಗಳು ಕಿಟ್‌ಗಳನ್ನು ಕೊಡುವುದಾಗಿ ಹೇಳಿ ಕಾರ್ಮಿಕ ಹಾಗೂ ಕಾರ್ಮಿಕ ಮಹಿಳೆಯರನ್ನು ರಾತ್ರಿ 10 ಗಂಟೆಯ ವರೆಗೆ ಕಾಯಿಸಿ ಸತಾಯಿಸಿದ್ದಾರೆ ಎನ್ನಲಾಗಿದೆ. ಮಂಗಳವಾರ ಕೂಡಾ ಕಾರ್ಮಿಕರಿಗೆ ಕಿಟ್‌ಗಳನ್ನು ಸರಿಯಾಗಿ ನೀಡದೇ ಮನಬಂದಂತೆ ಎಸೆದಿರುವುದು ತಿಳಿದುಬಂದಿದೆ.