News Kannada
Thursday, June 01 2023
ಬೀದರ್

ಮುಸ್ಲಿಮರಿಗೆ ಬಿಜೆಪಿ ಪ್ರಶಸ್ತಿ ನೀಡಲ್ಲ ಎಂದು ಭಾವಿಸಿದ್ದೆ’ ಪದ್ಮಶ್ರೀ ಸ್ವೀಕರಿಸಿದ ರಶೀದ್ ಮನದಾಳ

I thought BJP won't give award to Muslims' Rashid who received Padma Shri
Photo Credit : News Kannada

ನವದೆಹಲಿ (ಬೀದರ್‌): ಬಿಜೆಪಿ ಸರ್ಕಾರ ಮುಸ್ಲಿಮರಿಗೆ ಪ್ರಶಸ್ತಿ ನೀಡುವುದಿಲ್ಲ ಎಂದು ಭಾವಿಸಿದ್ದೆ.  ಆದರೆ ನನ್ನ ಊಹೆಯನ್ನು ನೀವು ಸುಳ್ಳು ಮಾಡಿದ್ದೀರಿ ಎಂದು ಪದ್ಮಶ್ರೀ ಪ್ರಶಸ್ತಿ ಪಡೆದ ಕರ್ನಾಟಕದ ಬೀದರ್‌ನ ಖ್ಯಾತ ಬಿದರಿ ಕಲಾವಿದ ಶಾ ರಶೀದ್ ಅಹ್ಮದ್ ಖಾದ್ರಿ ಅವರು ಪ್ರಧಾನಿ ನರೇಂದ್ರ ಮೋದಿ ಬಳಿ ಹೇಳಿದ್ದಾರೆ.

ಹೌದು , ಬೀದರ್‌ನ ಬಿದರಿ ಕಲಾವಿದ ಶಾ ರಶೀದ್ ಅಹ್ಮದ್ ಖಾದ್ರಿ ಅವರಿಗೆ ಬುಧವಾರ ( ಮಾರ್ಚ್ 5 ) ನವದೆಹಲಿಯಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು . ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದೌಪದಿ ಮುರ್ಮು ಅವರು ಪದ್ಮ ಪ್ರಶಸ್ತಿಗೆ ಆಯ್ಕೆಯಾದವರಿಗೆ ಪ್ರಶಸ್ತಿ ಪ್ರದಾನ ಮಾಡಿದರು . ಇದೇ ವೇಳೆ ಶಾ ರಶೀದ್ ಅಹ್ಮದ್ ಖಾದ್ರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದು , “ ಮುಸ್ಲಿಮರಿಗೆ ಬಿಜೆಪಿಯಿಂದ ಯಾವುದೇ ಪ್ರಶಸ್ತಿ ಸಿಗುವುದಿಲ್ಲ ಎಂದು ಭಾವಿಸಿದ್ದೆ. ನೀವು ಅದನ್ನು ಸುಳ್ಳು ಮಾಡಿದಿರಿ ” ಎಂದು ಹೇಳಿದ್ದಾರೆ . ಈ ವಿಡಿಯೊ ಈಗ ವೈರಲ್ ಆಗಿದೆ . ಶಾ ರಶೀದ್ ಅಹಮ್ಮದ್ ಖಾದ್ರಿ ಅವರು ತಮ್ಮ ಪೂರ್ವಜರ ಕಾಲದಿಂದಲೂ ಬಿದರಿ ಕಲೆ ಮುಂದುವರಿಸಿಕೊಂಡು ಬಂದಿದ್ದಾರೆ .

1955 ರಲ್ಲಿ ಜನಿಸಿದ ಇವರು ಪಿಯುಸಿ ಓದಿದ್ದಾರೆ . ತಂದೆಯ ಗರಡಿಯಲ್ಲೇ ಬೆಳೆದು ಪ್ರಾಚೀನ ಕರಕುಶಲತೆಯನ್ನು ಉಳಿಸಿಕೊಂಡು ಬಂದಿದ್ದಾರೆ . 1970 ರಿಂದ ಸ್ವತಂತ್ರವಾಗಿ ಕಾರ್ಯ ಆರಂಭಿಸಿ ಹೊಸ ವಿನ್ಯಾಸಗಳನ್ನು ಪರಿಚಯಿಸಿದ್ದಾರೆ .

ಇವರಿಗೆ 2012 ರಲ್ಲಿ ಶಿಲ್ಪ ಗುರು ಪ್ರಶಸ್ತಿ , 9881 ರಲ್ಲಿ ರಾಷ್ಟ್ರ ಪ್ರಶಸ್ತಿ 2006 ರ ಸುವರ್ಣ ಕರ್ನಾಟಕ ರಾಜ್ಯ ಉತ್ಸವ ಪ್ರಶಸ್ತಿ , 2004 ರಲ್ಲಿ ಗ್ರೇಟ್ ಇನಿಡ್ತಾ ಅಚೀವರ್ಸ್ ಪ್ರಶಸ್ತಿ , 1996 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ , 2012 ರಲ್ಲಿ ಶಿಲ್ಪ ಗುರು ಪ್ರಶಸ್ತಿ , 2015 ರಲ್ಲಿ ರಂದು ರಾಷ್ಟ್ರಪ್ರಶಸ್ತಿ ದೊರಕಿದೆ .

See also  ಮೈಸೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು