ಬೀದರ್ : ದಕ್ಷಿಣ ಕ್ಷೇತ್ರದ ಮರ್ಜಾಪೂರ(ಎಮ್)ಗ್ರಾಮಕ್ಕೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಅಶೋಕ ಖೇಣಿ ಭೇಟಿ ನೀಡಿ ಕಾರ್ಯಕರ್ತರ ಸಭೆ ನಡೆಸಿದರು.
ಜೆಡಿಎಸ್ ತೊರೆದು ಸುಮಾರು 50 ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಅವರಿಗೆ ಅಶೋಕ ಖೇಣಿ ಹಾಗು ಕೆಪಿಸಿಸಿ ಪ್ರಧಾನ ಕಾರ್ಯದರ್ಶಗಳಾದ ಮಿನಾಕ್ಷಿ ಸಂಗ್ರಾಮ, ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾದ ಚಂದ್ರಶೇಖರ ಚನಶಟ್ಟಿರವರು ಪಕ್ಷದ ಶಾಲು ಹೊದಿಸಿ ಬಾವುಟ ಕೊಟ್ಟು ಬರಮಾಡಿಕೊಂಡರು.
ಸೇರ್ಪಡೆಯಾದ ಯುವಕರು ಎಮ್ ಡಿ ಅವಾಸ್, ಶಮಶೋದ್ದಿನ್, ರೌಫೋದ್ಧಿನ್, ಉಮಾಸ್, ಮೋಸಿನ, ಇರ್ಶಾದ್, ಶಫೀಯೋದ್ದಿನ್, ಮೂಸಾ, ನವಾಜ, ಅಯೂಬ್, ಯೂನಿಸ, ಮಾಲ್ಲಿಕ್, ಖಾಜಾ ಸೇರಿ ಅನೇಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮುಖಂಡರಾದ ಗೌಸ್ ಬೆಳ್ಳೂರ, ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.