ಬೀದರ್: ಬೀದರ್ ತಾಲ್ಲೂಕಿನ ಹೊನ್ನಿಕೇರಿ ಅರಣ್ಯ ಪ್ರದೇಶದಲ್ಲಿ ಚಿರತೆ ಇರುವುದು ಕ್ಯಾಮೆರಾ ಟ್ರ್ಯಾಪ್‍ನಲ್ಲಿ ಸೆರೆಯಾಗಿದೆ.
ಹೊನ್ನಿಕೇರಿ ಅರಣ್ಯದಲ್ಲಿ ಚಿರತೆ ಇರುವುದು ಕ್ಯಾಮೆರಾದಲ್ಲಿ ದಾಖಲಾಗಿದೆ.
ಹೀಗಾಗಿ ಘರ್ಷಣೆ ತಪ್ಪಿಸಲು ಹತ್ತಿರದ ಗ್ರಾಮ ಹಾಗೂ ವಾಸ ಸ್ಥಳದ ಜನರನ್ನು ಎಚ್ಚರಿಸಬೇಕು ಎಂದು ಬೀದರ್ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ. ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಾದೇಶಿಕ ಅರಣ್ಯ ವಿಭಾಗವು ಈಗಾಗಲೇ ಅರಣ್ಯ ಪ್ರದೇಶದಲ್ಲಿ ಚಿರತೆ ಇವೆ ಎನ್ನುವ ಎಚ್ಚರಿಕೆ ಫಲಕಗಳನ್ನು ಅಳವಡಿಸಿದೆ.