News Kannada
Saturday, June 03 2023
ಬೀದರ್

ಔರಾದ: ಬಸವ ದಳದ ವತಿಯಿಂದ ಸಡಗರದ ಬಸವ ಜಯಂತಿ ಆಚರಣೆ

Basava Jayanti celebrations
Photo Credit : News Kannada

ಔರಾದ: ತಾಲೂಕಿನ ವಡಗಾಂವ ದೇ ಗ್ರಾಮದಲ್ಲಿ ರಾಷ್ಟ್ರೀಯ ಬಸವದಳ ವತಿಯಿಂದ ಸಡಗರ ಸಂಭ್ರಮದಿಂದ ಬಸವ ಜಯಂತಿ ಆಚರಣೆ ಮಾಡಲಾಯಿತು.

ಬಸವೇಶ್ವರ ಫೋಟೊ, ಪ್ರತಿಮೆ ಹಾಗೂ ಪುತ್ಥಳಿಗಳಿಗೆ ಪೂಜಾ ಕಾರ್ಯಕ್ರಮ ನಡೆಯಿತು. ಬೆಳಗ್ಗೆ 9 ಗಂಟೆಗೆ ಗ್ರಾಮದ ಮಹಿಳೆಯರಿಂದ ಬಸವಣ್ಣನವರ ತೊಟ್ಟಿಲು ಕಾರ್ಯಕ್ರಮ ಜರುಗಿತು.

ವಡಗಾಂವ ದಿಂದ ಸಂತಪುರನ ಅನುಭವ ಮಂಟಪದ ವರೆಗೆ ನೂರಾರು ಸಂಖ್ಯೆಯಲ್ಲಿ ಬೈಕ್ ರ‍್ಯಾಲಿ ನಡೆಯಿತು. ಅಲ್ಲಿ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಜೈ ಘೋಷಣೆ ಮೊಳಗಿಸಿದರು. ಈ ಸಂದರ್ಭದಲ್ಲಿ ಪ್ರಕಾಶ್ ಜೀರ್ಗೆ, ಬಸವರಾಜ್ ಚಿಕಲಿಂಗೆ, ರಾಜಕುಮಾರ್ ಲೆಂಡಧರೆ, ಮಹದೇವ್ ಕಲ್ಲಾ, ರವಿಕುಮಾರ್ ಸ್ವಾಮಿ, ಸೋಮನಾಥ್ ಮಠಪತಿ, ಭಾರತ ಸ್ವಾಮಿ, ಸಚಿನ್ ಸ್ವಾಮಿ, ಶ್ರೀಕಾಂತ್, ಬಸಪ್ಪಾ ಗಡ್ರಾ, ನಾಗೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

See also  ಬೀದರ್: ಗ್ರಾಮ ಪಂಚಾಯ್ತಿ ಅಧಿಕಾರಿಗೆ ಲಂಚ ನೀಡಲು ಹಣವಿಲ್ಲದೆ, ಎತ್ತುಗಳನ್ನೇ ನೀಡಲು ಮುಂದಾದ ರೈತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು