News Kannada
Tuesday, May 30 2023
ಬೀದರ್

ಬೀದರ್ ಜಿಲ್ಲೆಗೆ 2 ಸಚಿವ ಸ್ಥಾನಗಳ ಸಾಧ್ಯತೆ : ಈಶ್ವರ ಖಂಡ್ರೆ

Bidar district likely to get 2 ministerial berths: Ishwar Khandre
Photo Credit : News Kannada

ಬೀದ​ರ್‌: ಮತ್ತೊಮ್ಮೆ ಕಾಂಗ್ರೆಸ್‌ ಸರ್ಕಾ​ರ​ದಲ್ಲಿ ಸ್ಥಳೀಯ ಶಾಸ​ಕ​ರಿಗೆ ಸಚಿವ ಸ್ಥಾನದ ಸಾಧ್ಯ​ತೆ​ಗಳು ದಟ್ಟ​ವಾ​ಗಿದ್ದು, ಪ್ರಬಲ ಲಿಂಗಾ​ಯತ  ಸಮುದಾ​ಯದ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹಾಗೂ ಅಲ್ಪ​ಸಂಖ್ಯಾತ ಸಮು​ದಾ​ಯದ ರಹೀ​ಮ್‌​ಖಾನ್‌ ಇಬ್ಬರೂ ಸಿದ್ದ​ರಾ​ಮಯ್ಯ ಸರ್ಕಾ​ರದ ಸಚಿವ ಸಂಪುಟ ಸೇರುವ ಸಾಧ್ಯ​ತೆ​ಗಳು ದಟ್ಟ​ವಾ​ಗಿ​ವೆ.

ಕಳೆದ 2016ರಿಂದ 2018ರ ಸಿದ್ದ​ರಾ​ಮಯ್ಯ ಸರ್ಕಾ​ರದ ಅವ​ಧಿ​ಯ​ಲ್ಲಿ ಪೌರಾ​ಡ​ಳಿತ ಸಚಿ​ವ​ರಾ​ಗಿದ್ದ ಈಶ್ವರ ಖಂಡ್ರೆ ಹಾಗೂ 2018ರಿಂದ 2019ರ ವರೆಗೆ ರಾಜ್ಯದ ಯುವ​ಜನ ಸೇವಾ ಹಾಗೂ ಕ್ರೀಡಾ ಇಲಾ​ಖೆಯ ಸಚಿ​ವ​ರಾ​ಗಿದ್ದ ರಹೀಮ್‌ ಖಾನ್‌ ಇದೀಗ ಮತ್ತೊಂದು ಅವ​ಧಿಯ ಸಚಿವ ಸ್ಥಾನ​ ಸಿಕ್ಕಲ್ಲಿ ಅಚ್ಚ​ರಿ​ಯಿ​ಲ್ಲ.

ಸಿದ್ದರಾ​ಮಯ್ಯ ಸರ್ಕಾ​ರದಲ್ಲಿ ಸಚಿವ ಸ್ಥಾನ​ಕ್ಕಾಗಿ ಭಾರಿ ಪೈಪೋಟಿ ನಡೆ​ದಿ​ದೆ. ಅಲ್ಲದೆ ಲಿಂಗಾ​ಯತ ಹಾಗೂ ಮುಸ್ಲಿಂ ಸಮು​ದಾಯ  ಶಾಸಕರಿಗೇನೂ ಕಮ್ಮಿ ಇಲ್ಲ. ಅದಾಗ್ಯೂ ಭಾಲ್ಕಿ ಕ್ಷೇತ್ರಕ್ಕೆ 4 ಬಾರಿ ಶಾಸ​ಕ​ರಾಗಿ, ಸಿದ್ದ​ರಾ​ಮಯ್ಯ ಆಡ​ಳಿ​ತ​ದಲ್ಲಿ ಪೌರಾ​ಡ​ಳಿತ ಹಾಗೂ ಜಿಲ್ಲಾ ಉಸ್ತುವಾ​ರಿ ಸಚಿ​ವ​ರಾ​ಗಿಯೂ ಸೇವೆ ಸಲ್ಲಿ​ಸಿ​ರುವ ಈಶ್ವರ ಖಂಡ್ರೆ ಈಗ ಕೆಪಿ​ಸಿಸಿ ಕಾರ್ಯಾ​ಧ್ಯರೂ ಅಲ್ಲ​ದೆ, ಅಖಿಲ ಭಾರತ ವೀರ​ಶೈವ ಲಿಂಗಾ​ಯತ ಸಮು​ದಾ​ಯವನ್ನೂ ಪ್ರತಿ​ನಿ​ಧಿ​ಸು​ತ್ತಿ​ರುವ ರಾಜ​ಕಾ​ರಣಿ. ಕಲ್ಯಾಣ ಕರ್ನಾ​ಟಕ ಭಾಗ​ದ ಕಾಂಗ್ರೆಸ್‌ ಅಭ್ಯ​ರ್ಥಿ​ಗ​ಳನ್ನು ಆಯ್ಕೆ ಮಾಡಿ ಶಾಸಕರನ್ನಾಗಿಸುವಲ್ಲಿ ಬಹು​ಮುಖ್ಯ ಪಾತ್ರ ವಹಿ​ಸಿ​ದ್ದಾ​ರೆ ಎಂಬುವುದು ಸಿದ್ದು ಸರ್ಕಾ​ರದಲ್ಲಿ ಸಚಿವ ಸ್ಥಾನ​ಕ್ಕೆ ಸಮೀಪ ಕೊಂಡೊ​ಯ್ಯ​ಲಿದೆ.

See also  ಲಕ್ನೋ: ಅತ್ಯಾಚಾರ ಪ್ರಕರಣ, ಮೃತಪಟ್ಟವರ ಶವಸಂಸ್ಕಾರಕ್ಕಾಗಿ ಎಸ್ಒಪಿಗಳನ್ನು ಸಿದ್ಧಪಡಿಸಿದ ಯೋಗಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು