ಬೀದರ: ಸರ್ದಾಪೂರಾ ನೂರ ಖಾನ ತಾಲೀಮ ನಿವಾಸಿಯಾದ 30 ವರ್ಷದ ತಹಸೀನ್ ಫಾತೀಮಾ ಎತ್ತರ 5 ಅಡಿ ಇದ್ದು, ದುಂಡು ಮುಖ, ನೆಟ್ಟಗೆ ಮೂರು, ಸಾಧಾರಣ ಮೈಕಟ್ಟು, ಗೋಧಿ ಬಣ್ಣ ಇದ್ದು, ಒಂದು ಸೆಟ್ ಸೆಲ್ವಾರ ಮತ್ತು ಬ್ಲಾಕ್ ಕಲರ್ ಬುರ್ಖಾ ತೊಟ್ಟಿರುವ ಮೇ 24ರಂದು ಇಬ್ಬರು ಮಕ್ಕಳೊಂದಿಗೆ ತವರು ಮನೆ ಹುಮನಾಬಾದ ತಾಲೂಕಿನ ಡಾಕುಳಗಿ ಗ್ರಾಮಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋಗಿ ಕಾಣೆಯಾಗಿರುತ್ತಾರೆ.
ಮಕ್ಕಳಾದ ಅಮ್ರೀನ್ ಫಾತೀಮಾ ವಯಸ್ಸು 7 ವರ್ಷ, ಎತ್ತರ 3 ಅಡಿ 5 ಇಂಚು, ದುಂಡು ಮುಖ ಸಾಧಾರಣಾ ಮೈಕಟ್ಟು ಬಿಳಿ ಬಣ್ಣ ನೆಟ್ಟಗೆ ಮೂಗು ಮೈ ಮೇಲೆ ಹಳದಿ ಬಣ್ಣದ ಡ್ರೆಸ್ ತೊಟ್ಟಿರುತ್ತಾಳೆ. ಶಿರೀನ್ ಫಾತೀಮಾ ವಯಸ್ಸು 3 ವರ್ಷ ಇದ್ದು, ಎತ್ತರ 2 ಅಡಿ ಇದ್ದು, ದುಂಡು ಮುಖ ಸಾಧಾರಣಾ ಮೈಕಟ್ಟು ಬಿಳಿ ಬಣ್ಣ ನೆಟ್ಟಗೆ ಮೂಗು ಮತ್ತು ಮೈ ಮೇಲೆ ಜಾಮುನಿ ಬಣ್ಣದ ವಸ್ತ್ರ ತೊಟ್ಟಿರುತ್ತಾಳೆ.
ಈ ಮಹಿಳೆ ಮತ್ತು ಮಕ್ಕಳ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬೀದರ ನಗರ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದಾಗಿದೆ ಎಂದು ಬೀದರ ನಗರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರು ಕೋರಿದ್ದಾರೆ.