News Karnataka Kannada
Friday, April 19 2024
Cricket
ಬೀದರ್

ಬೀದರ್‌ ಜಿಲ್ಲೆಯಲ್ಲಿ ಶಾಂತಿಯುತ ಮತ ಎಣಿಕೆ: 4 ಬಿಜೆಪಿ , 2 ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು

Peaceful counting of votes in Bidar district: 04 BJP, 02 Congress candidates win
Photo Credit : News Kannada

ಬೀದರ್: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023, ಮೇ 13 ರಂದು ನಡೆದ ಮತ ಎಣಿಕೆ ಕಾರ್ಯವು ಬೀದರ ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆಯಿತು. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ 4 ಬಿಜೆಪಿ ಹಾಗೂ 2 ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಬೀದರ ಜಿಲ್ಲೆಯ 06 ವಿಧಾನಸಭಾ ಕ್ಷೇತ್ರಗಳ ತಾಲ್ಲೂಕುವಾರು ಮತ ಎಣಿಕೆ ವಿವರ: 47-ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ: ಆಮ್ ಆದ್ಮಿ ಪಕ್ಷದ ದೀಪಕ ಮಾಲಗಾರ ಇವರು 745 ಮತಗಳು ಪಡೆದಿರುತ್ತಾರೆ.

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ವಿಜಯಸಿಂಗ್ ಇವರು 78505 ಮತಗಳು ಪಡೆದಿರುತ್ತಾರೆ. ಭಾರತೀಯ ಜನತಾ ಪಕ್ಷದ ಶರಣು ಸಲಗಾರ ಇವರು 92920 ಮತಗಳನ್ನು ಪಡೆದಿದ್ದಾರೆ. ಜನತಾದಳ (ಸೆಕ್ಯೂಲರ್) ಪಕ್ಷದ ಸಂಜುಕುಮಾರ ವಾಡೇಕರ   1526 ಮತಗಳು ಪಡೆದಿದ್ದಾರೆ.. ಬಹುಜನ ಸಮಾಜ ಪಕ್ಷದ ಜ್ಞಾನೇಶ್ವರ ಸಿಂಗಾರೆ ಇವರು 215 ಮತಗಳು ಪಡೆದಿದ್ದಾರೆ.. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ರಾಜೇಶ್ವರಿ ವರ್ಧನ ಇವರು 157 ಮತಗಳು ಪಡೆದಿದ್ದಾರೆ.

ಉತ್ತಮ ಪ್ರಜಾಕೀಯ ಪಕ್ಷದ ಶಿವಾಜಿ ಸಿರಗಾಪೂರ 145 ಮತಗಳು ಪಡೆದಿರುತ್ತಾರೆ. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಎ) ಶ್ವೇತಾ ಆರತಿ 226 ಮತಗಳು ಪಡೆದಿರುತ್ತಾರೆ. ಪಕ್ಷೇತರ ಅಭ್ಯರ್ಥಿ ತಾತೆರಾವ ಅಪ್ಪಾರಾವ ಪಾಟೀಲ ಇವರು 605 ಮತಗಳು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ವೀರ ರೆಡ್ಡಿ ಬಸರೆಡ್ಡಿ ಪಾಟೀಲ ಇವರು 445 ಮತಗಳು ಪಡೆದಿದ್ದಾರೆ.
ಭಾರತೀಯ ಜನತಾ ಪಕ್ಷದ ಶರಣು ಸಲಗಾರ ಇವರು ತಮ್ಮ ಪ್ರತಿಸ್ಪರ್ಧಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ವಿಜಯಸಿಂಗ್ ಅವರ ವಿರುದ್ಧ 14,415 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ.

48-ಹುಮನಾಬಾದ ವಿಧಾನಸಭಾ ಮತಕ್ಷೇತ್ರ: ಜನತಾದಳದ (ಸೆಕ್ಯೂಲರ್) ಪಕ್ಷದ ಸಿ.ಎಂ.ಫಯಾಜ್ ಇವರು ಒಟ್ಟು 25900 ಮತಗಳು ಪಡೆದಿದ್ದಾರೆ. ಆಮ್ ಆದ್ಮಿ ಪಕ್ಷದ ಬ್ಯಾಂಕ್ ರೆಡ್ಡಿ ಇವರು 1413 ಮತಗಳು ಪಡೆದಿದ್ದಾರೆ.

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ರಾಜಶೇಖರ ಬಸವರಾಜ ಪಾಟೀಲ ಇವರು 73921 ಮತಗಳು ಪಡೆದಿದ್ದಾರೆ.ಭಾರತೀಯ ಜನತಾ ಪಕ್ಷದ ಸಿದ್ದು ಪಾಟೀಲ ಇವರು 75515 ಮತಗಳು ಪಡೆದಿದ್ದಾರೆ. ಇಂಡಿಯನ್ ಮುಮೆಂಟ್ ಪಕ್ಷದ ನಾಗನಾಥ ಮಾರುತಿ ಇವರು 749 ಮತಗಳು ಪಡೆದಿದ್ದಾರೆ.

ಆಲ್ ಇಂಡಿಯಾ ಮಜಿಫ್-ಇ-ಇನಕಿಲಾಬ್ ಎ-ಮಿಲತ್ ಪಕ್ಷದ ಮೊಹಮ್ಮದ ಅಬ್ರಾರ್ ಅಹ್ಮದ ಇವರು 356 ಮತಗಳು ಪಡೆದಿರುತ್ತಾರೆ. ಪಕ್ಷೇತರ ಆಭ್ಯರ್ಥಿಯಾದ ಪರವೇಜ್ ಪಾಟೀಲ ಇವರು 224 ಮತಗಳು ಪಡೆದಿದ್ದಾರೆ.

ಭಾರತೀಯ ಜನತಾ ಪಕ್ಷದ ಸಿದ್ದು ಪಾಟೀಲ ಇವರು ತಮ್ಮ ಪ್ರತಿಸ್ಪರ್ಧಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಾರ್ಟಿಯ ರಾಜಶೇಖರ ಬಸವರಾಜ ಪಾಟೀಲ ಅವರ ವಿರುದ್ಧ 1594 ಮತಗಳ ಅಂತರದಿದ ವಿಜಯ ಸಾಧಿಸಿರುತ್ತಾರೆ.

49-ಬೀದರ (ದಕ್ಷಿಣ) ವಿಧಾನಸಭಾ ಮತಕ್ಷೇತ್ರ: ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಶೋಕ ಖೇಣಿ ಇವರು 48509 ಮತಗಳು ಪಡೆದಿದ್ದಾರೆ. ಬಹುಜನ ಸಮಾಜ ಪಾರ್ಟಿಯ ಕಪಿಲ್ ಗೋಡಬೋಲೆ ಇವರು 645 ಮತಗಳು ಪಡೆದಿದ್ದಾರೆ.. ಆಮ್ ಆದ್ಮಿ ಪಾರ್ಟಿಯ ಎಂ.ನಸೀಮುದ್ದಿನ್ ಪಟೇಲ್ ಇವರು 5104 ಮತಗಳು ಪಡೆದಿರುತ್ತಾರೆ. ಜನತಾದಳ (ಸೆಕ್ಯೂಲರ್) ಬಂಡೆಪ್ಪಾ ಕಾಶಂಪೂರ ಇವರು 31374 ಮತಗಳು ಪಡೆದಿರುತ್ತಾರೆ. ಭಾರತೀಯ ಜನತಾ ಪಾರ್ಟಿಯ ಡಾ.ಶೈಲೇಂದ್ರ ಬೆಲ್ದಾಳೆ ಇವರು 49872 ಮತಗಳು ಪಡೆದಿರುತ್ತಾರೆ.

ಕರ್ನಾಟಕ ರಾಷ್ಟ್ರ ಸಮಿತಿಯ ತುಕಾರಾಮ ಗೌರೆ ಇವರು 779 ಮತಗಳು ಪಡೆದಿರುತ್ತಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಭೀಮಾಶಂಕರ ಪೊಲೀಸ್ ಪಾಟೀಲ ಇವರು 500 ಮತಗಳು ಪಡೆದಿರುತ್ತಾರೆ. ರಾಷ್ಟ್ರೀಯ ಸಮಾಜ ಪಕ್ಷದ ಶಿವರಾಜ ಬಾಬು ಇವರು 529 ಮತಗಳುಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಚಂದ್ರಾಸಿಗ್ ಇವರು 14837 ಮತಗಳು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಶಿವಕುಮಾರ ಪಾಟೀಲ ಇವರು 464 ಮತಗಳು ಪಡೆದಿದ್ದಾರೆ. ಭಾರತೀಯ ಜನತಾ ಪಕ್ಷದ ಡಾ.ಶೈಲೇಂದ್ರ ಬೆಲ್ದಾಳೆ ಇವರು ತಮ್ಮ ಪ್ರತಿಸ್ಪರ್ಧಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಶೋಕ ಖೇಣಿ ಇವರ ವಿರುದ್ಧ 1263 ಮತಗಳ ಅಂತರದಿದ ವಿಜಯ ಸಾಧಿಸಿದ್ದಾರೆ.

50-ಬೀದರ ವಿಧಾನಸಭಾ ಮತಕ್ಷೇತ್ರ: ಬಹುಜನ ಸಮಾಜ ಪಾರ್ಟಿಯ ಅನಿಲ ಕುಮಾರ ತುಕಾರಾಮ ಕಾಶಂಪೂರ ಇವರು 408 ಮತಗಳು ಪಡೆದಿರುತ್ತಾರೆ. ಭಾರತೀಯ ಜನತಾ ಪಕ್ಷದ ಈಶ್ವರ ಸಿಂಗ್ ಠಾಕೂರ ಇವರು 17779 ಮತಗಳು ಪಡೆದಿರುತ್ತಾರೆ. ಆಮ್ ಆದ್ಮಿ ಪಕ್ಷದ ಗುಲಾಮ ಅಲಿ ಇವರು 2032 ಮತಗಳು ಪಡೆದಿದ್ದಾರೆ.. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ರಹಿಮ್ ಖಾನ್ ಇವರು 69165 ಮತಗಳು ಪಡೆದಿದ್ದಾರೆ.. ಜನತಾದಳ (ಸೆಕ್ಯೂಲರ್) ಪಕ್ಷದ ಸೂರ್ಯಕಾಂತ ನಾಗಮಾರಪಳ್ಳಿ ಇವರು 58385 ಮತಗಳು ಪಡೆದಿದ್ದಾರೆ.

ಸಾರ್ವಜನಿಕ ಆದರ್ಶ ಸೇನಾ ಪಕ್ಷದ ಅಶೋಕ ಕರಂಜಿ ಗಾದಗಿ ಇವರು 481 ಮತಗಳು ಪಡೆದಿರುತ್ತಾರೆ. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಎ) ಪಕ್ಷದ ಮಹೇಶ ಗೋರನಾಳಕರ ಇವರು 287 ಮತಗಳು ಪಡೆದಿದ್ದಾರೆ.. ಕರ್ನಾಟಕ ರಾಷ್ಟ್ರೀಯ ಸಮಿತಿಯ ಹಣಮಂತ ಮಟ್ಟೆ ಇವರು 366 ಮತಗಳು ಪಡೆದಿದ್ದಾರೆ. ಪಕ್ಷೇತರ ಆಭ್ಯರ್ಥಿ ಗುಂಡೋಜಿ ಇವರು 240 ಮತಗಳು ಪಡೆದಿದ್ದಾರೆ.. ಪಕ್ಷೇತರ ಆಭ್ಯರ್ಥಿ ಶಶಿಕುಮಾರ ಪೊಲೀಸ್ ಪಾಟೀಲ ಚವಳಿ ಇವರು 469 ಮತಗಳು ಪಡೆದಿದ್ದಾರೆ.. ಪಕ್ಷೇತರ ಆಭ್ಯರ್ಥಿ ಗಣೇಶ್ವರ ಜಯಸೂರ್ಯ ಹೊಸಮನಿ ಇವರು 122 ಮತಗಳು ಪಡೆದಿರುತ್ತಾರೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ರಹಿಮ್ ಖಾನ ಇವರು ತಮ್ಮ ಪ್ರತಿಸ್ಪರ್ಧಿ ಜನತಾದಳ (ಸೆಕ್ಯೂಲರ್) ಪಾರ್ಟಿಯ ಸೂರ್ಯಕಾಂತ ನಾಗಮಾರಪಳ್ಳಿ ಅವರ ವಿರುದ್ಧ 10840 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ.

51-ಭಾಲ್ಕಿ ವಿಧಾನಸಭಾ ಮತಕ್ಷೇತ್ರ: ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಈಶ್ವರ ಖಂಡ್ರೆ ಇವರು 99451 ಮತಗಳು ಪಡೆದಿರುತ್ತಾರೆ. ಆಮ್ ಆದ್ಮಿ ಪಕ್ಷದ ತುಕಾರಾಮ ಹಜಾರೆ ತಂದೆ ನಾರಾಯಣರಾವ ಇವರು 949 ಮತಗಳು ಪಡೆದಿರುತ್ತಾರೆ. ಭಾರತೀಯ ಜನತಾ ಪಕ್ಷದ ಪ್ರಕಾಶ ಖಂಡ್ರೆ ಇವರು 71745 ಮತಗಳು ಪಡೆದಿರುತ್ತಾರೆ. ಜನತಾದಳ (ಸೆಕ್ಯೂಲರ್) ಪಕ್ಷದ ರೌಫ್ ಪಟೇಲ ಇವರು 636 ಮತಗಳು ಪಡೆದಿರುತ್ತಾರೆ. ಕರ್ನಾಟಕ ರಾಷ್ಟ್ರ ಸಮಿತಿಯ ಸಿದ್ರಾಮ ವೈಜನಾಥ ಇವರು 59 ಮತಗಳು ಪಡೆದಿರುತ್ತಾರೆ. ಪಕ್ಷೇತರ ಆಭ್ಯರ್ಥಿ ಅಬ್ದುಲ್ ಜಮಿಲ್ ಇನಾಮದಾರ ಇವರು 40 ಮತಗಳು ಪಡೆದಿರುತ್ತಾರೆ. ಪಕ್ಷೇತರ ಆಭ್ಯರ್ಥಿ ಅಂಬಾದಾಸ ಸಾಲಂಕೆ ಇವರು 62 ಮತಗಳು ಪಡೆದಿರುತ್ತಾರೆ.

ಪಕ್ಷೇತರ ಆಭ್ಯರ್ಥಿ ಉಮೇಶ ಗುಂಡೇರಾವ ಪಂಡರೆ ಇವರು 47 ಮತಗಳು ಪಡೆದಿರುತ್ತಾರೆ. ಪಕ್ಷೇತರ ಆಭ್ಯರ್ಥಿ ಗಣೇಶ ಗೋವಿಂದ ಇವರು 45 ಮತಗಳು ಪಡೆದಿರುತ್ತಾರೆ. ಪಕ್ಷೇತರ ಆಭ್ಯರ್ಥಿ ಪಾಂಡುರಗ ಶರಣಪ್ಪಾ ಇವರು 75 ಮತಗಳು ಪಡೆದಿರುತ್ತಾರೆ. ಪಕ್ಷೇತರ ಆಭ್ಯರ್ಥಿ ಬಿ.ಎ.ಬೋರೋಳೆ ಇವರು 202 ಮತಗಳು ಪಡೆದಿರುತ್ತಾರೆ. ಪಕ್ಷೇತರ ಅಭ್ಯರ್ಥಿ ವೈಜನಾಥ ಬಾಜಿರಾವ ತಗಾರೆ ಇವರು 376 ಮತಗಳು ಪಡೆದಿರುತ್ತಾರೆ. ಪಕ್ಷೇತರ ಅಭ್ಯರ್ಥಿ ಎಸ್.ವೈಜನಾಥ ಜಿ. ಇವರು 240 ಮತಗಳು ಪಡೆದಿರುತ್ತಾರೆ.

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಈಶ್ವರ ಖಂಡ್ರೆ ಇವರು ತಮ್ಮ ಪ್ರತಿಸ್ಪರ್ಧಿ ಭಾರತೀಯ ಜನತಾ ಪಾರ್ಟಿಯ ಪ್ರಕಾಶ ಖಂಡ್ರೆ ಅವರ ವಿರುದ್ಧ 27706 ಮತಗಳ ಅಂತರದಿದ ವಿಜಯ ಸಾಧಿಸಿದ್ದಾರೆ.

52-ಔರಾದ(ಬಿ) ವಿಧಾನಸಭಾ ಮತಕ್ಷೇತ್ರ: ಬಹುಜನ ಸಮಾಜ ಪಾರ್ಟಿಯ ಗುಣವಂತರಾವ ಸಗ್ರಾಮ ಇವರು 362 ಮತಗಳು ಪಡೆದಿರುತ್ತಾರೆ. ಜನತಾದಳ (ಸೆಕ್ಯೂಲರ್) ಪಕ್ಷದ ಜಯಸಿಂಗ್ ಧನಸಿಂಗ್ ಇವರು 1506 ಮತಗಳು ಪಡೆದಿರುತ್ತಾರೆ. ಭಾರತೀಯ ಜನತಾ ಪಕ್ಷದ ಪ್ರಭು ಬಿ.ಚವ್ಹಾಣ ಇವರು 81382 ಮತಗಳು ಪಡೆದಿರುತ್ತಾರೆ. ಆಮ್ ಆದ್ಮಿ ಪಕ್ಷದ ಬಾಬುರಾವ ಅಡಕೆ ಇವರು 945 ಮತಗಳು ಪಡೆದಿರುತ್ತಾರೆ.

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಭೀಮಸೇನರಾವ ಶಿಂಧೆ ಇವರು 71813 ಮತಗಳು ಪಡೆದಿರುತ್ತಾರೆ. ರಾಷ್ಟ್ರೀಯ ಮರಾಠಾ ಪಾರ್ಟಿಯ ಅನಿಲ ರಾಠೋಡ ಭಾವರಾವ ರಾಠೋಡ ಇವರು 637 ಮತಗಳು ಪಡೆದಿರುತ್ತಾರೆ. ಕರ್ನಾಟಕ ರಾಷ್ಟ್ರ ಸಮಿತಿಯ ಕೆ.ಆರ್.ಎಸ್.ಅಂಕುಶ ಇವರು 130 ಮತಗಳು ಪಡೆದಿರುತ್ತಾರೆ. ಜನಹಿತ ಪಕ್ಷದ ನರಸಿಂಗ ತುಕಾರಾಮ ಇವರು 136 ಮತಗಳನ್ನು ಪಡೆದಿರುತ್ತಾರೆ. ಸಮಾಜವಾದಿ ಜನತಾ ಪಾರ್ಟಿ (ಕರ್ನಾಟಕ) ರಾಹುಲ ಬಾಬುರಾವ ಇವರು 266 ಮತಗಳು ಪಡೆದಿರುತ್ತಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಡಾ.ಲಕ್ಷ್ಮಣ ಸೋರಹಳ್ಳಿ ಇವರು 270 ಮತಗಳು ಪಡೆದಿರುತ್ತಾರೆ. ಪಕ್ಷೇತರ ಆಭ್ಯರ್ಥಿ ಡಾ.ಎಂ.ಪಿ. ದಾರಕೇಶ್ವರಯ್ಯ ಇವರು 361 ಮತಗಳು ಪಡೆದಿರುತ್ತಾರೆ. ಪಕ್ಷೇತರ ಅಭ್ಯರ್ಥಿ ಸಂತೋಷ ಕುಮಾರ ಇವರು 331 ಮತಗಳು ಪಡೆದಿರುತ್ತಾರೆ.

ಭಾರತೀಯ ಜನತಾ ಪಕ್ಷದ ಪ್ರಭು ಬಿ.ಚವ್ಹಾಣ ಇವರು ತಮ್ಮ ಪ್ರತಿಸ್ಪರ್ಧಿ ಇಂಡಿಯನ್ ನ್ಯಾಷನ್ ಕಾಂಗ್ರೆಸ್ ಪಾರ್ಟಿಯ ಭೀಮಸೇನರಾವ ಶಿಂಧೆ ಅವರ ವಿರುದ್ಧ 9569 ಮತಗಳ ಅಂತರದಿದ ವಿಜಯ ಸಾಧಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯ ಪ್ರಕಟಣೆ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು