News Kannada
Friday, March 01 2024
ಬೀದರ್

ಸಿರಿಧಾನ್ಯ ಉತ್ಪಾದಕರ ಸಂಸ್ಥೆಗೆ 17 ದೇಶಗಳ ಪ್ರತಿನಿಧಿಗಳು ಭೇಟಿ

Representatives of 17 countries visited the Cereal Producers Association
Photo Credit : News Kannada

ಹುಲಸೂರ: ಇಲ್ಲಿನ ಮಹಿಳಾ ಕಿಸಾನ್ ಸಿರಿಧಾನ್ಯ ಉತ್ಪಾದಕರ ಸಂಸ್ಥೆಗೆ ಬುಧವಾರ 17 ದೇಶಗಳ ಪ್ರತಿನಿಧಿಗಳು ಭೇಟಿ ನೀಡಿ ಉತ್ಪಾದನೆ, ಸಂಸ್ಕರಣೆ ಹಾಗೂ ಮಾರಾಟ ಕುರಿತು ಮಾಹಿತಿ ಪಡೆದರು.

ಈ ಸಂಸ್ಥೆಯ ಕುರಿತು ಈಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮನ್ ಕಿ ಬಾತ್‌ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ್ದರು.  ಆಫ್ರಿಕಾ, ನೈಜೀರಿಯಾ, ಸುಡಾನ್, ಬಾಂಗ್ಲಾದೇಶ, ಉಗಾಂಡ, ಜಾಂಬಿಯಾ ಸೇರಿ ವಿವಿಧ ದೇಶಗಳ ಪ್ರತಿನಿಧಿಗಳು ತಂಡದಲ್ಲಿದ್ದರು. ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷೆ ಅಂಬಿಕಾ ಮೇತ್ರೆ, ಕೃಷಿ ಅಧಿಕಾರಿ ಮನೀಷಾ, ಸಂಗಪ್ಪ ಬಿ.ಸಿ ಅವರು ಸಿರಿಧಾನ್ಯದ ಉತ್ಪಾದನೆ ಹಾಗೂ ಸಂಸ್ಥೆ ಕುರಿತು ಮಾಹಿತಿ ನೀಡಿದರು. ನಂತರ ತಂಡದ ಸದಸ್ಯರನ್ನು ಸನ್ಮಾನಿಸಲಾಯಿತು.

ಗುರು ಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅನಿಲ ಭೂಸಾರೆ, ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ, ಮಲ್ಲಪ್ಪ ಧಬಾಲೆ, ಶಿವಾಜಿ ಮೋರೆ, ಪ್ರಗತಿಪರ ರೈತರು ಹಾಗೂ ಗಣ್ಯರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು