ಕಲಬುರಗಿ: ಲೋಕಸಭೆ ಚುನಾವಣೆಯಲ್ಲಿ ದೊಡ್ಡ ಖಗೆ೯, ಹಾಗೂ ಮಹಾ ನಗರ ಪಾಲಿಕೆ ಚುನಾವಣೆಯಲ್ಲಿ ಸಣ್ಣ ಖಗೆ೯ಯವರನ್ನು ಸೋಲಿಸಿ ಊರು ಬಿಡಿಸಿದ ಕಲಬುರಗಿ ಜನತೆಗೆ ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲು ಅಭಿನಂದನೆಗಳು ತಿಳಿಸಿದ್ದಾರೆ.
ನಗರದ ಜೇವರ್ಗಿ ರಸ್ತೆಯ ಕೆ.ಇ.ಬಿ.ಕಲ್ಯಾಣ ಮಂಟದ ಬಳಿ ಆಯೋಜಿಸಿದ್ದ ಜನಸ್ವರಾಜ್ ಸಮಾವೇಶದಲ್ಲಿ ಮಾಜಿ ಲೋಕಸಭಾ ಸದಸ್ಯ ಮಲ್ಲಿಕಾರ್ಜುನ ಖಗೆ೯ ಪುತ್ರ ಪ್ರಿಯಾಂಕ್ ಖಗೆ೯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಲಬುರಗಿಯ ಲೂಟಿ ಗ್ಯಾಂಗ್ , ಖಗೆ೯ ಅಂಗಡಿಯನ್ನು ಬಂದ ಮಾಡಿಸಿದ ತಮಗೆ ಅಭಿನಂದನೆಗಳು ತಿಳಿಸುತ್ತೇನೆ ಎಂದರು.
ಜನಸ್ವರಾಜ್ ಯಾತ್ರೆಗೆ ಜನರಿಂದ ಅಭೂತಪೂರ್ವ ಬೆಂಬಲ ಸಿಕ್ಕಿದೆ.ರಾಜ್ಯದ ರಕ್ಷಣೆ ಮಾಡಲು ಗೃಹ ಮಂತ್ರಿ ಅರಗ ಜ್ಞಾನೇಂದ್ರ ಹುಚ್ಚರಂತೆ ಕೆಲಸ ಮಾಡುತ್ತಿದ್ದಾರೆ ಎಂದರು. ಅರಗ ಜ್ಞಾನೇಂದ್ರ ಅವರು ರಾಜ್ಯದ ಗೃಹ ಮಂತ್ರಿಯಾದ ಮೇಲೆ ರಾಜ್ಯದಲ್ಲಿ ಯಾವ ಹಿಂದೂ ಕಾಯ೯ಕತ೯ರ ಹತ್ಯೆ, ಸೇರಿದಂತೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದರು.
ಹುಚ್ಚರಂತೆ ಕತ೯ವ್ಯ ನಿಭಾಯಿಸುತ್ತಿರುವ ಅರಗ ಜ್ಞಾನೇಂದ್ರ ಅವರ ಕಾಯ೯ ನೋಡಿ,ಕಾಂಗ್ರೆಸ್, ನವರಿಗೆ ಹುಚ್ಚು ಹಿಡಿದಿದೆ ಎಂದರು.