News Kannada
Friday, December 02 2022

ಕೊಪ್ಪಳ

ಕೊಪ್ಪಳ: ಬದಲಾವಣೆಯ ಗಾಳಿ ಬಿರುಗಾಳಿಯಾಗಿ ಬೀಸಲಿದೆ ಎಂದ ಬಸವರಾಜ ಬೊಮ್ಮಾಯಿ

Chief Minister Bommai meets Union Jal Shakti Minister
Photo Credit :

ಕೊಪ್ಪಳ: ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಬದಲಾವಣೆಯ ಗಾಳಿ ಬಿರುಗಾಳಿಯಾಗಿ ಬೀಸಲಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕುಷ್ಟಗಿ ಜಿಲ್ಲಾ ಬಾ.ಜ.ಪ ವತಿಯಿಂದ ಕುಷ್ಟಗಿಯ ಐ.ಎಂ ಕಚೇರಿ ಬಳಿ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಸರ್ಕಾರ ಹಾಲು ಉತ್ಪಾದಕ ರೈತರಿಗೆ, ರೈತರ ವಿದ್ಯಾರ್ಥಿಗಳ ಮಕ್ಕಳಿಗೆ ರೈತ ವಿದ್ಯಾನಿಧಿಯನ್ನು ನೇಕಾರರು, ಕೃಷಿ ಕೂಲಿ ಕಾರ್ಮಿಕರು, ಮೀನುಗಾರರು, ಆಟೋ ಹಾಗು ಟ್ಯಾಕ್ಸಿ ಚಾಲಕರ ಮಕ್ಕಳಿಗೂ ವಿಸ್ತರಿಸಿದೆ. ದುಡಿಯುವ ಕಾರ್ಮಿಕ ಮಕ್ಕಳಿಗೂ ನೀಡುತ್ತಿದ್ದೇವೆ. ಎಸ್.ಸಿ. ಎಸ್.ಟಿ ಬಡವರಿಗೆ 75 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುವ ಯೋಜನೆ ಈ ತಿಂಗಳಿನಿಂದ ಪ್ರಾರಂಭವಾಗಿದೆ. ಎಸ್.ಸಿ. ಎಸ್.ಟಿ ಯವರಿಗೆ ವಸತಿ ಯೋಜನೆ ಸಹಾಯಧನ 2 ಲಕ್ಷ ರೂ. ನೀಡುತ್ತಿದ್ದು, ಭೂ ಒಡೆತನ ಯೋಜನೆಯ ಘಟಕ ವೆಚ್ಚ 20 ಲಕ್ಷ ರೂ.ವರೆಗೆ ನೀಡುವ ತೀರ್ಮಾನ ಮಾಡಲಾಗಿದೆ. 100 ಹಾಸ್ಟೆಲ್‍ಗಳ ನಿರ್ಮಾಣ, ಸ್ತ್ರೀ ಸಾಮರ್ಥ್ಯ ಯೋಜನೆಯ ಮೂಲಕ ಪ್ರತಿ ಗ್ರಾಮದ ಸ್ತ್ರೀಶಕ್ತಿ ಸಂಘಕ್ಕೆ 5 ಲಕ್ಷ ರೂ.ಗಳವರೆಗೆ ಸಹಾಯಧನವನ್ನು ನೀಡುತ್ತಿದ್ದು, ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಒಟ್ಟು 5 ಲಕ್ಷ ಮಹಿಳೆಯರಿಗೆ ಈ ಯೋಜನೆ ತಲುಪಲಿದೆ. ಪ್ರತಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಯುವಕ ಸಂಘಗಳನ್ನು ರಚಿಸಿ ಸ್ವಯಂ ಉದ್ಯೋಗಕ್ಕೆ 5 ಲಕ್ಷ ರೂ.ಗಳನ್ನು ನೀಡುವ ಕಾರ್ಯಕ್ರಮ ರೂಪಿಸಲಾಗಿದೆ. ಯುವಕರಿಗೆ ಅವಕಾಶಗಳು, ರೈತರಿಗೆ ಪ್ರೋತ್ಸಾಹ, ನೀರಾವರಿಗೆ ಆದ್ಯತೆ ಮುಂತಾದ ಕಾಯಕ್ರಮಗಳನ್ನು ಮುಂದಿಟ್ಟುಕೊಂಡು, ನಿಮ್ಮ ಆಶೀರ್ವಾದ ಮುಂದೆ ಬಂದಿದ್ದೇವೆ. ಈ ಭಾಗದ ನೀರಾವರಿ, ಹಿಂದುಳಿದವರ, ಪರಿಶಿಷ್ಟ ಜನಾಂಗದವರ ಕಾರ್ಯಕ್ರಮವನ್ನು ರೂಪಿಸಲು ನಾವು ಬದ್ಧ ಎಂದರು.

ನಮ್ಮ ಸರ್ಕಾರದಿಂದ ದೊಡ್ಡ ಬದಲಾವಣೆ ಅದಕ್ಕೆ ದೊಡ್ಡ ಬದಲಾವಣೆಗಳನ್ನು ನಮ್ಮ ಸರ್ಕಾರ ತರುತ್ತಿದೆ. 28000 ಕೋಟಿ ರೂ.ಗಳನ್ನು ಪರಿಶಿಷ್ಟ. ವರ್ಗದವರ ಕಲ್ಯಾಣಕ್ಕೆ ಮೀಸಲಿಟ್ಟು ಖರ್ಚು ಮಾಡುತ್ತಿದ್ದೇವೆ. 100 ಅಂಬೇಡ್ಕರ್ ವಿದ್ಯಾರ್ಥಿನಿಲಯಗಳನ್ನು ಇದೇ ವರ್ಷ ನಿರ್ಮಾಣ ಮಾಡಲಾಗುತ್ತಿದ್ದು, 50 ಕನಕದಾಸರ ವಿದ್ಯಾರ್ಥಿನಿಲಯಗಳನ್ನು ನಿರ್ಮಿಸುತ್ತಿದ್ದೇವೆ. ಕನಕದಾಸರು ಹುಟ್ಟಿದ ಊರನಿಂದ ನಾನು ಬಂದಿದ್ದೇನೆ. ಬಾಡಾ ನನ್ನ ಕ್ಷೇತ್ರದಲ್ಲಿದೆ. ಸಂಪೂರ್ಣ ಭಕ್ತಿ ಭಾವ ನಮ್ಮ ಕಣಕಣದಲ್ಲಿ ಅಳವಡಿಸಿಕೊಂಡಿದ್ದೇವೆ. 14 ಕೋಟಿ ರೂ.ಗಳನ್ನು ವೆಚ್ಚ ಮಾಡಿ ಅಭಿವೃದ್ಧಿ ಮಾಡಿದ್ದೇವೆ. ಬಾಡ ಅಭಿವೃದ್ಧಿಗೆ ಬಿ.ಎಸ್ ಯಡಿಯೂರಪ್ಪ ಅವರು ಅನುದಾನ ನೀಡಿ, ಅವರ ವಿಚಾರಗಳನ್ನು ಯಾವ ರೀತಿ ಬಿಂಬಿಸಿದ್ದೇವೆ ಎಂದು ಹಾಲುಮತಸ್ತ ಬಂಧುಗಳು ಬಂದು ನೋಡಬೇಕು. ಯಾವುದೇ ಸಮುದಾಯಕ್ಕೆ ಭೇದಭಾವ ಮಾಡಿಲ್ಲ. ನಿಜವಾದ ಸಾಮಾಜಿಕ ನ್ಯಾಯ ನಾವು ನೀಡುತ್ತಿದ್ದೇವೆ ಎಂದರು.

ಕರ್ನಾಟಕದಲ್ಲಿ ಅಭಿವೃದ್ಧಿಯ ಪರ್ವ ಆರಂಭ

ಕುಷ್ಟಗಿಯ ಸಮಗ್ರ ಅಭಿವೃದ್ಧಿಯನ್ನು ನಾವು ಮಾಡುತ್ತೇವೆ. ಇಡೀ ದೇಶದಲ್ಲಿ ನರೇಂದ್ರ ಮೋದಿಯವರ ಪರವಾದ ಅಲೆ ಎದ್ದಿದೆ. ಇಡೀ ವಿಶ್ವದಲ್ಲಿ ಭಾರತದ ಬಗ್ಗೆ ಗೌರವ ಹೆಚ್ಚಿಸಿರು ಶ್ರೇಯಸ್ಸು ನರೇಂದ್ರ ಮೋದಿಯವರದ್ದು. ನರೇಂದ್ರ ಮೋದಿವರ ಕಾರ್ಯಕ್ರಮಗಳು ಬಡವರ ಪರವಾಗಿದೆ. ಕಿಸಾನ್ ಸಮ್ಮಾನ್, ಆಯುಷ್ಮಾನ್ ಭಾರತ್, ಎಲ್ಲವೂ ಜನರಿಗೆ ತಿಳಿದಿದೆ. ಇವೆಲ್ಲರೂ ಪರಿಣಾಮಕಾರಿಯಾಗಿ ಮುಟ್ಟಲು ಡಬಲ್ ಇಂಜಿನ್ ಸರ್ಕಾರ ಕಾರಣ. ಡಬಲ್ ಇಂಜಿನ್ ಸರ್ಕಾರ ಬಂದ ನಂತರ ಆರ್ಥಿಕವಾಗಿ, ಸಾಮಾಜಿಕವಾಗಿ ಕರ್ನಾಟಕವನ್ನು ಮುನ್ನಡೆಸಲಾಗುತ್ತಿದೆ. ಇದು ಮುಂದುವರೆಯಬೇಕಾದರೆ ಬಿಜೆಪಿ ಅಗತ್ಯ. ಮುಂಬರುವ ಚುನಾವಣೆಯಲ್ಲಿ ವಿಧಾನಸಭೆಯ 3 ನೇ ಮಹಡಿಯಲ್ಲಿ ಕಮಲವನ್ನು ಅರಳಿಸಿ ಮತ್ತೊಮ್ಮೆ ಜನಪರವಾದ ಸರ್ಕಾರವನ್ನು ತರುವ ವಿಶ್ವಾಸವಿದೆ. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡಲು ನಿಮ್ಮ ಆಶೀರ್ವಾದ ಅಗತ್ಯ ಎಂದರು. ನಿಮ್ಮ ಮತ, ವಿಶ್ವಾಸಕ್ಕೆ ನೀವು ಖುಷಿ ಪಡುವ ರೀತಿಯಲ್ಲಿ ಕೆಲಸ ಮಾಡುತ್ತೇವೆ. ಕರ್ನಾಟಕದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ ಎಂದರು.

See also  ಮೈಸೂರು: ಶಾಲೆಗೆ ಬೀಗ ಜಡಿದ ಡಿಡಿಪಿಐ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು