News Kannada
Friday, February 03 2023

ಕೊಪ್ಪಳ

ಕೊಪ್ಪಳ: ಕಾರು-ಟ್ರಾಕ್ಟರ್ ನಡುವೆ ಡಿಕ್ಕಿ, ಓರ್ವ ಸಾವು

7 killed, 20 injured in bus-truck collision in Islamabad
Photo Credit : Pixabay

ಕೊಪ್ಪಳ: ಕಬ್ಬಿನ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡಿದ್ದಾರೆ.

ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರ ಮತ್ತು ಪ್ರಗತಿ ನಗರ ನಡುವಿನ ಹಳ್ಳದ ಬಳಿ ನ.30ರ ಬುಧವಾರ ಬೆಳಗ್ಗೆ 5.30ಕ್ಕೆ ನಡೆದ ಈ ಘಟನೆ ಶ್ರೀರಾಮನಗರದ ದುರ್ಗಾ ಸ್ವೀಟ್ ಶಾಪ್ ಮಾಲೀಕ ನಾಗೇಶ್ ರಾವ್ (46) ಮೃತ ದುರ್ದೈವಿ.

ವಿದ್ಯಾನಗರದ ಸ್ವಾಮಿ ಅಯ್ಯಪ್ಪ ದೇವಸ್ಥಾನದಲ್ಲಿ ಅಯ್ಯಪ್ಪ ವ್ರತವನ್ನು ತೆಗೆದುಕೊಳ್ಳಲು ಹಿರಿಯ ಸ್ವಾಮಿಗಳೊಂದಿಗೆ ಕಾರಿನಲ್ಲಿ ಬರುತ್ತಿದ್ದಾಗ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ವಾಹನ ಚಲಾಯಿಸುತ್ತಿದ್ದ ನಾಗೇಶ್ ರಾವ್ ಸ್ಥಳದಲ್ಲೇ ಮೃತಪಟ್ಟರೆ, ಅಂಜೂರಿ ಕ್ಯಾಂಪ್ ನ ಶೇಷಾದ್ರಿ ರಾವ್ ಮತ್ತು ಸುರೇಶ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ವಿಜಯಪುರ: ಅನಾರೋಗ್ಯ ಪೀಡಿತ ಮಹಿಳೆ ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು