News Karnataka Kannada
Friday, April 26 2024
ಕೊಪ್ಪಳ

ಕೊಪ್ಪಳ: ಲಾರಿ ಮತ್ತು ಇಂಡಿಕಾ‌ ಕಾರು ಮುಖಾಮುಖಿ ಡಿಕ್ಕಿ, 6 ಜನರ ದುರ್ಮರಣ

Two-wheeler collides with govt bus, rider killed
Photo Credit : News Kannada

ಕೊಪ್ಪಳ: ಲಾರಿ ಮತ್ತು ಇಂಡಿಕಾ‌ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಹೆದ್ದಾರಿಯಲ್ಲಿ ವೇಗವಾಗಿ ಹೋಗುತ್ತಿದ್ದ ವೇಳೆ ಇಂಡಿಕಾ ಕಾರಿನ ಟೈರ್ ಸ್ಫೋಟಗೊಂಡಿರುವ ಪರಿಣಾಮ ನಿಯಂತ್ರಣ ಕಳಕೊಂಡು ಕಾರು ಇನ್ನೊಂದು ರಸ್ತೆಗೆ ನುಗ್ಗಿ ಲಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಲಕೇರಿ ಬಳಿ ಈ ದುರಂತ ಸಂಭವಿಸಿದೆ.ಕಾರಿನಲ್ಲಿದ್ದ ರಾಜಪ್ಪ ಬನಗೋಡಿ, ರಾಘವೇಂದ್ರ, ಅಕ್ಷಯ ಶಿವಶರಣ, ಜಯಶ್ರೀ, ರಾಖಿ, ರಶ್ಮಿಕಾ ಮೃತರು. ಇವರು ವಿಜಯಪುರ ಜಿಲ್ಲೆಯವರಾಗಿದ್ದು ಬೆಂಗಳೂರಿಗೆ ಹೊರಟಿದ್ದರು ಎಂಬ ಮಾಹಿತಿಯಿದೆ.ಲಾರಿಯ ಮುಂಭಾಗದಲ್ಲಿ ಕಾರು ಪೂರ್ತಿಯಾಗಿ ಒಳನುಗ್ಗಿದ್ದು ಶವಗಳನ್ನು ಹೊರಗಡೆ ತೆಗೆಯಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು