News Kannada
Friday, March 01 2024
ರಾಯಚೂರು

ರಾಯಚೂರು: ಬೈಕ್ ಅಪಘಾತ, ಹಿಂಬದಿ ಸವಾರ ಸ್ಥಳದಲ್ಲೇ ಸಾವು

Raichur: Bike accident, pillion rider dies on spot
Photo Credit : IANS

ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಬೇಡರ ಕಾರ್ಲಕುಂಟಿ ಗ್ರಾಮದ ಬಳಿ ಡಿ.23ರ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ನಲ್ಲಿ ಹಿಂಬದಿ ಕುಳಿತಿದ್ದ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ಲಿಂಗಸುಗೂರು ತಾಲೂಕಿನ ಯರಗಂಟಿ ಗ್ರಾಮದ ನಿವಾಸಿ ಶಿವಜ್ಞಾನಪ್ಪ ತಳವಾರ (38) ಮೃತಪಟ್ಟವರು. ಅಪಘಾತದಲ್ಲಿ ಸವಾರನಿಗೆ ಯಾವುದೇ ಗಾಯಗಳಾಗಿಲ್ಲ.

ಅವರು ಮಸ್ಕಿಯಿಂದ ಲಿಂಗಸುಗೂರಿಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಬೈಕ್ ಸವಾರನು ಜಾರಿ ಕೆಳಗೆ ಬಿದ್ದ ನಂತರ, ಲಾರಿ ಹಿಂಬದಿ ಸವಾರನಿಗೆ  ಡಿಕ್ಕಿ ಹೊಡೆದಿದೆ. ಲಾರಿಯನ್ನು ಪತ್ತೆಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಸ್ಥಳಕ್ಕೆ ಪಿಎಸ್ ಐ ಸಿದ್ಧರಾಮ ಬಿದರಾನಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು