News Kannada
Monday, February 26 2024
ರಾಯಚೂರು

ಭಗ್ನ ಪ್ರೇಮಿಯ ಹುಚ್ಚಾಟಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ: ಮಗಳ ಹೆಣದ ಮುಂದೆ ನಗುತ್ತಿದ್ದ ಅಪ್ಪ

Student commits suicide due to broken lover's madness, father laughs in front of daughter's body
Photo Credit : News Kannada

ರಾಯಚೂರು: ಭಗ್ನ ಪ್ರೇಮಿಯ ಹುಚ್ಚಾಟಕ್ಕೆ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಬಲಿಯಾಗಿದ್ದಾಳೆ. ಜಿಲ್ಲೆಯ ದೇವೆಂದ್ರ- ನಾಗಮ್ಮ ದಂಪತಿಯ ಮೂವರು ಪುತ್ರಿಯರಲ್ಲಿ ಹಂಪಮ್ಮ ಎಂಬಾಕೆ ಮೂರನೇ ಮಗಳಾಗಿದ್ದು, ಜೀವತೆತ್ತಿದ್ದಾಳೆ. 8ನೇ ತರಗತಿ ಓದುತ್ತಿದ್ದ ಹಂಪಮ್ಮ ನ ಮೇಲೆ ಅದೇ ಗ್ರಾಮದ ರಮೇಶ್ ಎನ್ನುವ ಯುವಕನೊಬ್ಬ ಕಣ್ಣು ಹಾಕಿದ್ದ. ಆತನ ಮಾತಿಗೆ ಮರುಳಾಗಿದ್ದ ಹಂಪಮ್ಮ ಆತನ ಜೊತೆ ಸ್ನೇಹ ಬೆಳಸಿದ್ದಾಳೆ. ಈ ವಿಚಾರ ತಿಳಿದ ಮನೆಯವರು ಆಕೆಯನ್ನು ಶಾಲೆಯಿಂದ ಬಿಡಿಸಿ ಆಕೆಗೆ ಮದುವೆ ಗೊತ್ತು ಮಾಡಿದ್ದಾರೆ.

ಈ ವಿಚಾರ ತಿಳಿದ ರಮೇಶ್ ಹಂಪಮ್ಮಳನ್ನು ಮದುವೆಯಾಗಬೇಕಿದ್ದ ಹುಡುಗನ ಫೋನ್ ನಂಬರ್ ಪಡೆದು ಆತನಿಗೆ ಹಂಪಮ್ಮನ ಜೊತೆಗಿನ ವಿಡಿಯೋ, ಫೋಟೊಗಳನ್ನು ಕಳುಹಿಸಿದ್ದಾನೆ. ಇದರಿಂದ ಮದುವೆ ನಿಂತು ಹೋಗಿದೆ. ಇತ್ತ ಮದುವೆ ಕಾನ್ಸಲ್ ಆದ ನೋವಲ್ಲಿ ಹಂಪಮ್ಮಳ ತಂದೆ ಮಾನಸಿಕವಾಗಿ ಅಸ್ವಸ್ಥರಾಗಿ, ಆಸ್ಪತ್ರೆ ಸೇರಿದ್ದಾರೆ. ಇದು ಹಂಪಮ್ಮನನ್ನು ಮತಷ್ಟು ಚಿಂತೆಗೀಡು ಮಾಡಿದೆ. ಹೀಗಾಗಿ ಆಕೆ ಜುಲೈ 30ರಂದು ಮನೆಯಲ್ಲಿ ನೇಣುಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಈ ಘಟನೆ ಬಳಿಕ ರಾಯಚೂರು ಮಹಿಳಾ ಠಾಣೆಯಲ್ಲಿ ರಮೇಶ್ ವಿರುದ್ಧ ಫೋಕ್ಸೋ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ. ದುರಂತ ವಿಚಾರವೆಂದರೇ ಮಗಳ ವಿಚಾರಗಳಿಂದ ಮಾನಸಿಕ ರೋಗಿಯಾಗಿರೊ ಹಂಪಮ್ಮಳ ತಂದೆ ದೇವೆಂದ್ರ ಮಗಳ ಅಂತ್ಯಸಂಸ್ಕಾರದ ವೇಳೆ ನಗುತ್ತಿದ್ದನಂತೆ. ಈ ದೃಶ್ಯ ಕರುಳುಹಿಂಡುವಂತಿತ್ತು. ಆರೋಪಿ ರಮೇಶ್ ಕಾಟಕ್ಕೆ ನಮ್ಮ ಇಡೀ ಕುಟುಂಬವೇ ನಲುಗಿಹೋಗಿದೆ ಎಂದು ಮೃತ ಹಂಪಮ್ಮಳ ಸಂಬಂಧಿಯೊಬ್ಬರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು