ಯಾದಗಿರಿ : ಸಾಲಭಾದೆ ತಾಳಲಾರದೆ ಯುವ ರೈತ ನಿಂಗಪ್ಪ(30) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ನಡೆದಿದೆ.
ಆತ್ಮಹತ್ಯೆಗೂ ಮುನ್ನ ಸಾಲಕೊಟ್ಟ ಫೈನಾನ್ಸ್ ಕಂಪನಿಗಳ ಕಿರುಕುಳ ಕುರಿತು ರೈತ ಮಾಡಿದ್ದ ವಿಡಿಯೋ ವೈರಲ್ ಆಗಿದೆ. ಅಲ್ಲದೇ ಖಾಸಗಿ ಫೈನಾನ್ಸ್ಗಳು ಬಡ್ಡಿ-ಚಕ್ರಬಡ್ಡಿ ನೆಪದಲ್ಲಿ ಸುಲಿಗೆ, ರೈತರಿಗೆ ಸರ್ಕಾರ ಸೌಲಭ್ಯಗಳ ನೀಡುತ್ತಿಲ್ಲವೆಂಬ ಮುಂತಾದ ಕಾರಣಗಳ ಡೆತ್ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ.
ಎಂ.ಎ. ಬಿಎಡ್ ವ್ಯಾಸಾಂಗ ಮಾಡಿದ್ದ ನಿಂಗಪ್ಪ ನೌಕರಿ ಸಿಗದೆ ಇದ್ದಾಗ, ಕೃಷಿಯಲ್ಲೇ ಖುಷಿ ಪಡಬಹುದು ಎಂಬ ನಂಬಿಕೆಯ ಮೇಲೆ ಒಕ್ಕಲುತನ ಆಶ್ರಯಿಸಿದ್ದರು. ಆದರೆ ಸತತ 4 ವರ್ಷದಿಂದ ಸೂಕ್ತವಾದ ಬೆಳೆ, ಬೆಲೆ ಸಿಗದ ಕಾರಣ ಸಾಲ ಮಾಡಿದ್ದರು ಎಂದು ತಿಳಿದುಬಂದಿದೆ. ಆದರೆ, ಸಾಲಗಾರರ ಕಾಟಕ್ಕೆ ಹೆದರಿ ಸೋಮವಾರ ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.