ಮಂಗಳೂರು: ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅರ್ಚಕ ವಾಸುದೇವ ಆಸ್ರಣ್ಣ ಅವರ ಮನೆಯಲ್ಲಿ ಅ. 4 ರಂದು ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿದೆ.ಬಂಧಿತ ಆರೋಪಿಗಳನ್ನು ಕಾರ್ಕಳ ತಾಲೂಕು ಪಳ್ಳಿ ಗ್ರಾಮದ ಭಂಡಾರಿಬೆಟ್ಟು ಬೈಲು ಮನೆಯ ಭರತ್ ಶೆಟ್ಟಿ (30), ಬಂಟ್ವಾಳ ತಾಲೂಕು ಮೇಲ್ಕಾರ್‌ನ ಮೊಹಮದ್ ಅಲಿ (35), ಮಂಗಳೂರು ತಾಲೂಕು ಪಾವಂಜೆಯ ಪುರುಷೋತ್ತಮ (44) ಮತ್ತು ಸೋಮೇಶ್ವರ ಉಚ್ಚಿಲದ ಹರೀಶ್ ಗಟ್ಟಿ (41) ಎಂದು ದೃಢಪಡಿಸಲಾಗಿದೆ.
ಈ ಬಂಧಿತ ಆರೋಪಿಗಳಿಂದ ದರೋಡೆ ಕೃತ್ಯಕ್ಕೆ ಬಳಸಿದ ಪಿಸ್ತೂಲು, ರಿವಾಲ್ವರ್ ಮತ್ತು ಮಾರಕಾಸ್ತಗಳನ್ನು ಹಾಗೂ 455 ಗ್ರಾಂ ಚಿನ್ನ ಮತ್ತು ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ.