News Kannada
Sunday, September 24 2023
ಕರಾವಳಿ

ಮಠದ ಎಲ್ಲಾ ಜವಾಬ್ದಾರಿಯನ್ನು ಕಿರಿಯ ಶ್ರೀಗಳಿಗೆ ಹಸ್ತಾಂತರಿಸಿದ ಅದಮಾರು ಹಿರಿಯ ಶ್ರೀಗಳು!!

Photo Credit :

ಮಠದ ಎಲ್ಲಾ ಜವಾಬ್ದಾರಿಯನ್ನು ಕಿರಿಯ ಶ್ರೀಗಳಿಗೆ ಹಸ್ತಾಂತರಿಸಿದ ಅದಮಾರು ಹಿರಿಯ ಶ್ರೀಗಳು!!

ಉಡುಪಿ: ಅಷ್ಟಮಠಗಳಲ್ಲಿ ಒಂದಾದ ಅದಮಾರು ಮಠದ ಎಲ್ಲಾ ಜವಾಬ್ದಾರಿಯನ್ನು ಹಿರಿಯ ಸ್ವಾಮೀಜಿ ಕಿರಿಯ ಯತಿಗಳಿಗೆ ಹಸ್ತಾಂತರಿಸಿ ಶೈಕ್ಷಣಿಕ ಕ್ಷೇತ್ರದತ್ತ ಮುಖ ಮಾಡಿದ್ದಾರೆ.

ವರ್ತಮಾನದಲ್ಲಿ ಇದೊಂದು ಅಪರೂಪದ ವಿದ್ಯಮಾನ. ರಾಜ್ಯದ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಉಡುಪಿಯ ಅದಮಾರು ಮಠದಲ್ಲಿ ಅಪರೂಪದ ವಿದ್ಯಮಾನ ನಡೆದಿದೆ.

60 ಹರೆಯದಲ್ಲಿರುವ ಹಿರಿಯ ಯತಿಗಳಾದ ವಿಶ್ವಪ್ರಿಯ ತೀರ್ಥರು ತನ್ನ ಕಿರಿಯ ಸ್ವಾಮೀಜಿಗೆ ಮಠದ ಎಲ್ಲಾ ಅಧಿಕಾರವನ್ನು ಬಿಟ್ಟುಕೊಟ್ಟಿದ್ದಾರೆ. ಕಳೆದ ನಾಲ್ಕು ವರ್ಷದ ಹಿಂದೆ ಸನ್ಯಾಸ ಸ್ವೀಕಾರ ಮಾಡಿರುವ ಈಶಪ್ರಿಯ ತೀರ್ಥರು ಇನ್ನು ಮುಂದೆ ಅದಮಾರು ಮಠದ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಲಿದ್ದಾರೆ. 33 ಹರೆಯದ ಈಶಪ್ರಿಯರು ಈ ಮೂಲಕ ಮಹತ್ತರ ಜವಾಬ್ದಾರಿ ನಿಭಾಯಿಸಲು ಸಜ್ಜಾಗಬೇಕಾಗಿದೆ. ಎಂಜಿನಿಯರಿಂಗ್ ಪದವೀಧರರಾಗಿರುವ ಕಿರಿಯ ಸ್ವಾಮೀಜಿ ಲೌಕಿಕ ಮತ್ತು ಧಾರ್ಮಿಕ ಶಿಕ್ಷಣ ಪಡೆದ ಅಪರೂಪದ ಪೀಠಾಧಿಪತಿಯಾಗಿದ್ದಾರೆ. ಆಚಾರ್ಯ ಮಧ್ವರಿಂದ ಪ್ರತಿಷ್ಠಾಪಿತ ಅಷ್ಟಮಠಗಳಲ್ಲಿ ಅದಮಾರು ಮಠವೂ ಒಂದು. 800 ವರ್ಷಗಳ ಪರಂಪರೆಯಲ್ಲಿ ಈಶಪ್ರಿಯರು 33ನೇ ಯತಿಯಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಅದಮಾರು ಹಿರಿಯ ಯತಿ ವಿಶ್ವಪ್ರಿಯ ತೀರ್ಥ, ನನಗೆ ಜವಾಬ್ದಾರಿ ಬಹಳ ಹಗುರವಾಗುತ್ತಿದೆ. ಈಶಪ್ರಿಯರಿಗೆ ವೈದಿಕ ವಿದ್ಯೆಯ ಜೊತೆ ಲೌಕಿಕ ವಿದ್ಯೆ ಇದೆ. ಕಿರಿಯ ಶ್ರೀಗಳಿಗೆ ಒಳ್ಳೆಯ ತಿಳುವಳಿಕೆ ಇದೆ. ಅದಮಾರು ಮಠದ ಸಮಸ್ತ ಜವಾಬ್ದಾರಿ ವಹಿಸಿಕೊಡುತ್ತೇನೆ. ಅದಮಾರು ಸಂಸ್ಥಾನ ಚೆನ್ನಾಗಿ ನಿಭಾಯಿಸುತ್ತಾರೆ ಎಂಬ ನಂಬಿಕೆಯಿದ್ದು, ನಾನು ನಿರಾಳವಾಗಿ ಇರಲು ಇಚ್ಚಿಸುತ್ತೇನೆ ಅಂತ ಹೇಳಿದ್ದಾರೆ.

ನಾನು ಪೀಠದಲ್ಲಿ ಇದ್ದು ಕಿರಿಯಶ್ರೀಗೆ ಸಹಕರಿಸುತ್ತೇನೆ. ಮುಂದಿನ ಪರ್ಯಾಯ ಯಾರು ಅಂತ ನಿರ್ಧಾರ ಮಾಡಿಲ್ಲ. ಶಿಕ್ಷಣ ಸಂಸ್ಥೆ ಬಗ್ಗೆ ನಾವು ನೋಡಿಕೊಳ್ಳುತ್ತೇವೆ. ಹಣಕಾಸು, ಪೂಜೆ, ಮಂತ್ರಾಕ್ಷತೆ ಕೊಡುವ ಜವಾಬ್ದಾರಿ ಕಿರಿಯಶ್ರೀಯರದ್ದಾಗಿದೆ. ನಮ್ಮ ಶಿಷ್ಯರು ಪೀಠವನ್ನು ಚೆನ್ನಾಗಿ ನಿಭಾಯಿಸಲಿದ್ದಾರೆ. ಮುಂದಿನ ಪರ್ಯಾಯದಲ್ಲಿ ಕಿರಿಯ ಶ್ರೀ ನಮಗೆ ಸಹಕರಿಸಲಿದ್ದಾರೆ ಎಂದರು.

ಅದಮಾರು ಮಠವು ದೇಶದಲ್ಲಿ ಅನೇಕ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿವೆ. ಬೆಂಗಳೂರಿನ ಪ್ರತಿಷ್ಠಿತ ಪೂರ್ಣಪ್ರಜ್ಞಾ ವಿದ್ಯಾ ಸಂಸ್ಥೆಗಳು ಅದಮಾರು ಮಠದ ಆಡಳಿತ ವ್ಯವಸ್ಥೆಗೆ ಒಳಪಟ್ಟಿದೆ. ಸದ್ಯ ಈ ಸಂಸ್ಥೆಗಳ ಜವಾಬ್ದಾರಿಯನ್ನು ಹಿರಿಯ ಯತಿಗಳೇ ನಿಭಾಯಿಸಲಿದ್ದಾರೆ. ಕಾಲಕ್ರಮೇಣ ಈ ಜವಾಬ್ದಾರಿಯನ್ನು ಕೂಡಾ ಕಿರಿಯ ಯತಿಗಳಿಗೆ ಬಿಟ್ಟುಕೊಡಲಿದ್ದಾರೆ. ಅದಮಾರು ಮಠದ ಎಲ್ಲಾ ಧಾರ್ಮಿಕ ಜವಾಬ್ದಾರಿ ಮತ್ತು ಆರ್ಥಿಕ ನಿರ್ವಹಣೆಯನ್ನು ಈಶ ಪ್ರಿಯರೇ ನಿಭಾಯಿಸಬೇಕಾಗಿದೆ. ಭಕ್ತರಿಗೆ ಅನುಗ್ರಹ ಮಂತ್ರಾಕ್ಷತೆ ನೀಡುವುದು, ಪಟ್ಟದ ದೇವರಿಗೆ ಪೂಜೆ ಮಾಡುವುದು ಈಶಪ್ರಿಯರ ಧಾರ್ಮಿಕ ಜವಾಬ್ದಾರಿಯಾಗಲಿದೆ. ಅಷ್ಟಮಠಗಳ ಸಭೆಗಳಿಗೆ ಕಿರಿಯ ಶ್ರೀಗಳೇ ಹಾಜರಾಗಲಿದ್ದಾರೆ. ಸದ್ಯ ಪಲಿಮಾರು ಮಠದ ಪರ್ಯಾಯ ಮಹೋತ್ಸವ ನಡೆಯುತ್ತಿದ್ದು, 2020ರಲ್ಲಿ ಅದಮಾರು ಮಠಕ್ಕೆ ಕೃಷ್ಣ ದೇವರ ಪೂಜಾಧಿಕಾರ ಸಿಗಲಿದೆ. ಪರ್ಯಾಯ ಪೂಜಾಧಿಕಾರವನ್ನು ಯಾರು ನಿಭಾಯಿಸುತ್ತಾರೆ ಅನ್ನೋದು ಸದ್ಯದ ಕುತೂಹಲವಾಗಿದೆ.

See also  ಉಡುಪಿ: ಪಾರ್ಕ್ ನಲ್ಲಿ ಹೂ ಕೀಳಲು ಬಂದವರಿಗೆ ಬುಸ್ ಗುಟ್ಟಿದ ಕಾಳಿಂಗ ಸರ್ಪ…..

ಪೂರ್ಣಪ್ರಮಾಣದ ಜವಾಬ್ದಾರಿ ಕೊಡಲು ಗುರುಗಳು ಮುಂದಾಗಿದ್ದರು. ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಸದ್ಯ ನನಗೆ ಭಾರವಾಗುತ್ತದೆ. ಅದಮಾರು ಮಠದ ಜವಾಬ್ದಾರಿ ನನಗೆ ಕೊಟ್ಟಿದ್ದಾರೆ. ಈ ಸ್ಥಾನಕ್ಕೆ ನಾನು ಬಹಳ ಚಿಕ್ಕವನಾಗಿದ್ದೇನೆ. ಗುರುಗಳು ನನ್ನ ಕೈಹಿಡಿದು ನಡೆಸಲಿದ್ದಾರೆ. ಸಂಸ್ಥಾನದ ಪೂಜೆ, ಸಂಸ್ಕಾರಗಳು- ಆಚರಣೆಯಲ್ಲಿ ಶ್ರದ್ಧೆಯಿಂದ ಭಾಗಿಯಾಗುತ್ತೇನೆ. ಶಿಕ್ಷಣ ಸಂಸ್ಥೆಗೆ ಕಾರ್ಯಾಧ್ಯಕ್ಷರಾಗಿ ನೇಮಿಸಿದ್ದಾರೆ. ಆ ಜವಾಬ್ದಾರಿಯನ್ನು ಕೂಡ ನಿರ್ವಹಣೆ ಮಾಡುತ್ತೇನೆ ಅಂತ ಅದಮಾರು ಈಶಪ್ರಿಯ ತೀರ್ಥ ಸ್ವಾಮೀಜಿ ನುಡಿದರು.

ಸಾಮಾನ್ಯವಾಗಿ ಕಾಲಾನಂತರ ಅಧಿಕಾರ ಹಸ್ತಾಂತರ ಮಾಡೋದು ಪದ್ಧತಿ. ಆದ್ರೆ ಅದಮಾರು ಮಠದ ವಿಶ್ವಪ್ರಿಯರು ಅವಧಿಗೂ ಮುನ್ನ ಅಧಿಕಾರ ಹಸ್ತಾಂತರ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಮುಂದಿನ ವರ್ಷ ನಡೆಯುವ ಪರ್ಯಾಯ ಪೀಠಕ್ಕೆ ಯಾರು ಉತ್ತರಾಧಿಕಾರಿ ಅನ್ನೋದು ಸದ್ಯದ ದೊಡ್ಡ ಕುತೂಹಲವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

192
Shreyas Vittal

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು