News Karnataka Kannada
Friday, April 19 2024
Cricket
ಕರಾವಳಿ

ದೇಶದಲ್ಲಿ ತುಘಲಕ್ ದರ್ಬಾರ್: ದಿನೇಶ್ ಗುಂಡೂರಾವ್

Photo Credit :

ದೇಶದಲ್ಲಿ ತುಘಲಕ್ ದರ್ಬಾರ್: ದಿನೇಶ್ ಗುಂಡೂರಾವ್

ಬಂಟ್ವಾಳ:  ಕೇಂದ್ರ ಸರ್ಕಾರದ ನೀತಿಯಿಂದ ಏಕಾಏಕಿ ನೋಟ್ ಬ್ಯಾನ್ ಮಾಡುವ ಮೂಲಕ  ದೇಶದಲ್ಲಿ ತುಘಲಕ್ ದರ್ಬಾರ್ ಅಧಿಕಾರದಲ್ಲಿದೆ ಎಂಬುವುದನ್ನು  ಪ್ರಧಾನಮಂತ್ರಿ ನರೇಂದ್ರ ಮೋದಿ ತೋರಿಸಿಕೊಟ್ಟಿದ್ದಾರೆ. ಇಂತಹಾ ಅವೈಜ್ಞಾನಿಕ ತೀರ್ಮಾನದಿಂದ ದೇಶದಲ್ಲಿ ಆರ್ಥಿಕ ಅರಾಜಕತೆ ನಿರ್ಮಾಣಗೊಂಡಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೇಸ್ ನ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಅವರು ಗುರುವಾರ ಕಳ್ಳಿಗೆಯಲ್ಲಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಸಮಿತಿ ಆಶ್ರಯದಲ್ಲಿ  ನಡೆದ “ಕಾಂಗ್ರೇಸ್ ನಡಗೆ ಸುರಾಜ್ಯದ ಕಡೆಗೆ ಕಾರ್ಯಾಗಾರ, ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ,  ಕರ್ನಾಟಕ ಸರ್ಕಾರದ ಸಾಧನೆ ಕುರಿತು ವಿಚಾರ ಮಂಡಿಸಿದ ಅವರು ಈ ನಿರ್ಧಾರದಿಂದ ಭವಿಷ್ಯದಲ್ಲಿ ಎಷ್ಟು ನಷ್ಟವಾಗಲಿದೆ ಎಂದು ಗೊತ್ತಾಗಲಿದೆ ಎಂದರು.

ನಾವು ಕೂಡ ನೂರಕ್ಕೆ ನೂರು ಸರಿ ಮಾಡಿದ್ದೇವೆ ಎಂದು ಹೇಳಿಕೊಳ್ಳುವುದಿಲ್ಲ. ಆದರೆ  ಜಾದೂ ಮಾಡಿ ನೂರು ದಿನ, ಐವತ್ತು ದಿನ, ಆರುತಿಂಗಳು, ಮೂರುವರ್ಷದಲ್ಲಿ ದೇಶವನ್ನು ಬದಲಾಯಿಸುತ್ತೇವೆ ಎಂದು ಬಿಜೆಪಿಯಂತೆ ಕಾಂಗ್ರೇಸ್ ಸುಳ್ಳು ಹೇಳುವುದಿಲ್ಲ. ಆದರೆ ಬಿಜೆಪಿ ಈ ರೀತಿಯ ಸುಳ್ಳು ಹೇಳಿಕೊಂಡೇ ದೇಶದ ಜನರನ್ನು ವಂಚಿಸುತ್ತಿದೆ ಎಂದ ಅವರು, ಅನಕ್ಷರತೆ, ಬಡತನ, ಶೋಷಣೆಯಂತಹಾ ಗಂಭೀರ ಸಮಸ್ಯೆಗಳಿಗೆ  ಕಾಂಗ್ರೇಸ್ ಪಕ್ಷ ಸ್ವಾತಂತ್ರ್ಯ ಪಡಕೊಂಡ ದಿನದಿಂದಲೇ ಉತ್ತರ ಹುಡುಕುತ್ತಾ ಬಂದಿದೆ. ಇದಕ್ಕೆ ಕಾಂಗ್ರೇಸ್ ನ ಹಲವು ನಾಯಕರ ಸಿದ್ದಾಂತಗಳೇ ಕಾರಣವಾಗಿದೆ ಎಂದರು.

ಪಕ್ಷ ಸಂಘಟನೆಯಲ್ಲಿ  ದಕ್ಷಿಣ ಕನ್ನಡ ರಾಜ್ಯಕ್ಕೆ ಮಾದರಿಯಾಗಿದೆ ಎಂದ ಅವರು, ಇದೇ ಜಿಲ್ಲೆ ದಕ್ಷಿಣ ಕನ್ನಡ. ಕೋಮುವಾದದ ತತ್ವಕ್ಕೆ ರಾಜಧಾನಿಯಾಗಿರುವುದು ದುರ್ದೈವದ ಸಂಗತಿ. ಜಿಲ್ಲೆಯಲ್ಲಿ ಇದರ ವಿರುದ್ದ ಕಾಂಗ್ರೇಸ್ ನ ಹೋರಾಟ ನಿರಂತರವಾಗಿ ಮುನ್ನಡೆಯಲಿದೆ  ಎಂದರು.

ರಾಜ್ಯ ಸರ್ಕಾರ ಪ್ರಣಾಳಿಕೆಯಲ್ಲಿ ಹೇಳಿಕೊಂಡದ್ದನ್ನು  ಅಧಿಕಾರ ಪಡೆದುಕೊಂಡ ದಿನದಿಂದ ಸಾಧಿಸುತ್ತಾ ಬಂದಿದ್ದು,  ಕ್ಷೀರಭಾಗ್ಯ, ಅನ್ನಭಾಗ್ಯ,  ಋಊಣಮುಕ್ತ, ವಸತಿ, ವಿದ್ಯಾಸಿರಿ, ಕೃಷಿಗೆ ಸಾಲ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಎಲ್ಲ ಇಲಾಖೆಗಳಿಗೆ ನೇರನೇಮಕಾತಿ ಮೂಲಕ  ಪಾರದರ್ಶಕ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಶಿಕ್ಷಕರ ನೇಮಕಾತಿ ನಡೆಸಲಾಗಿದ್ದು,  20 ಸಾವಿರ ಪೊಲೀಸರ ನೇಮಕಾತಿ ನಡೆದಿದೆ  ಎಂದ ಅವರು, ಮುಂದಿನ ಫೆಬ್ರವರಿಯಿಂದ  ಪಡಿತರದಾರರಿಗೆ ಬೇಳಕಾಳುಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದರು. ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ವನ್ ಆಗಿದ್ದು, ಸಕರ್ಾಋ ಎಲ್ಲಾ ಸಾಧನೆಗಳನ್ನು ಜನಸಾಮನ್ಯರಿಗೆ ತಿಳಿಸುವ ಕೆಲಸ ಕಾರ್ಯಕರ್ತರಿಂದ ನಡೆಯಬೇಕಿದೆ ಎಂದರು.

ವಿಪಕ್ಷಗಳು ಹಿಟ್ ಆ್ಯಂಡ್ ರನ್ ರಾಜಕಾರಣ ನಡೆಸುವ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿದ ಗುಂಡೂರಾವ್, ಡಿಕೆ.ರವಿ, ಗಣಪತಿ, ಕಲ್ಲಪ್ಪ ಹಂಡಿಬಾಗಿಲು, ನಂದಿತಾ ಸಹಿತ ಹೆಣಗಳ ಮೇಲೆಯೂ ರಾಜಕೀಯ ಮಾಡಿ ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದವರು ಟೀಕಿಸಿದರು.
 ಮೋದಿ ಏನು ತ್ಯಾಗ ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು ಅವರ ಹೆಂಡತಿಯನ್ನೂ ತ್ಯಾಗ ಮಾಡಿದ್ದಲ್ಲ, ಅವರ ಹೆಂಡತಿಯೇ ಇವರನ್ನು ತ್ಯಾಗ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು. ರಾಹುಲ್ ಗಾಂಧಿಯವರಿಗೆ  ಸಂಸತ್ತಿನಲ್ಲಿ ನೋಟ್ ಬ್ಯಾನ್ ವಿಚಾರದ ಕುರಿತು ಮಾತನಾಡಲು ಅವಕಾಶ ಕೊಡದಿದ್ದರೆ ಮುಂದಿನ ವಾರ ಬೆಳಗಾವಿಯಲ್ಲಿ ನಡೆಯುವ ಕಾಂಗ್ರೇಸ್ ಸಮಾವೇಶದಲ್ಲಿ  ಮೋದಿ ಕುರಿತು ಎಳೆಎಳೆಯಾಗಿ ಮಾತನಾಡಲಿದ್ದಾರೆ ಎಂದರು.

ಜಿಲ್ಲಾ  ಕಾಂಗ್ರೇಸ್ ಅಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಪ್ರಸ್ತಾವಿಕವಾಗಿ ಮಾತನಾಡಿದರು. ಕಾಂಗ್ರೇಸ್ ನ ನೇತೃತ್ವದಲ್ಲಿ ಭಾರತದ ದ ಸ್ವಾತಂತ್ಯ ಸಂಗ್ರಾಮ ಅತ್ಯಂತ ದೊಡ್ಡ ಜಾತ್ಯಾತೀತ ಚಳುವಳಿಯಾಗಿದೆ. ಆದರೆ ಇಂತಹ ಒಳ್ಳೆಯ  ಇತಿಹಾಸವನ್ನು ತಿರುಚುವ ಕೆಲಸ ಕೆಲವು ದುಷ್ಟಶಕ್ತಿಗಳಿಂದ ಆಗುತ್ತಿದೆ. ಧರ್ಮ, ದೇವರು ದೇಶಪ್ರೇಮ ದ  ಹೆಸರಿನಲ್ಲಿ  ದೇಶವನ್ನು  ಒಡೆಯುವ ಕೆಲಸ ಮಾಡುತ್ತಿರುವವರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಕಾಂಗ್ರೇಸ್ ನಿಂದ ಆಗಬೇಕಿದೆ ಎಂದರು.

ನಮ್ಮಿಂದ ಪಕ್ಷಕ್ಕೆ ಹಿತವಾಗಬೇಕೇ ಹೊರತು ಮಾರಕವಾಗಬಾರದು ನಮ್ಮ ಪಕ್ಷದಲ್ಲೂ ಕೆಲವು ಮಂದಿ  ಪಕ್ಷದೊಳಗೇ ಇದ್ದು ಪಕ್ಷದವರನ್ನೇ ದೂರುತ್ತಾರೆ, ಪಕ್ಷಾತೀತ ಹೋರಾಟವೇನಾದರೂ ಇದ್ದಲ್ಲಿ ಕಾಂಗ್ರೇಸ್ ನಾಯಕರನ್ನೂ ನಮ್ಮ ಮುಖಂಡರೇ ಟೀಕೆ ಮಾಡುತ್ತಾರೆ. ಐಸ್ ಕ್ಯಾಂಡಿಗಳಂತೆ  ಸಿಹಿ ಅನುಭವಿಸಿ ಕಡ್ಡಿ ಬಿಸಾಕಿದಂತೆ  ವರ್ತನೆ ತೋರುತ್ತಿದ್ದಾರೆ ಎಂದು ಜಿಲ್ಲೆಯ ಕಾಂಗ್ರೇಸ್ ನ ಭಿನ್ನ ರಿಗೆ ಛಾಟಿ ಬೀಸಿದರು.

ನರೇಂದ್ರ ದಾಮೋದರ ಮೋದಿಯಲ್ಲಿ ನರೇಂದ್ರ ಡ್ರಾಮೋದರ ಮೋದಿ ಎಂದು ಲೇವಡಿ ಮಾಡಿದ ಅವರು, ಇಂದಿರಾಗಾಂಧಿಯವರು ಬಡವರನ್ನು ಬ್ಯಾಂಕಿನ ಒಳಗೆ ಕಳುಹಿಸಿದ್ರು, ಆದರೆ ಮೋದಿ ಮಾತ್ರ ಬಡವರನ್ನು ಬ್ಯಾಂಕಿನ ಎದುರು ಕ್ಯೂ ನಿಲ್ಲಿಸಿದ್ರು ಎಂದರು. ಕಾಂಗ್ರೇಸ್ ನಿಂದಾಗಿ ಈ ದೇಶದ ಬಡವರು ಕೂಡ ಆತ್ಮ ಗೌಋವದಿಂದ ಬದುಕುವ ಅವಕಾಶಗಳನ್ನು ವಿವಿಧ ಹಂತದಲ್ಲಿ ಕಟ್ಟಿಕೊಟ್ಟಿದೆ ಎಂದರು ಕಾಂಗ್ರೇಸ್ ಕಾರ್ಯಕರ್ತರು ಪ್ರತೀ ಗ್ರಾಮದಲ್ಲೂ ಗಾಂಧಿಕಟ್ಟೆ ಸ್ಥಾಪಿಸಿ, ಚರಕದ ಧ್ವಜವನ್ನು ಹಾರಿಸಿ,  ತನ್ಮೂಲಕ ಗಾಂಧಿ ವಿಚಾರಧಾರೆಗಳನ್ನು ಎಲ್ಲೆಡೆ ಪಸರಿಸಬೇಕು ಎಂದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು  ಮೋಸ ಹೋದ ಜನತೆ ವಿಚಾರದಲ್ಲಿ ಮಾತನಾಡಿ ಕೇಂದ್ರಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಮಾತಿಗೆ ಮುನ್ನ ನಾನು  ಅಧಿಕೃತವಾಗಿ ಕಾಂಗ್ರೇಸ್ ಪಕ್ಷದ ಸದಸ್ಯನಲ್ಲ, ಆದರೆ ಕಾಂಗ್ರೇಸ್ನ ಸೈದ್ಧಾಂತಿಕ ಸಂಗಾತಿ. ಬಿಜೆಪಿ, ಸಂಘಪರಿವಾರವೆಂಬ ದೊಡ್ಡ ಪೆಡಂಬೂತವನ್ನು ಎದುರಿಸಲು ಜಾತ್ಯಾತರೆಲ್ಲಾ ಒಂದಾಗಬೇಕು ಎನ್ನುವ ಉದ್ದೇಶಕ್ಕೆ ಕಾಂಗ್ರೇಸ್ ನತ್ತ ಹೊರಳುತ್ತಿದ್ದೇನೆ ಎಂದರು.  ಬಳಿಕ ಶಾಸಕರಾದ ಡಾ. ಸುಧಾಕರ್, ಮೊಯ್ದಿನ್ ಬಾವಾ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ  ಎಲ್ ಹನುಮಂತಯ್ಯ, ವಿಧಾನಪರಿಷತ್  ಮುಖ್ಯ ಸಚೇತಕ ಐವನ್ ಡಿ’ಸೋಜ ವಿವಿಧ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.

ಮೂಡ ಅಧ್ಯಕ್ಷ ಸುರೇಶ್ ಬಲ್ಲಾಳ್, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ  ಚಂದ್ರಹಾಸ ಕರ್ಕೇರ,  ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಗೇರು ಅಭಿವೃದ್ದಿ ನಿಗಮದ ಅಧುಕ್ಷ ಬಿ. ಹೆಚ್.ಖಾದರ್, ಜಿಲ್ಲಾ ಕಾಂಗ್ರೇಸ್ನ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ  ಮಾಯಿಲಪ್ಪ ಸಾಲ್ಯಾನ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್  ಅಧ್ಯಕ್ಷ ಅಬ್ಬಾಸ್ ಆಲಿ ಸ್ವಾಗತಿಸಿದರು.  ಬಾಲಕೃಷ್ಣ ಕೊಡಾಜೆ, ರಾಜೀವ್ ಕಕ್ಕೆಪದವು ಕಾರ್ಯಕ್ರಮ ನಿರ್ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು