News Karnataka Kannada
Saturday, May 04 2024
ಕರಾವಳಿ

ರೊಟ್ಟಿ ತಯಾರಕನ ಮಗ ಅಂತಾರಾಷ್ಟ್ರೀಯ ಯೋಗಪಟು!

Photo Credit :

ರೊಟ್ಟಿ ತಯಾರಕನ ಮಗ ಅಂತಾರಾಷ್ಟ್ರೀಯ ಯೋಗಪಟು!

ಕಾರ್ಕಳ: ನಗರದ ತೆಳ್ಳಾರು ಸೇತುವೆ ಪಕ್ಕದಲ್ಲಿ ಕಡುಬಡತನದ ನಡುವೆ ಕೋರಿ ರೋಟಿ ತಯಾರಿಸಿ ಮಾರಾಟ ಮಾಡಿ ಸ್ವಾವಲಂಬಿ ಜೀವನ ಸಾಗಿಸುತ್ತಿರುವ ದಂಪತಿಗಳ ಪುತ್ರನೊಬ್ಬನಿಗೆ ಮಿಯೆಟ್ಮಾಂನಲ್ಲಿ ನಡೆಯಲಿರುವ ಅಂತರ್ರಾಷ್ಟ್ರೀಯ ಮಟ್ಟ ಯೋಗ ಸ್ವರ್ಧೆಯಲ್ಲಿ ಪಾಲ್ಗೊಳ್ಳುವುದಕ್ಕೆ ಅವಕಾಶ ಒದಗಿ ಬಂದಿದೆ.

ಮೂಲತಃ ಹೆಬ್ರಿಯ ಸೋಮೇಶ್ವರ ಚಂದ್ರನಾಯ್ಕ ಹಾಗೂ ಲೀಲಾವತಿ ದಂಪತಿಗಳು ಕಳೆದ ಕೆಲ ವರ್ಷಗಳ ಹಿಂದೆ ಕಾರ್ಕಳ ನಗರದ ತೆಳ್ಳಾರು ಸೇತುವೆ ಪಕ್ಕದಲ್ಲಿ ಐದು ಸೆಂಟ್ಸ್ ಜಾಗ ಖರೀದಿಸಿ ಶೆಡ್ ವೊಂದನ್ನು ಕಟ್ಟಿ ಅದರಲ್ಲಿಯೇ ಕೋರಿ ರೊಟ್ಟಿ ತಯಾರಿಸುವ ಮಾರಾಟ ಮಾಡಿ ಸಂಸಾರ ನಡೆಸುತ್ತಿದ್ದಾರೆ. ಈ ದಂಪತಿಗಳಿಗೆ ಮೂವರು ಮಕ್ಕಳಲ್ಲಿ ಕಿರಿಯವನಾದ ಸುದರ್ಶನ ನಾಯ್ಕ ಯೋಗ ಪಟುವಾಗಿ 2016 ಮೇ 16ರಂದು ವಿಯೆಟ್ಮಾಂನಲ್ಲಿ ಅಂತಾಷ್ಟ್ರೀಯ ಸ್ವರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಒದಗಿ ಬಂದಿದೆ. ಈತ ಮಿಯ್ಯಾರು ಮೊರಾರ್ಜಿ ದೇಸಾಯಿ ಆಂಗ್ಲಮಾಧ್ಯಮ ವಸತಿ ಸ್ಕೂಲ್ ನಲ್ಲಿ ಪ್ರಸಕ್ತ ಎಸ್ಎಸ್ಎಲ್ಸಿ ವಿದ್ಯಾರ್ಥಿಯಾಗಿದ್ದಾನೆ. 6ನೇ ತರಗತಿಯಿಂದಲೇ ಯೋಗದ ಸ್ವರ್ಧೆಯಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾನೆ. ತಾಲೂಕು, ಜಿಲ್ಲಾ ಹೀಗೆ ಒಂದೊಂದು ಮೆಟ್ಟಲು ಏರುತ್ತಾ ಬಂದಿರುವ ಈತನಿಗೆ ಬೆಂಗಳೂರಿನಲ್ಲಿ  ಯೋಗ ಫೆಡರೇಶನ್ ವತಿಯಿಂದ ಏರ್ಪಡಿಸಲಾಗಿದ್ದ ರಾಷ್ಟ್ರ ಮಟ್ಟದ ಸೌತ್ ಇಂಡಿಯಾ ಯೋಗಾಸನ ಚಾಂಪಿಯನ್ ಸ್ಪರ್ಧೆಯ ಎ,ಬಿ,ಸಿ ವಿಭಾಗದಲ್ಲಿ ಮೂರು ಚಿನ್ನದ ಪದಕ ಪಡೆದು ಮಿಯೆಟ್ಮಾಂ ನಡೆಯುವ ಅಂತಾರಾಷ್ಟ್ರೀಯ ಸ್ವರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಒದಗಿ ಬಂದಿದೆ.

ದೇಶಿಯ ಕಲೆಯಾಗಿರುವ ಯೋಗಾಸನ ಸ್ವರ್ಧೆಯಲ್ಲಿ ಪಾಲ್ಗೊಳ್ಳುವುದಕ್ಕೆ ಸುದರ್ಶನನಿಗೆ ಯೋಗ ಕೂಡಿ ಬಂದಿರುವುದು ಹೆತ್ತವರ ಪಾಲಿಗೆ ಸಂತಸದ ವಿಚಾರವಾಗಿದ್ದರೂ ಉಬ್ಬಯ ಸಂಕಟ ಎದುರಿಸುವಂತಾಗಿದೆ. ಇದಕ್ಕೆ ಪ್ರಮುಖ ಕಾರಣವಾಗಿರುವುದು ಆರ್ಥಿಕ ಅಡಚಣೆ. ಸುಮಾರು 1.80 ಲಕ್ಷ ಖರ್ಚು ಭರಿಸಿ ಸ್ವರ್ಧೆಯಲ್ಲಿ ಪಾಲ್ಗೊಳ್ಳುವುದು ಸುದರ್ಶನ ಪಾಲಿಗೆ ಕಬ್ಬಿಣದ ಕಡಲೆಯೇ ಸರಿ. ಆದುದರಿಂದ ಆತನ ಹೆತ್ತವರು ವಿವಿಧ ಸಂಘ-ಸಂಸ್ಥೆ-ಜನಪ್ರತಿನಿಧಿಗಳಿಗೆ ಮೊರೆ ಹೋಗಿದ್ದಾರೆ. ಕೆಲವರು ಹೀಗಾಗಲೇ ನೆರವಿನ ಹಸ್ತ ಚಾಚಿದ್ದಾರೆಯಾದರೂ ಇನ್ನೂ ಕೆಲವರು ಭರವಸೆ ನೀಡಿದ್ದಾರೆ.

ಮುರುಕು ಮನೆಯಲ್ಲಿ ಪ್ರಶಸ್ತಿ ಪತ್ರ, ಫಲಕ
ಕಲೆಗೆ ಬಡವ ಧನಿಕನೆಂಬ ಭೇದಭಾವ ಎಂಬುವುದಿಲ್ಲ ಎಂಬುವುದಕ್ಕೆ ಚಂದ್ರನಾಯ್ಕರ ವಾಸ ಮನೆ ಉತ್ತಮ ನಿದರ್ಶನವಾಗಿದೆ. ಸಿಮೆಂಟ್ ಗಾರೆ ರಹಿತವಾದ ಕೆಂಪುಕಲ್ಲಿಗೆ ಮಣ್ಣಿನ ಲೇಪನದ ಗೋಡೆ, ಸಿಮೆಂಟ್ ಶೀಟ್, ಪುರಾತನ ಸಂಸ್ಕೃತಿ ಎಂಬಂತೆ ಸೆಗಣಿ ಸಾರಣೆಯಳ್ಳ ಹಾಸು ನೆಲ. ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವಂತಹ ವರದಿಗಳು, ಗೌರವಿಸಲ್ಪಟ್ಟ ಹಾರಗಳು ಗೋಡೆಯ ಮೇಲ್ಬಾಗದಲ್ಲಿ ರಾರಾಜಿಸುತ್ತಿದೆ. ಮೂವರು ಮಕ್ಕಳು ಕಲಿಕೆಯಲ್ಲಿ ಮಾತ್ರ ಸಾಧನೆ ಮಾಡಿದಲ್ಲ. ಕ್ರೀಡಾಕೂಟದಲ್ಲಿ, ಯೋಗದ ಜೊತೆಗೆ ಚಿತ್ರ ಕಲೆಯಲ್ಲಿ ಹೆಸರು ಗಳಿಸಿದ್ದಾರೆ ಎಂಬುವುದಕ್ಕೆ ಗೋಡೆ ಮೇಲೆ ಅಂಟಿಸಿರುವ ಕಾಗದಲ್ಲಿ ಮೂಡಿಬಂದಿರುವ ಚಿತ್ರಕಲೆ ಕಾರಣವಾಗಿದೆ.
ಚಂದ್ರನಾಯ್ಕ ಹಾಗೂ ಲೀಲಾವತಿ ದಂಪತಿಗಳ ಮೂವರು ಮಕ್ಕಳಲ್ಲಿ ಮೊದಲಾಕೆ ಸುಮ ಪ್ರಸಕ್ತ ನಿಟ್ಟೆ ಕಾಲೇಜಿನಲ್ಲಿ ಕಲಿಕೆ ಮುಂದುವರಿಸುತ್ತಿದ್ದಾಳೆ. ಓಟದ ಕ್ರೀಡಾಪಟುವಾಗಿ ಹಲವು ಪ್ರಶಸ್ತಿಗಳನ್ನು ತನ್ನ ಬಗಲಿಗೆ ಹಾಕಿಕೊಳ್ಳುವ ಮೂಲಕ ದೇಶೀಯ ಮಟ್ಟದಲ್ಲಿ ಹೆಸರುಗಳಿಸಿದ್ದಾಳೆ. ಎರಡನೇಯಾಕೆ ಸುಶ್ಮೀತಾ ಯೋಗಪಟುವಾಗಿದ್ದು ಈಕೆ ಹಲವು ಸ್ವರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಶಸ್ತಿಗಳನ್ನು ತನ್ನದಾಗಿರಿಸಿದ್ದಾರೆ. ಪ್ರಸಕ್ತ ಮಿಯ್ಯಾರು ಮೊರಾ್ಜಿ ದೇಸಾಯಿ ವಿಸ್ಯಾ ಸಂಸ್ಥೆಯಲ್ಲಿ ಕಲಿಕೆ ಮುಂದುವರಿಸುತ್ತಿದ್ದಾಳೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು