ಮೂಡುಬಿದರೆ: ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಬಾಲಕ ಮತ್ತು ಬಾಲಕಿಯರ ತಂಡಗಳು ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಗುರುವಾರ ಮುಕ್ತಾಯಗೊಂಡ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಅವಳಿ ಪ್ರಶಸ್ತಿಯನ್ನು ಗಳಿಸಿಕೊಂಡಿದೆ.
ಬಾಲಕರ ವಿಭಾಗದಲ್ಲಿ ಫೈನಲ್ ನಲ್ಲಿ ಮಂಗಳೂರು ಗ್ರಾಮಾಂತರವನ್ನು ಪ್ರತಿನಿಧಿಸಿದ ಆಳ್ವಾಸ್ ತಂಡ ಬೆಳ್ತಂಗಡಿಯನ್ನು ಪ್ರತಿನಿಧಿಸಿದ ಸೆಕ್ರೇಡ್ ಹಾರ್ಟ್ ಪ.ಪೂ. ಕಾಲೇಜು ತಂಡವನ್ನು 29-4 ಹಾಗೂ 29-9 ನೇರ ಸೆಟ್ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು.
ಬಾಲಕಿಯರ ವಿಭಾಗದ ಫೈನಲ್ ನಲ್ಲಿ ಆಳ್ವಾಸ್ ತಂಡ ಬಂಟ್ವಾಳವನ್ನು ಪ್ರತಿನಿಧಿಸಿದ ಕಾರ್ಮೆಲ್ ಪ.ಪೂ. ಕಾಲೇಜನ್ನು 29-0 ಹಾಗೂ 29-4 ನೇರ ಸೆಟ್ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು.
ಉದ್ಯಮಿ ದೇವಿಪ್ರಸಾದ್ ಶೆಟ್ಟಿ ಚಾಂಪಿಯನ್ ಶಿಪ್ ಅನ್ನು ಉದ್ಘಾಟಿಸಿದರು. ಸಮಾರೋಪ ಸಮಾರಂಭದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಸಹ ಆಡಳಿತಾಧಿಕಾರಿ ಆಭಿನಂದನ್ ಶೆಟ್ಟಿ ಪ್ರಶಸ್ತಿ ವಿತರಿಸಿದರು. ಪ್ರಾಂಶುಪಾಲ ರಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಶಶಿಧರ್ ಮಾಣಿ ಉಪಸ್ಥಿತರಿದ್ದರು.