ಕಾರ್ಕಳ: ಕುಕ್ಕುಂದೂರು ಜಯಂತಿ ನಗರದ ರಾಘವೇಂದ್ರ ಮೊಯಿಲಿ (27) ಎಂಬಾತನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣಾಧಿಕಾರಿ ಇಮ್ರಾನ್ ವಿರುದ್ಧ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಸಾಲ್ಮರ್ ಜೀನಸು ಅಂಗಡಿಗೆ ಸಾಮಾಗ್ರಿ ಖರೀದಿಸಲು ಹೋಗಿದ್ದ ರಾಘವೇಂದ್ರ ಅಚಾನಕ್ ಆಗಿ ಅಲ್ಲಿದ್ದ ಮಹಿಳೆಯಯೊಬ್ಬರಿಗೆ ತಾಗಿರುವುದು ಈ ಎಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.
ನಗರ ಠಾಣಾಧಿಕಾರಿ ಇಮ್ರಾನ್ ಎಂಬವರ ಪತ್ನಿ ಆ ಮಹಿಳೆಯಾಗಿದ್ದು ಯುವಕ ವರ್ತನೆಯ ಬಗ್ಗೆ ಪತಿಯ ಗಮನಕ್ಕೆ ತಂದಿದ್ದಳು. ಅದೇ ಸಂದರ್ಭದಲ್ಲಿ ಯುವಕನನ್ನು ಕರೆದ ಎಸೈ ಕೆನ್ನೆಗೆ ಬಾಸುಂಡೆ ಬಾರಿಸಿದರು. ಘಟನಾ ಸ್ಥಳಕ್ಕೆ ಜೀಪನ್ನು ಕರೆಯಿಸಿ ಅದರಲ್ಲಿ ಕೂಡಿ ಠಾಣೆ ಎಳೆದೊಯ್ದು ರಾಘವೇಂದ್ರನಿಗೆ ಹಿಗ್ಗಾಮುಗ್ಗವಾಗಿ ಥಳಿಸಿದ್ದಾರೆ. ಮಂಗಳವಾರ ರಾತ್ರಿ ಸುಮಾರು 9.30ರ ವೇಳೆಗೆ ಸಾಮಾಗ್ರಿ ಖರೀದಿಸಿ ಮನೆಗ ಬರುತ್ತಿದ್ದ ಸಂದರ್ಭದಲ್ಲಿ ಅಂಗಡಿ ಮುಂದೆ ತಡೆದು ನಿಲ್ಲಿಸಿದ ನಗರ ಠಾಣೆಯ ಎಸೈ ಇಮ್ರಾನ್, ನೀನು ಹೆಂಗಸ ಮೈ ಮುಟ್ಟುತ್ತೀ ಎಂಬ ವಿಚಾರವನ್ನು ಮುಂದಿಟ್ಟು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೆನ್ನೆಗೆ ಬಾರಿಸಿ ತುಳಿದು ಠಾಣೆಗೆ ಎಳೆದು ಹೋಗಿ ಎರಡು ಕೈಗಳನ್ನು ಇಬ್ಬರು ಪೊಲೀಸ್ ಕಾನ್ಸ್ ಟೇಬಲ್ ರವರು ಹಿಡಿದು ಬೆತ್ತದಿಂದ ಗುದದ ಭಾಗಕ್ಕೆ ಸಿಕ್ಕಪಟ್ಟೆ ಹೊಡೆದಿದ್ದಾರೆ. ಮಾತ್ರವಲ್ಲದೇ ಹೆಬ್ಬೆರಳು ಎಲುಬು ತುಂಡರಿಸಿ ಹಾಕಿದ್ದಾರೆ.
ಅಲ್ಲಿಂದ ಜೀಪಿನಲ್ಲಿ ತಾಲೂಕು ಸರಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಇಬ್ಬರು ಪೊಲೀಸ್ ಕಾನ್ಸ್ ಟೇಬಲ್ ಅವರು ಜೀಪಿನಲ್ಲಿ ತಂದು ಬಿಟ್ಟು ಹೋಗಿದ್ದಾರೆ. ಆ ಸಂದರ್ಭದಲ್ಲಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣದಿಂದಾಗಿ ಬುಧವಾರ ಸಂಜೆ ವೇಳೆಗೆ ಆಸ್ಪತ್ರೆಗೆ ದಾಖಲಾಗಬೇಕಾಯಿತು. ನೆರೆಕರೆಯವ ಸಹಾಯದಿಂದ ಮಂಗಳವಾರ ತಡೆ ರಾತ್ರಿ ಆಸ್ಪತ್ರೆಯಿಂದ ಮನೆಗೆ ಹೋಗಬೇಕಾಯಿತು. ಘಟನೆಯಿಂದ ನಡೆದಾಡುವುದಕ್ಕೂ,ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಯಾವುದನ್ನು ಬರೆಯಲು ಸಾಧ್ಯವಾಗುವುದಿಲ್ಲ.
ಪತಿ ಶೀನ ಮೊಯಿಲಿ ಅವರು ವಿಜಯಬ್ಯಾಂಕ್ ನಲ್ಲಿ ಕರ್ತವ್ಯ ನಿರ್ವಹಿಸಿಸುತ್ತಿದ್ದ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಹೋಟೆಲ್ ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡುತ್ತಿದ್ದ ಆತ ತಂದೆಯ ಕೆಲಸ ಸಿಗಬಹುದೆಂಬ ಕಾರಣಕ್ಕೆ ಅದನ್ನು ಮೊಟಕುಗೊಳಿಸಿ ಇದೀಗ ಮಂಗಳೂರಿನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ದುಡಿಯುತ್ತಿದ್ದಾನೆ. ಇಬ್ಬರು ಮಕ್ಕಳಲ್ಲಿ ಒಬ್ಬ ಮಗಳಿಗೆ ವಿವಾಹವಾಗಿದ್ದು ಆ ಸಂದರ್ಭದಲ್ಲಿ ಬ್ಯಾಂಕ್ ನಿಂದ ಅಗತ್ಯ ಸಾಲ ಪಡೆದಿದ್ದು ಅದನ್ನು ಹಾಗೂ ಮನೆ ಖರ್ಚಿನ ಜವಾಬ್ದಾರಿಯನ್ನು ರಾಘವೇಂದ್ರ ನಿರ್ವಹಿಸುತ್ತಿದ್ದನು. ಹೆಬ್ಬೆರಳು ತುಂಡರಿಸಿದಲ್ಲದೇ ಕುಳಿತುಕೊಳ್ಳಲು ಅಸಾಧ್ಯವಾದ ಪರಿಸ್ಥಿತಿಯನ್ನು ತಂದೊಡ್ಡಿದ್ದಾರೆ ತಾಯಿ ಲಕ್ಷ್ಮೀ ಕಣ್ಣೀರು ಸುರಿಸುತ್ತಾ ಹೇಳಿದರು.
ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ನೀಡಿದನೆಂಬ ಮಹಿಳೆ ನೀಡಿದ ದೂರಿನನ್ವಯ ಆರೋಪಿ ರಾಘವೇಂದ್ರನ ವಿರುದ್ಧ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಪೊಲೀಸ್ ಠಾಣೆಯಲ್ಲಿ ಎಸೈ ಇಮ್ರಾನ್ ಕೂಡಿ ಹಾಕಿ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ರಾಘವೇಂದ್ರ ನೀಡಿರುವ ದೂರಿನ ಹಿನ್ನಲೆಯಲ್ಲಿ ನಗರ ಠಾಣೆಯ ಎಸೈ ಇಮ್ರಾನ್ ವಿರುದ್ಧ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಎಸ್ಪಿ ಅವರ ನಿರ್ದೇಶದಂತೆ ಮುಂದಿನ ತನಿಖೆ ನಡೆಸಲಾಗುವುದು.