News Kannada
Friday, July 01 2022

ಕರಾವಳಿ

ಸ್ನೇಹಾಲಯದ ನೂತನ ಕಟ್ಟಡ ಉದ್ಘಾಟನೆ - 1 min read

Photo Credit :

ಸ್ನೇಹಾಲಯದ ನೂತನ ಕಟ್ಟಡ ಉದ್ಘಾಟನೆ

ಕಾಸರಗೋಡು: ಮಂಜೇಶ್ವರ ಪಾವೂರು ಬಾಚಲಿಕೆ ಮಾನಸಿಕ ಅಸ್ವಸ್ಥರ ಪುನರ್ ವಸತಿ ಕೇಂದ್ರವಾದ ಸ್ನೇಹಾಲಯದ ನೂತನ ಕಟ್ಟಡವನ್ನು ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ಉದ್ಘಾಟಿಸಿದರು.

New premises of 'Snehalaya' inaugurated-1ನಂತರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಕುಂತಲಾ ಶೆಟ್ಟಿ ಮನುಷ್ಯರಲ್ಲಿ ಮಾನವೀಯತೆ ಬೆಳೆಯಬೇಕು. ಕೇವಲ ಹಣಗಳಿಸುವ, ಸ್ವಾರ್ಥ ಮನಸ್ಸಿನಿಂದ ದೂರ ಇದ್ದು ದೀನ ದಲಿತರ ಸೇವೆಗೆ ಮುಂದಾಗಬೇಕು . ಈ ನಿಟ್ಟಿನಲ್ಲಿ ಜೋಸೆಫ್ ಕ್ರಾಸ್ತ ರವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಮಂಗಳೂರು ಧರ್ಮಪ್ರಾ೦ತ್ಯದ ಧರ್ಮಾಧ್ಯಕ್ಷ  ವ೦.ಡಾ. ಅಲೋಶಿಯಸ್  ಪಾವ್ಲ್  ಡಿಸೋಜ ಆಶೀರ್ವಚನ ನೀಡಿದರು. ಮಾನವ ಸಮಾಜಕ್ಕೆ ಏನು ನೀಡುತ್ತಾನೆ ಎಂಬುದು ಮುಖ್ಯ. ಸಮಾಜದಲ್ಲಿ ಇಂದು ಸಾಕಷ್ಟು ಮಂದಿ ಹಲವು ಸಮಸ್ಯೆಗಳಿಂದ ನಲುಗುತ್ತಿದ್ದಾರೆ. ಇವರ ಸಂಕಷ್ಟಗಳನ್ನು ಕೇಳುವವರಿಲ್ಲದಂತಾಗಿದೆ. ಇವರಿಗೆ ನಾವು ಬೆಳಕಾಗಬೇಕು ಎಂದರು.   

ಸಮಾರಂಭದಲ್ಲಿ ಕಾಸರಗೋಡು ವಲಯದ ವಿಕಾರ್ ವಾರ್ ಹಾಗೂ ಬೇಳ ಶೋಕ ಮಾತಾ ದೇವಾಲಯದ ಧರ್ಮಗುರು ವಂ.ವಿನ್ಸೆಂಟ್ ಡಿಸೋಜ, ಪಕ್ಷಿಕೆರೆ ಚರ್ಚ್ ಧರ್ಮಗುರು ವಂ.ಆಂಡ್ರೂ ಲಿಯೋ ಡಿಸೋಜ, ಪಾವೂರು ಚರ್ಚ್ ಧರ್ಮಗುರು ವಂ.ಅಲೋಶಿಯಸ್, ತಲಪ್ಪಾಡಿ  ಚರ್ಚ್ ಧರ್ಮಗುರು ವಂ.ನೆಲ್ಸನ್ ಒಲಿವರ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ರೋಯ್ ಕ್ಯಾಸ್ಟಾಲಿನೋ, ಮಂಗಳೂರು ಮೇಯರ್ ಜೆಸಿಂತಾ ಆಲ್ಫ್ರೆಡ್ ಲೋಬೋ, ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆಯ ಅಧ್ಯಕ್ಷ ಕೃಷ ಶಿವ ಕ್ರಪಾ, ಟಾಲೆಂಟ್ ರಿಸರ್ಚ್ ಫೌ೦ಡೇಶನ್ ನ ಅಬ್ದುಲ್ ರೌಫ್ ಪುತ್ತಿಗೆ, ಯು.ಕೆ ಗ್ರೂಫ್ ಅಧ್ಯಕ್ಷ ಯು.ಕೆ ಯುಸೂಫ್, ತುಳುನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ, ಸ್ನೇಹಾಲಯದ ಸ್ಥಾಪಕ ಹಾಗೂ ಮ್ಯಾನೆಜಿಂಗ್ ಟ್ರಸ್ಟಿ ಜೋಸೆಫ್ ಕ್ರಾಸ್ತ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸ್ನೇಹಾಲಯಕ್ಕೆ ಹಲವು ರೀತಿಯಿಂದ ನೆರವಾಗುತ್ತಿರುವ ಮಂಗಳೂರಿನ ರಹಮುತುಲ್ಲ, ಅಬ್ದುಲ್ ರೌಫ಼್ ಪುತ್ತಿಗೆ, ಮೇಜರ್ ಸ್ಟ್ಯಾನಿ ಮ್ಯಾಥ್ಯೂ ರವರನ್ನು ಸನ್ಮಾನಿಸಲಾಯಿತು. ಸ್ನೇಹಾಲಯದ ವತಿಯಿಂದ ಮಂಗಳೂರು ಬಿಷಪ್ ರವರನ್ನು  ವಂ.ವಿನ್ಸೆಂಟ್ ಡಿಸೋಜಾರವರು ಸನ್ಮಾನಿಸಿದರು.

See also  ಕೃಷಿಕರೇ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸುವವರು: ರಾಜೇಂದ್ರ ಕುಮಾರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು