ಕಾರ್ಕಳ: ನವಂಬರ್ 3ರ ರಾತ್ರಿ ವೇಳೆಗೆ ಕಾರ್ಕಳ ಪೇಟೆಯ ಅಂಗಡಿಯೊಂದರಲ್ಲಿ ಕುಕ್ಕುಂದೂರು ಜಯಂತಿ ನಗರದ ರಾಘವೇಂದ್ರ ಮೊಯಿಲಿ ಎಂಬವರು ಸಾಮಾನು ಖರೀದಿಸುತ್ತಿದ್ದ ಸಮಯದಲ್ಲಿ ಅದೇ ಅಂಗಡಿಯಲ್ಲಿ ಕಾರ್ಕಳ ನಗರ ಠಾಣಾ ಕಾನೂನು ಮತ್ತು ಸುವ್ಯವಸ್ಥೆ ಪಿಎಸ್ಐ ಇವರ ಪತ್ನಿ ಕೂಡಾ ಸಾಮಾನು ಖರೀದಿಸಲು ಬಂದಿದ್ದು ಆ ಸಮಯ ರಾಘವೇಂದ್ರ ಇವರ ಕೈ ಪಿಎಸ್ಐ ಅವರ ಪತ್ನಿಗೆ ತಾಕಿದ್ದು ಎಂಬ ಕಾರಣಕ್ಕಾಗಿ ಸ್ಥಳದಲ್ಲಿಯೇ ರಾಘವೇಂದ್ರನಿಗೆ ಗದರಿಸಿದಲ್ಲದೇ ಹೊಡೆದಿರುತ್ತಾರೆ.
ಘಟನೆಯಲ್ಲಿ ಗಾಯಗೊಂಡ ರಾಘವೇಂದ್ರ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಿಂದ ಬಂದ ಮಾಹಿತಿ ಪ್ರಕಾರ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಪ್ರಕರಣದ ತನಿಖೆಯನ್ನು ಕಾರ್ಕಳ ಎಎಸ್ಪಿ ಡಾ. ಸುಮನ್ ನಡೆಸಿದ್ದು ಕಾನೂನು ಮತ್ತು ಸುವ್ಯವಸ್ಥೆ ಪಿಎಸ್ಐ ಇಮ್ರಾನ್ ಇವರ ದುರ್ನಡತೆ ಬಗ್ಗೆ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ತಿಳಿಸಿರುತ್ತಾರೆ.