ಕಾಸರಗೋಡು: ದುಬೈಯಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಕಾಸರಗೋಡು ನಿವಾಸಿಯೋರ್ವರು ಮೃತಪಟ್ಟ ಬಗ್ಗೆ ಮನೆಯವರಿಗೆ ಮಾಹಿತಿ ಲಭಿಸಿದೆ.
ತಳಂಗರೆ ಪಟೇಲ್ ರಸ್ತೆಯ ರಿಸಾನ್ (36) ಮೃತಪಟ್ಟವರು. ರಿಸಾನ್ ಕುಟುಂಬ ಸಹಿತ ಶಾರ್ಜಾದಲ್ಲಿ ನೆಲೆಸಿದ್ದಾರೆ. ಬರ್ದುಬಾಯಿಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದರು . ದುಬೈ – ಶಾರ್ಜಾ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ರಿಸಾನ್ ಮೃತಪಟ್ಟಿರುವುದಾಗಿ ಮನೆಯರಿಗೆ ಮಾಹಿತಿ ಲಭಿಸಿದೆ. ಮೃತದೇಹ ವನ್ನು ಊರಿಗೆ ತರುವ ಸಿದ್ದತೆ ನಡೆಯುತ್ತಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.