ಮೂಡುಬಿದಿರೆ: ಇಲ್ಲಿನ ಪುರಸಭಾ ವ್ಯಾಪ್ತಿಯ ಪ್ರಾಂತ್ಯ ಎಂಬಲ್ಲಿ ದುಷ್ಕರ್ಮಿಗಳು ಮೂಡುಬಿದರೆ ಉದ್ಯಮಿಯೊರ್ವರ ಸಿಬ್ಬಂದಿಗಳನ್ನು ಮಾರಕಾಯುಧಗಳಿಂದ ಹಲ್ಲೆಗೈದು ಸುಮಾರು 5 ಲಕ್ಷ ನಗದು ದೋಚಿ ಪರಾರಿಯಾದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಕೋಟೆಬಾಗಿಲು ನಿವಾಸಿಗಳಾದ ಚಂದ್ರಶೇಖರ್(60) ಹಾಗೂ ಪ್ರಾಣೇಶ್(35) ಹಲ್ಲೆಗೊಂಡು ಗಂಭೀರ ಗಾಯಗೊಳಗಾದವರು. ಇವರು ಪಾರ್ಕರ್ ಸಾಹೇಬ್ ಎಂಬವರ ವ್ಯಾಪಾರ ಮಳಿಗೆಯಲ್ಲಿ ಸಿಬ್ಬಂದಿಗಳಾಗಿ ದುಡಿಯುತ್ತಿದ್ದು, ಸೋಮವಾರ ರಾತ್ರಿ ಅಂಗಡಿ ಬೀಗ ಹಾಕಿ, 5 ಲಕ್ಷ ನಗದಿನೊಂದಿಗೆ ದ್ವಿಚಕ್ರ ವಾಹನದಲ್ಲಿ ಮಾಲೀಕರ ಮನೆಗೆ ತೆರಳುತ್ತಿದ್ದರು. ಕಾರಿನಲ್ಲಿ ಹಿಂಬಾಲಿಸಿಕೊಂಡ ಬಂದ ದುಷ್ಕರ್ಮಿಗಳು, ಕಾರನ್ನು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಚಂದ್ರಶೇಖರ್ ಮತ್ತು ಪ್ರಾಣೇಶ್ ಬೈಕ್ ನಿಂದ ಬಿದ್ದು ಕೆಳಕುರುಳಿದ್ದಾರೆ. ದರೋಡೆಕೋರರು ಮಾರಕಾಯುಧಗಳಿಂದ ಇಬ್ಬರ ಮೇಲೆ ಹಲ್ಲೆ ನಡೆಸಿ, ಅವರ ಬಳಿಯಿದ್ದ 5 ಲಕ್ಷಗಳನ್ನು ದೋಚಿದ್ದಾರೆ ಎನ್ನಲಾಗಿದೆ. ಗಂಭೀರ ಗಾಯಗೊಂಡ ಇಬ್ಬರನ್ನು ಮಂಗಳೂರಿನ ಖಾಸಗಿ ಆಸ್ಪತ್ರಗೆ ದಾಖಲಿಸಿದರು.
ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.