News Kannada
Thursday, July 07 2022

ಕರಾವಳಿ

ಕೊಲೆ ಪ್ರಕರಣದ ಆರೋಪಿ ತಂಡದಿಂದ ದಾಂದಲೆ: ಪೊಲೀಸರಿಗೆ ಗಾಯ - 1 min read

Photo Credit :

ಕೊಲೆ ಪ್ರಕರಣದ ಆರೋಪಿ ತಂಡದಿಂದ ದಾಂದಲೆ: ಪೊಲೀಸರಿಗೆ ಗಾಯ

ಕಾಸರಗೋಡು: ಕಸ್ಟಡಿಗೆ ತೆಗೆದ ಯುವಕನನ್ನು ಬಿಡುಗಡೆಗೊಳಿಸಲು ಕೊಲೆ ಪ್ರಕರಣದ ಆರೋಪಿಯ ನೇತೃತ್ವದ ತಂಡದಿಂದ ಕಾಸರಗೋಡು ಪೊಲೀಸ್ ಠಾಣೆಯಲ್ಲಿ ದಾಂದಲೆ ನಡೆಸಿದ ಘಟನೆ ನಡೆದಿದ್ದು, ಎಸ್.ಐ ಸೇರಿದಂತೆ ಮೂವರು ಪೊಲೀಸರು ಗಾಯಗೊಂಡಿದ್ದಾರೆ.

ಘಟನೆಗೆ ಸಮಬಂಧ ಪಟ್ಟಂತೆ ಅಜಯ್ ಕುಮಾರ್ ಶೆಟ್ಟಿ (24) ಮತ್ತು ಪ್ರಶಾಂತ್ ( 21 ) ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಪಟ್ಟ೦ತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.  ನಗರ ಹೊರವಲಯದ ಮೀಪುಗಿರಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿ ದಾಂದಲೆ ನಡೆಸಿದ  ಮನ್ನಿಪ್ಪಾಡಿಯ ಅಜಯ್ ಕುಮಾರ್ ಶೆಟ್ಟಿ (24) ಎಂಬಾತನನ್ನು  ನಗರ ಠಾಣಾ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರು. ಅಜಯ್ ಕುಮಾರ್ ನನ್ನು ಬಿಡುಗಡೆ ಗೊಳಿಸುವಂತೆ ಮನ್ನಿಪ್ಪಾಡಿಯ ಪ್ರಶಾಂತ್, ಗಣೇಶ್ ಮತ್ತು   ವಿಜೇಶ್  ನೇತ್ರತ್ವದ ತಂಡವು  ಪೊಲೀಸ್ ಟಾನೆ ಗೆ ತಲುಪಿ ಪೊಲೀಸರ ಜೊತೆ ವಾಗ್ಯುದ್ದ ಗಳಿಗೆ ತೊಡಗಿ ಪೋಲಿಸರ ಮೇಲೆ ಹಲ್ಲೆ ನಡೆಸಿದ್ದು , ಬಳಿಕ   ಪೀಟೋಪಕರಣ ಹಾಗೂ ಕಡತಗಳನ್ನು ಎಸೆದರು.

ಇದನ್ನು ತಡೆಯಲೆತ್ನಿಸಿದ ಸಬ್ ಇನ್ಸ್ ಪೆಕ್ಟರ್   ಅಜಿತ್ ಕುಮಾರ್ , ಕಾನ್ಸ್ ಟೇಬಲ್  ಬಾಬು , ಸುರೇಶ್ ಗಾಯಗೊಂಡರು. ಬಳಿಕ ಇಬ್ಬರನ್ನು ಪೊಲೀಸರು ಬಂಧಿಸಿದರು. ಪ್ರಶಾಂತ್  ತಳಂಗರೆಯ ನುಸ್ರತ್ ನಗರದ  ಆಬಿದ್ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಪ್ರಶಾಂತ್ ನೇತೃತ್ವದ ತಂಡವು  ಠಾಣೆಗೆ  ತಲುಪಿದಾಗ ಪೊಲೀಸರ ಸಂಖ್ಯೆ  ಕಡಿಮೆಯಿತ್ತು  ಎನ್ನಲಾಗಿದೆ. ಹೊರಗಡೆ ತೆರಳಿದ್ದ ಪೊಲೀಸರು ಸುದ್ದಿ ತಿಳಿದು ಸ್ಥಳಕ್ಕಾಗಮಿಸಿ   ಪ್ರಶಾಂತ್  ನನ್ನು ಬಂಧಿಸಿದರು. ಜೊತೆಗಿದ್ದ ವಿಜೇಶ್ ಮತ್ತು ಗಣೇಶ್  ಪರಾರಿಯಾಗಿದ್ದಾರೆ.

ಪೊಲೀಸ್ ಠಾಣೆಗೆ  ನುಗ್ಗಿ ದಾಂದಲೆ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ  ಬಗ್ಗೆ ಇವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  

See also  ಗಾಳಿಮಳೆಗೆ ಧರೆಗುರುಳಿದ ಮರಗಳು: ವಾಹನ ಸಂಚಾರ ಅಸ್ತವ್ಯಸ್ತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು