ಕಾಸರಗೋಡು: ಇಲ್ಲಿನ ಹೊಸಂಗಡಿ ಸಮೀಪದ ವಾಮಂಜೂರು ಚೆಕ್ ಪೋಸ್ಟ್ ಬಳಿ ಕಾರೊಂದು ಟ್ಯಾಂಕರ್ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ದಂಪತಿ ಸಾವನ್ನಪ್ಪಿದ್ದಾರೆ.
ಕಾರು ಮಂಗಳೂರಿನಿಂದ ಬಂದ್ಯೋಡಿಗೆ ತೆರಳುತ್ತಿದ್ದ ಸಂದರ್ಭ ಚೆಕ್ ಪೋಸ್ಟ್ ಬಳಿ ತಲುಪುತ್ತಿದ್ದಂತೆ ಕಾರು ಟ್ಯಾಂಕರ್ ಹಿಂಬದಿಗೆ ಡಿಕ್ಕಿ ಹೊಡೆಯಿತು. ಘಟನೆಯಲ್ಲಿ ಬಂದ್ಯೋಡು ಹೇರೂರು ನಿವಾಸಿ ಉಮೇಶ್(65) ಪತ್ನಿ ಶಾರದಾ(62) ಮೃತಪಟ್ಟವರು. ಶೋಭಾ(19), ಸಂಗಿತಾ(6) ಹಾಗೂ ಮನ್ವಿತಾ(3) ಗಾಯಗೊಂಡಿದ್ದಾರೆ.