ಮಂಗಳೂರು: ಕೊಲೆ ಬೆದರಿಕೆಯ ಆರೋಪದ ಹಿನ್ನೆಲೆಯಲ್ಲಿ ಬಹುಭಾಷಾ ನಟ ವಿನೋದ್ ಆಳ್ವಾ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಿನೋದ್ ಆಳ್ವಾ ಅವರ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಸಚ್ಚಿದಾನಂದ ಅವರ ಮೇಲೆ ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದು, ಅಲ್ಲದೇ ವಿನೋದ್ ಆಳ್ವಾರ ಜೀಪು ಚಾಲಕ ಉದಯ ಚೆಕ್ಕಿತ್ತಾಯ ಎಂಬವರು ಸಚ್ಚಿದಾನಂದ ಎಂಬವರನ್ನು ನಿನ್ನೆ ಬೆಳಗ್ಗೆ ಜೀಪು ಅಪಘಾತ ಮಾಡಿ ಕೊಲ್ಲಲು ಯತ್ನಿಸಿದ್ದಾರೆ ಪುತ್ತೂರು ತಾಲೂಕಿನ ಸಂಪ್ಯಾ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿನೋದ್ ಆಳ್ವಾ ಮತ್ತು ಉದಯ ಚೆಕ್ಕಿತ್ತಾಯರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಚ್ಚಿದಾನಂದ ಅವರ ದೂರಿನನ್ವಯ ಸಂಪ್ಯಾ ಠಾಣೆಯ ಪೊಲೀಸರು ನಟ ವಿನೋದ್ ಆಳ್ವಾ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.