ಬಂಟ್ವಾಳ: ನಾವೂರು ಹಳೆಗೇಟು ಬಳಿ ರಾತ್ರಿ ಅಮಾಯಕ ಯುವಕ ಹರೀಶ್ ಪೂಜಾರಿಯ ಹತ್ಯೆ ಮಾಡಿರುವುದು ಕ್ರೂರ ಹಾಗೂ ಸಹಿಸಲಸಾಧ್ಯವಾಗದ ಉಗ್ರಕೃತ್ಯ ಹಾಗೂ ಕೊಲೆ ಮಾಡಿದ ದುಷ್ಕರ್ಮಿಗಳನ್ನು ಶೀಘ್ರದಲ್ಲಿ ಬಂಧಿಸಿ ಉಗ್ರ ಶಿಕ್ಷೆಗೆ ಗುರಿಪಡಿಸಬೇಕೆಂದು ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ರಾಜೇಶ್ ಸುವರ್ಣ ತಿಳಿಸಿದ್ದಾರೆ.
ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಸುಮಾರು 40 ಸದಸ್ಯರು ಮೃತ ಹರೀಶ್ ಪೂಜಾರಿ ಮನೆಗೆ ತೆರಳಿ ಸಾಂತ್ವನ ಹೇಳಿ ಯುವವಾಹಿನಿ ಬಂಟ್ವಾಳ ಹಾಗೂ ಘಟಕದ ವತಿಯಿಂದ ರೂ.20,000/- ಸಹಾಯಧನ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿಯ ಅಧ್ಯಕ್ಷ ರಾಜೇಶ್ ಸುವರ್ಣ, ಕಾರ್ಯದರ್ಶಿ ಸುಲತಾ, ಜತೆ ಕಾರ್ಯದರ್ಶಿ ಕಿರಣ್ ಪೂಂಜೆರೆಕೋಡಿ, ಕೋಶಾಧಿಕಾರಿ ಹರೀಶ್ ಕೋಟ್ಯಾನ್ ಕುದನೆಸಲಹೆಗಾರರಾದ ಬಿ.ತಮ್ಮಯ, ಮಾಜಿ ಅಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕ, ರಾಜೇಸ್ ಮೆಸ್ಕಾಂ, ಯೋಗೀಶ್ ಪೂಜಾರಿ ಮೆಸ್ಕಾಂ, ಸದಸ್ಯರಾದ ವೀರಪ್ಪ ಎಸ್. ಪೂಜಾರಿ, ಸುಂದರ ಪೂಜಾರಿ ಮೆಲ್ಕಾರ್, ಸುನಿಲ್ ಕಾಯರ್ ಮಾರ್, ಜಗದೀಶ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.