News Kannada
Wednesday, July 06 2022

ಕರಾವಳಿ

ಕಾರು-ಟ್ಯಾಂಕರ್ ಅಪಘಾತ: ಬಾಲಕಿ ಸಾವು - 1 min read

Photo Credit :

ಕಾರು-ಟ್ಯಾಂಕರ್ ಅಪಘಾತ: ಬಾಲಕಿ ಸಾವು

ಕಾಸರಗೋಡು: ಆದಿತ್ಯವಾರ ಮಂಜೇಶ್ವರ ಹೊಸಂಗಡಿಯಲ್ಲಿ ಸಂಭವಿಸಿದ ಕಾರು-ಟ್ಯಾಂಕರ್ ನಡುವಿನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಮೃತಪಟ್ಟಿದ್ದಾಳೆ. ಇದರಿಂದ ಈ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆರಿದೆ.

Two dead, five injured in road mishap in Kasaragod-1ಮೃತಪಟ್ಟವಳನ್ನು ಬಂದ್ಯೋಡು ಹೇರೂರಿನ ಸಂಗೀತ (8) ಎಂದು ಗುರುತಿಸಲಾಗಿದೆ. ಈಕೆ ಕಯ್ಯಾರು ಡೋನ್ ಬಾಸ್ಕೋ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಅಪಘಾತದಲ್ಲಿ ಸಂಗೀತಾಳ  ತಂದೆ  ಚಿದಾನಂದ ಮಯ್ಯ (44), ಸಂಗೀತಾಳ  ಸಹೋದರಿ  ಮನ್ವಿತ (4) , ಸಂಬಂಧಿಕೆ ಪಾರ್ವತಿ (60) ಮತ್ತು ಶೋಭಾ ( 25) ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಂಭೀರ ಗಾಯಗೊಂಡಿದ್ದ ಸಂಗೀತ ಇಂದು ಬೆಳಿಗ್ಗೆ  ಕೊನೆಯುಸಿರೆಳೆದರು. ಆದಿತ್ಯವಾರದಂದು ಹೊಸಂಗಡಿ ಚೆಕ್ ಪೋಸ್ಟ್ ಬಳಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಕಾರಿನಲ್ಲಿದ್ದ ಬಂದ್ಯೋಡು ಹೇರೂರಿನ ಉಮೇಶ್ ಮಯ್ಯ (68) ಮತ್ತು ಪತ್ನಿ ಶಾರದಾ ( 65) ಮೃತಪಟ್ಟಿದ್ದರು .

ಸುರತ್ಕಲ್ ನಲ್ಲಿ  ಸಂಬಂಧಿಕರೊಬ್ಬರ  ಗೃಹ ಪ್ರವೇಶದಲ್ಲಿ ಪಾಲ್ಗೊಂಡು ಮರಳುತ್ತಿದ್ದಾಗ ಹೊಸಂಗಡಿ ಚೆಕ್ ಪೋಸ್ಟ್ ಬಳಿ ನಿಲುಗಡೆಗೊಳಿಸಲಾಗಿದ್ದ ಟ್ಯಾಂಕರ್ ಲಾರಿಗೆ ಕಾರು ಡಿಕ್ಕಿಹೊಡೆದು ಅಪಘಾತ ಸಂಭವಿಸಿತ್ತು.

See also  ಕಲ್ಲಡ್ಕಕ್ಕೆ ಸಚಿವ ಕೋಟ ಭೇಟಿ, ಡಾ. ಭಟ್ ಜೊತೆ ಮಾತುಕತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು