ಕಾರ್ಕಳ: ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯ ಕೆದಿಂಜೆ ಗೇರುಬೀಜ ಫ್ಯಾಕ್ಟರಿ ಸಮೀಪದಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಕಾರುಗಳೆರಡು ಜಖಂಗೊಂಡಿದೆ.
ಕಾರ್ಕಳದಿಂದ ಪಡುಬಿದ್ರಿ ಕಡೆಗೆ ಪ್ರಖ್ಯಾತರಾವ್ ಎಂಬವರು ಕಾರೊಂದನ್ನು ಅತೀ ವೇಗ ಹಾಗೂ ನಿರ್ಲಕ್ಷಯ ರೀತಿಯಲ್ಲಿ ಚಲಾಯಿಸಿಕೊಂಡು ಕಾರ್ಕಳಕ್ಕೆ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದರು. ಅತೀ ವೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ವಾಹನ ಚಾಲಯಿಸಿ ಘಟನೆಗೆ ಕಾರಣನಾಗಿರುವ ಪ್ರಖ್ಯಾತ ರಾವ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿದೆ.