ಕಾಸರಗೋಡು: ಕರ್ನಾಟಕದಿಂದ ಅಕ್ರಮವಾಗಿ ತಂದು ದಾಸ್ತಾನಿರಿಸಲಾಗಿದ್ದೆ 125 ಲೋಡ್ ಮರಳನ್ನು ಮಂಜೇಶ್ವರ ಕಂದಾಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮಂಜೇಶ್ವರದ ಕೆದಂಬಾಡಿ ಎಂಬಲ್ಲಿನ ಖಾಸಗಿ ವ್ಯಕ್ತಿಯೋರ್ವರ ಹಿತ್ತಿಲಿನಲ್ಲಿ ಮರಳನ್ನು ದಾಸ್ತಾನಿಡಲಾಗಿತ್ತು. ಇಂದು ಬೆಳಿಗ್ಗೆ ದಾಳಿ ನಡೆಸಿ ಮರಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದರ ಮೌಲ್ಯ ಸುಮಾರು 30 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಕರ್ನಾಟಕದಿಂದ ಒಳದಾರಿಯಾಗಿ ಅಕ್ರಮವಾಗಿ ಸಾಗಾಟ ಮಾಡಿ ಈ ಮರಳನ್ನು ದಾಸ್ತಾನಿಡಲಾಗಿತ್ತು. ವಶಪಡಿಸಿಕೊಂಡ ಮರಳಿಗೆ ಪೊಲೀಸರು ಕಾವಲು ಏರ್ಪಡಿಸಿದ್ದಾರೆ.