ಕಾಸರಗೋಡು: ಬದಿಯಡ್ಕದಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿದ್ದು, ಇಬ್ಬರು ಕೆ ಎಸ್ ಆರ್ ಟಿ ಸಿ ಸಿಬಂದಿಗಳನ್ನು ಕಟ್ಟಿ ಹಾಕಿ ಥಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೆಲ ದಿನಗಳ ಹಿಂದೆ ಕಾಸರಗೋಡು ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದಲ್ಲಿ ಪ್ರೇತ ಭಾದೆ ಇದೆ ಎಂದು ಹೋಮ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದ್ದು ಇದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮತ್ತೊಂದು ಘಟನೆ ವಿವಾದಕ್ಕೆ ಸಿಲುಕಿದೆ.
ಸಿಬ್ಬಂದಿಯಿಂದ ಹಣ ವಸೂಲು ಮಾಡಲು ಈ ಕೃತ್ಯ ನಡೆಸಿರುವುದಾಗಿ ಸಂಶಯಿಸಲಾಗಿದೆ. ಸತ್ಕಾರ ಕೂಟವೊಂದಕ್ಕೆ ತಲುಪಿದ್ದ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಮದ್ಯ ನೀಡಿದ ಬಳಿಕ ಕೆ ಎಸ್ ಆರ್ ಟಿ ಸಿ ಸಿಬ್ಬಂದಿಗಳಿಂದ ಹಣ ಕೇಳಿದ್ದಾರೆ ಹಣ ನೀಡದಿದ್ದಾಗ ಇವರ ಮೇಲೆ ಮಾನಭಂಗ ಆರೋಪ ಹೊರಿಸಿ ತಂಡವು ಕಟ್ಟಿ ಹಾಕಿ ಥಳಿಸಿದೆ.
ಪುರುಷರು ಮಾತ್ರವಲ್ಲ ಮಹಿಳೆಯರು ಈ ತಂಡದಲ್ಲಿದ್ದರು. ಈ ದ್ರಶ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಲಾಗಿತ್ತು. ಘಟನೆ ನಡೆದ ಮರುದಿನ ಕೃತ್ಯದಲ್ಲಿ ಶಾಮೀಲಾಗಿದ್ದ ಮಹಿಳೆ ಬದಿಯಡ್ಕ ಪೊಲೀಸ್ ಠಾಣೆಗೆ ಹಾಗೂ ಕೆ ಎಸ್ ಆರ್ ಟಿ ಸಿ ಮುಖ್ಯಸ್ಥರಿಗೂ ದೂರು ನೀಡಿದ್ದರು. ಆದರೆ ಮಾನಹಾನಿ ಭಯದಿಂದ ಸಿಬ್ಬಂದಿಗಳು ಒಂದು ಲಕ್ಷ ರೂ. ನೀಡಿ ಪ್ರಕರಣವನ್ನು ಇತ್ಯರ್ಥಗೊಳಿಸಿದರು.
ಬಳಿಕ ಪ್ರಕರಣವನ್ನು ಹಿಂದಕ್ಕೆ ಪಡೆಯಲಾಗಿತ್ತು. ಆದರೆ ಮುಚ್ಚಿ ಹಾಕಲೆತ್ನಿಸಿದ ಪ್ರಕರಣ ಇದೀಗ ಬಯಲಿಗೆ ಬಂದಿದೆ. ಈ ದೃಶ್ಯ ಇದೀಗ ಬಹಿರಂಗಗೊಂಡಿದೆ. ಕಾಸರಗೋಡು ಕೆ ಎಸ್ ಆರ್ ಟಿ ಸಿ ಡಿಫೋ ದಲ್ಲಿ ನಡೆದ ಹೋಮ ಹಾಗೂ ನೈತಿಕ ಪೊಲೀಸ್ ಗಿರಿ ಒಂದೇ ವಾರದ ಅವಧಿಯಲ್ಲಿ ಹೊರಬರುತ್ತಿದ್ದು , ನೌಕರರ ಸಂಘಟನೆಗಳ ನಡುವಿನ ಭಿನ್ನಾಭಿಪ್ರಾಯ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.