ಕಾಸರಗೋಡು: ಸುಮಾರು 4.9 ಕಿಲೋ ಗಾಂಜಾ ವಶ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿಯನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಸೀತಾ೦ಗೋಳಿ ಚೌಕಾರಿನ ಅಬ್ದುಲ್ ಅಜೀಜ್ (27) ಎಂದು ಗುರುತಿಸಲಾಗಿದೆ. ಇದರಿಂದ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮೂರಕ್ಕೇರಿದೆ. ಸೀತಾ೦ಗೋಳಿ ಎ.ಕೆ.ಜಿ ನಗರದ ಫೈಜಲ್ ಮತ್ತು ಪಟ್ಲದ ಅಬ್ದುಲ್ ರೌಫ಼್ ನನ್ನು ಈ ಹಿಂದೆ ಬಂಧಿಸಲಾಗಿತ್ತು. ಅಜೀಜ್ ಪರಾರಿಯಾಗಿದ್ದನು. ನವಂಬರ್ 29 ರಂದು ರಾತ್ರಿ ಸೀತಾ೦ಗೋಳಿಯಲ್ಲಿ ರಸ್ತೆ ಬದಿ ಸಂಶಯಾಸ್ಪದವಾಗಿ ನಿಲುಗಡೆಗೊಳಿಸಿದ್ದ ಕಾರನ್ನು ತಪಾಸಣೆ ನಡೆಸಿದಾಗ ಭಾರಿ ಪ್ರಮಾಣದ ಗಾಂಜಾ ಪತ್ತೆಯಾಗಿದ್ದು, ಇಬ್ಬರನ್ನು ಬಂಧಿಸಲಾಗಿತ್ತು. ಇಬ್ಬರು ಪರಾರಿಯಾಗಿದ್ದರು . ಪರಾರಿಯಾಗಿರುವ ಸೀತಾ೦ ಗೋಳಿಯ ಶಬೀರ್ ಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.