News Kannada

ಕರಾವಳಿ

ನಿಧಿಗಾಗಿ ಹೊಂಡ ಅಗೆದ ವ್ಯಕ್ತಿಗೆ ಸಿಕ್ಕಿದ್ದು ಬರೀ ನೀರು - 1 min read

ನಿಧಿಗಾಗಿ ಹೊಂಡ ಅಗೆದ ವ್ಯಕ್ತಿಗೆ ಸಿಕ್ಕಿದ್ದು ಬರೀ ನೀರು

ಕಾಸರಗೋಡು: ನಿಧಿ ಇದೆ ಎಂಬ ಜ್ಯೋತಿಷಿಯೊಬ್ಬರ ಮಾತು ನಂಬಿ ಜೆಸಿಬಿ ಯಂತ್ರ ಬಳಸಿ ಹೊಂಡ ಅಗೆದು ಶೋಧ ನಡೆಸಿದ ಘಟನೆಯೊಂದು ಕುಂಬಳೆ ಸಮೀಪದ ಮೊಗ್ರಾಲ್ ನಲ್ಲಿ ಬೆಳಕಿಗೆ ಬಂದಿದೆ.  

ಎರಡು ದಿನಗಳಿಂದ ಇಲ್ಲಿ ಹೊಂಡ  ಅಗೆಯಲಾಗುತ್ತಿದೆ.   ಜ್ಯೋತಿಷಿಯೋರ್ವ  ನಾಂಗಿ  ಸಮುದ್ರ ತೀರದಲ್ಲಿ ನಿಧಿ ಇದೆ ಎಂದು ವ್ಯಕ್ತಿಯೊಬ್ಬರಿಗೆ ತಿಳಿಸಿದ್ದರೆನ್ನಲಾಗಿದೆ. ಇದರಿಂದ ಈ ವ್ಯಕ್ತಿಯೂ ಎರಡು ದಿನಗಳ ಹಿಂದೆ ಸಂಜೆಯಿಂದ ಈ ಸ್ಥಳದಲ್ಲಿ ಜೆಸಿಬಿ ಮೂಲಕ ಸ್ಥಳವನ್ನು ಅಗೆದಿದ್ದು, ಮುಂಜಾನೆ ತನಕ ಮುಂದುವರಿದಿತ್ತು. ಎರಡನೇ ದಿನವೂ ಹಗಲು ರಾತ್ರಿ ಎನ್ನದೆ ಹೊಂಡ ಅಗೆಯುವ ಕಾರ್ಯ ನಡೆಯುತ್ತಿತ್ತು. ಇದರಿಂದ ಸ್ಥಳೀಯರಿಗೂ  ಸಂಶಯ ತಲೆದೋರಿ ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಚಾರಿಸಿದಾಗ  ಕೆರೆಗಾಗಿ  ಹೊಂಡ  ಅಗೆಯುತ್ತಿರುವುದಾಗಿ ಈತ ಹೇಳಿದ್ದನು.

ಕೆಲ ಸಮಯದಿಂದ ಈತ  ಹೊಂಡ ಅಗೆಯುವ ಕಾರ್ಯ ನಡೆಸುತ್ತಿದ್ದ. ಆದರೆ ಯಾವುದೇ ವಸ್ತುಗಳು ಈತನಿಗೆ ಲಭಿಸಲಿಲ್ಲ. ಇದರಿಂದ ಈ ಪ್ರಯತ್ನ ಅಲ್ಲೇ ಬಿಟ್ಟಿದ್ದನು. ಕೆಲ ದಿನಗಳ ಹಿಂದೆ ಮತ್ತೆ ಇಲ್ಲಿ ನಿಧಿಗಾಗಿ ಹೊಂಡ  ಅಗೆಯಲು ಆರಂಭಿಸಿದ್ದನು. ಹಗಲು-ರಾತ್ರಿ ಎನ್ನದೆ  ಜೆಸಿಬಿ ಬಳಸಿ ಹಗಲು-ರಾತ್ರಿ ಅಗೆಯುತ್ತಿರುವುದರಿಂದ ಸ್ಥಳೀಯರು  ಸಂಶಯಗೊಂಡು ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಗ್ರಾಮಾಧಿಕಾರಿಯವರು ಅಗೆಯುವ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಆದೇಶ ನೀಡಿದ್ದಾರೆ.

See also  ಯುವಕನ ಮೇಲೆ ತಲವಾರಿನಿಂದ ಕಡಿದು ಕೊಲೆಯತ್ನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು