ಕಾರ್ಕಳ: ನೆನೆಗುದಿಗೆ ಬಿದ್ದ ತಾಲೂಕು ಸರಕಾರಿ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿಗೆ ಉಡುಪಿ ಜಿಲ್ಲಾಧಿಕಾರಿ ಡಾ.ವಿಶಾಲ್ ರವರ ಮುತುವರ್ಜಿಯಿಂದ ಮರುಚಾಲನೆ ದೊರೆತಿದೆ. ಇದಕ್ಕಾಗಿ ಒಎನ್ ಜಿಸಿ ಕಂಪೆನಿ ಎರಡನೇಯ ಕಂತಿನಲ್ಲಿ 29 ಲಕ್ಷ ರೂ.ಬಿಡುಗಡೆಗೊಳಿಸಿದೆ.
ತಾಲೂಕು ಸರಕಾರಿ ಆಸ್ಪತ್ರೆಯ ನೂತನ ಹೆರಿಗೆ ವಾರ್ಡ್ ವಿಸ್ತರಣೆ ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಒಲವು ತೋರಿಸಿದರು. ಸಾರ್ವಜನಿಕ ಉದ್ಯಮಿಗಳ ಸಾಮಾಜಿಕ ಬದ್ಧತೆಯ ನೆಲೆಯಲ್ಲಿ ಒಎನ್ಜಿಸಿ ಕಂಪೆನಿ ಸಹಯೋಗದಲ್ಲಿ 96.20 ಲಕ್ಷ ರೂ.ಸಹಾಯಧನ ನೀಡುವ ವಾಗ್ದಾನ ನೀಡಿ ಪ್ರಥಮ ಕಂತಿನಲ್ಲಿ 25 ಲಕ್ಷ ರೂ.ಬಿಡುಗಡೆಗೊಂಡಿತ್ತಾದರೂ ನಂತರದ ದಿನಗಳಲ್ಲಿ ಯಾವುದೇ ಹಣಕಾಸು ಬಿಡುಗಡೆಗೊಳ್ಳದೇ ಕಾಮಗಾರಿ ನೆನೆಗುದ್ದಿಗೆ ಬೀಳಲು ಕಾರಣವಾಗಿತ್ತು. ಉಡುಪಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಇರುವಂತಹ ನಿರ್ಮಿತಿ ಕೇಂದ್ರವು ಕಾಮಗಾರಿ ವಹಿಸಿಕೊಂಡಿದೆ. 2015 ಮೇ ತಿಂಗಳ ಅಂತ್ಯದಲ್ಲಿ ಈ ಬಗ್ಗೆ ಮಾಧ್ಯಮ ಸಮಗ್ರ ರೀತಿಯಲ್ಲಿ ವರದಿಯೊಂದನ್ನು ಪ್ರಕಟಿಸಿತ್ತು. ಇದರಿಂದ ಉಡುಪಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಖುದ್ದಾಗಿ ಉಡುಪಿ ಜಿಲ್ಲಾಧಿಕಾರಿ ಹಣಕಾಸು ಬಿಡುಗಡೆ ಮಾಡುವಂತೆ ಕೋರಿ ಒಎನ್ಜಿಸಿಗೆ ಪತ್ರ ವ್ಯವಹಾರ ನಡೆಸಿರುವ ಫಲವಾಗಿ ಎರಡನೇ ಕಂತಿನಲ್ಲಿ 29 ಲಕ್ಷ ಬಿಡುಗಡೆಗೊಳಲು ಕಾರಣವಾಗಿದೆ.
ಸತತ ಆರು ಬಾರಿ ಸೋಲಿಲ್ಲದೇ ಸರದಾನ ಎಂಬ ಹೆಗ್ಗಳಿಕೆಯೊಂದಿಗೆ ಕಾರ್ಕಳದ ಶಾಸಕರಾಗಿ ಯುಪಿಎ ಸರಕಾರದ ಕಾಲಾವಧಿಯಲ್ಲಿ ಕೇಂದ್ರ ಸಚಿವ ಹುದ್ದೆ ಅಲಂಕರಿಸಿದ ಮಾರ್ಪಡಿ ಡಾ. ವೀರಪ್ಪ ಮೊಲಿಯವರ ಕೊಡುಗೆಯಾಗಿ 2013 ಡಿಸೆಂಬರ್ 22ರಂದು ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿತು. ಎರಡನೇ ಹಂತದ ಹಣಕಾಸು ಬಿಡುಗಡೆಯ ಬಳಿಕ ಕಾಮಗಾರಿಯು ಭರದಿಂದ ಸಾಗುತ್ತಿದೆ.
3874 ಚದರಡಿ ವಿಸ್ತಾರದ ಕೆಳ ಅಂತಸ್ತು, 5068 ಚದರಡಿ ಮೊದಲ ಅಂತಸ್ತು ವಿಸ್ತಾರ ಇರುವಂತಹ ಈ ಕಟ್ಟಡದ ಕೆಳ ಅಂತಸ್ತಿನಲ್ಲಿ 15 ಹಾಸಿಗೆಯುಳ್ಳ ಬೆಡ್ ಹಾಲ್, ಶೌಚಾಲಯ ಹಾಗೂ ಸ್ನಾನಗೃಹ ಮೊದಲ ಅಂತಸ್ತಿನಲ್ಲಿ ಜಾಷಧಉಗ್ರಾಣ, ಸಿಬ್ಬಂದಿಗಳ ವಿಶ್ರಾಂತಿಗೃಹ, ರೋಗಿಗಳನ್ನು ಭೇಟಿ ನೀಡುವ ಸಂದರ್ಶಕರ ವಿಶ್ರಾಂತಿಗೃಹ, ಶೌಚಾಲಯ ಹಾಗೂ ಸ್ನಾನಗೃಹ ಒಳಗೊಂಡು ಕಟ್ಟಡ ನಿರ್ಮಾಣದ ಗುರಿ ಹೊಂದಲಾಗಿತ್ತು.