ಕಾರ್ಕಳ: ಅಂತರ್ ಜಿಲ್ಲೆಗಳನ್ನು ಸಂಪರ್ಕಿಸುವ ಕೊಂಡಿಯಾಗಿರುವ ಬಜಗೋಳಿ ಪೇಟೆಯ ಪ್ರಮುಖ ರಸ್ತೆಯನ್ನು ಚತುಷ್ಪಧವನ್ನಾಗಿ ಮಾರ್ಪಡು ಮಾಡಲು ಕರ್ನಾಟಕ ರಾಜ್ಯ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಮುಂದಾಗಿದೆ. ಇದರ ಮುಂದುವರಿದ ಭಾಗವಾಗಿ ಈಗಾಗಲೇ ಮುಡಾರು ಗ್ರಾಮ ಪಂಚಾಯತ್ಗೆ ನೋಟಿಸ್ ಜಾರಿಗೊಳಿಸಿದೆ.
ಬಜಗೋಳಿಯ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಭಾಗದಿಂದ ಹುಕ್ರಟ್ಟೆ ವರೆಗಿನ ಸುಮಾರು 1 ಕಿ.ಮೀ ಉದ್ದದ ಹಾಗೂ 20 ಮೀಟರ್ ಅಗಲದ ಚತುಷ್ಪಧ ರಸ್ತೆ ನಿರ್ಮಾಣಗೊಳಲಿದೆ ಎಂದು ತಿಳಿದುಬಂದಿದೆ.
ಕಳೆದ ಒಂದುವರೆ ತಿಂಗಳ ಹಿಂದೆ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದು ನಡೆಸಿರುವ ಸರ್ವೇ ಕಾರ್ಯ ನಡೆಸಿದೆ. ಮುಡಾರು ಗ್ರಾಮ ಪಂಚಾಯತ್ ಅಧೀನದಲ್ಲಿ ಇರುವಂತಹ ಹಳೆ ಮಾರುಕಟ್ಟೆ ಸಂಕೀರ್ಣವು ಪ್ರಸ್ತುತ ಗುರುತಿಸಿರುವ ರಸ್ತೆಯ 17 ಮೀಟರ್ ಅಂತರದಲ್ಲಿ ಇರುವುದರಿಂದ ಈ ಸಂದರ್ಭದಲ್ಲಿ ಇಲಾಖೆಯು ಮುಡಾರು ಗ್ರಾಮ ಪಂಚಾಯತ್ ಗೆ ನೋಟಿಸ್ ಜಾರಿಗೊಳಿಸಿರಲು ಕಾರಣವಾಗಿದೆ.
ರಾಜ್ಯ ವ್ಯಾಪ್ತಿಯಲ್ಲಿನ ವಿವಿಧ ಪುಣ್ಯ ಕ್ಷೇತ್ರಗಳನ್ನು ಸಂಪರ್ಕಿಸುವ ರಸ್ತೆಗಳನ್ನು ರಾಜ್ಯದ ಲೋಕೋಪಯೋಗಿ ಬಂದರು ಮತ್ತು ಒಳವಾಡು ಜಲಸಾರಿಗೆ ಇಲಾಕೆಯು ಎಸ್ ಎಚ್ ಡಿಪಿ ಯೋಜನೆಯಡಿ ಈ ಯೋಜನೆಯನ್ನು ಅನುಷ್ಠಾನಕ್ಕೆ ಚಿಂತನೆ ನಡೆಸಿದೆ. ಇದಕ್ಕೆ ಪೂರಕವಾಗಿ ಈದು ಕ್ರಾಸ್ ನಿಂದ ಹುಕ್ರಟ್ಟೆ ತಿರುವಿನವರೆಗೆ ಡಾಂಬರೀಕರಣ ಹಾಗೂ ತಿರುವು ಮುರುವಿನ ರಸ್ತೆಯನ್ನು ನೇರ ಸಂಪರ್ಕಗೊಳಿಸುವುದು. ಹೀಗಾಗಲೇ ಪಾಜಿಗುಡ್ಡೆ ಅಪಾಯಕಾರಿ ರಸ್ತೆಯ ಒಂದು ಪಾಶ್ರ್ವದಲ್ಲಿ ಇರುವಂತಹ ಗುಡ್ಡೆಯನ್ನು ತೆರವು ಕಾರ್ಯ ಭರದಿಂದ ಸಾಗುತ್ತಿದೆ.
ಪೇಟೆಯ ವ್ಯಾಪಾರ ಮಳೆಗೆಗಳಿಂದ ಅತೀ ಹೆಚ್ಚು ಅದಾಯ ಮುಡಾರು ಗ್ರಾಮ ಪಂಚಾಯತ್ ಗೆ ಕ್ರೋಡಿಕರಣೆಯಾಗುತ್ತಿದೆ. ಪೇಟೆಯ ಮಧ್ಯೆ ಭಾಗದಲ್ಲಿ ಇರುವಂತಹ ಪಾಳುಬಿದ್ದ ಮಾರುಕಟ್ಟೆಯು ಹಲವು ಸಮಸ್ಯೆಗಳ ಅಗಾರವಾಗಿದ್ದು ಇದು ಮುಡಾರು ಗ್ರಾಮ ಪಂಚಾಯತ್ ಗೆ ಕಪ್ಪು ಚುಕ್ಕಿಯಾಗಿದೆ. ಇದನ್ನು ಮನಗಂಡಿರುವ ನೂತನ ಗ್ರಾಮ ಪಂಚಾಯತ್ ಆಡಳಿತ ವರ್ಗವು ಅಧಿಕಾರ ಗದ್ದುಗೇರಿದ ಸಂದರ್ಭದಲ್ಲಿಯೇ ನೂತನ ಮಾರುಕಟ್ಟೆ ನಿರ್ಮಾಣದ ಬಗ್ಗೆ ಒಲವು ತೋರಿಸಿ ನಕ್ಷೆ ಸಿದ್ಧಪಡಿಸಲು ಮುಂದಾಗಿತ್ತು. ಈ ನಡುವೆ ಬಜಗೋಳಿ ಪೇಟೆ ಅಗಲೀಕರಣಕ್ಕೆ ತಡೆಯಾಗಿರುವ ಗ್ರಾಮ ಪಂಚಾಯತ್ ಹಳೆ ಮಾರುಕಟ್ಟೆ ಸಂಕಿರ್ಣವು ಕೇವಲ 17 ಮೀಟರ್ ಅಂತರದಲ್ಲಿ ಇರುವುದರಿಂದ ಅದರ ತೆರವುಗೊಳಿಸಲು ಗ್ರಾಮ ಪಂಚಾಯತ್ ಮುಂದಾಗಲೇ ಬೇಕು. ಆ ಮೂಲಕ ನೂತನ ಬಹು ಮಹಡಿ ಮಾರುಕಟ್ಟೆ ಅಸ್ವತ್ತವಾಗಲಿದೆ. ಮಾತ್ರವಲ್ಲದೇ ಚತುಷ್ಪಧ ರಸ್ತೆಯ ಇಕ್ಕೆಲೆಗಳಲ್ಲಿ ನೂತನ ಸಂಕೀರ್ಣಗಳು ತಲೆ ಎತ್ತುವ ಮೂಲಕ ಮುಡಾರು ಗ್ರಾಮ ಪಂಚಾಯತ್ ಗೆ ಶುಕ್ರದೆಸೆ ಕಾಣಲಿದೆ.