ಕಾರ್ಕಳ: ಶಿಕ್ಷಣ ಮಟ್ಟದ ಅಭಿವೃದ್ಧಿಯೊಂದಿಗೆ ವಿದ್ಯಾರ್ಥಿಗಳನ್ನು ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಸಮರ್ಥರನ್ನಾಗಿ ಮಾಡುವ ನಿಟ್ಟಿನಿಂದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯವು ಜಪಾನ್ ನ ರಿತ್ಸುಮೇಯ್ಕಿನ್ ವಿಶ್ವವಿದ್ಯಾಲಯದೊಂದಿಗೆ ಶೈಕ್ಷಣಿಕ ವಿನಿಮಯ ಒಪ್ಪಂದ ಮಾಡಿಕೊಂಡಿದ್ದು ಈ ನಿಟ್ಟಿನಲ್ಲಿ ತಾಂತ್ರಿಕ ಮಹಾವಿದ್ಯಾಲಯದ 2 ಉಪನ್ಯಾಸಕರು ಹಾಗೂ 9 ವಿದ್ಯಾರ್ಥಿಗಳನ್ನೊಳಗೊಂಡ 11 ಜನರ ತಂಡವು ಡಿಸೆಂಬರ್ 14 ರಿಂದ 22 ರವರೆಗೆ ಜಪಾನ್ ನ ರಿತ್ಸುಮೇಯ್ಕಿನ್ ವಿಶ್ವವಿದ್ಯಾಲಯದಲ್ಲಿ ನಡೆಯುವ ಸಕುರ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ.
ಜಪಾನ್ ವಿಜ್ಙಾನ ಮತ್ತು ತಂತ್ರಜ್ಞಾನ ಸಂಸ್ಥೆ (ಜೆಎಸ್ಟಿ) ಈ ಉಚಿತ ವಿದ್ಯಾರ್ಥಿ ವಿಚಾರವಿನಿಮಯ ಕಾರ್ಯಕ್ರಮವನ್ನು ಪ್ರಾಯೋಜಿಸುತ್ತಿದ್ದು ಸ್ನಾತಕ, ಸ್ನಾತಕೋತ್ತರ ಹಾಗೂ ಪಿ.ಎಚ್.ಡಿ ವಿದ್ಯಾರ್ಥಿಗಳಿಗೆ ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ.
ಎನ್.ಎಂ.ಎ.ಎಂ.ಐ.ಟಿಯ ಬಯೋಟೆಕ್ನಾಲಜಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ.ಅನಿಲ್ ಕುಮಾರ್, ಸಿವಿಲ್ ಎಂಜಿನಿಯರಿಂಗ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಶ್ರೀಧರ ಟಿ.ಎನ್, ಸಿವಿಲ್ ಎಂಜಿನಿಯರಿಂಗ್ ಬಿ.ಇ ವಿಭಾಗದ ವಿದ್ಯಾರ್ಥಿಗಳಾದ ಧನುಶ್ ಕುಮಾರ್, ರಾಹುಲ್ ಎನ್.ಕೆ, ವೀಕ್ಷಿತ್ ಕುಮಾರ್ ರೈ, ಅಂಕಿತ ಶ್ಯಾನ್ಭೋಗ್, ಸದ್ಗುಣ ಶೆಟ್ಟಿ ಹಾಗೂ ಬಯೋಟೆಕ್ನಾಲಜಿ ವಿಭಾಗದ ಎಂ.ಟೆಕ್ ವಿದ್ಯಾರ್ಥಿ ಶ್ರೀಶ ರಾವ್, ಬಯೋಟೆಕ್ನಾಲಜಿ ವಿಭಾಗದ ಬಿ.ಇ ವಿದ್ಯಾರ್ಥಿಗಳಾದ ಗಂಗಾ ಗಮನ, ಜೇನ್ ಮೌರೀನ್.ಜೆ, ರಾಗಿಣಿ ಅಶೋಕ್.ಎನ್ ನಿಟ್ಟೆ ತಾಂತ್ರಿಕ ವಿದ್ಯಾಲಯವನ್ನು ಪ್ರತಿನಿಧಿಸಲಿರುವರು.
ಈ ಕಾರ್ಯಕ್ರಮವು ತಂತ್ರಜ್ಞಾನ ಬೆಳವಣಿಗೆ, ಸಂಶೋಧನಾ ಚಟುವಟಿಕೆ ಹಾಗೂ ವೃತ್ತಿಪರ ಅನುಭವವನ್ನು ಹೆಚ್ಚಿಸುವಲ್ಲಿ ಒಂದು ಮಹತ್ವವಾದ ಹೆಜ್ಜೆಯಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ಡಾ.ನಿರಂಜನ ಚಿಪಳೂಣಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.